ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೋಂಡಾ ಸೂಪರ್ ಬೈಕ್ ಸಿಬಿಆರ್ 650 ಎಫ್

ಸೂಪರ್ ಬೈಕ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಸಿಬಿಆರ್ 650 ಎಫ್ ಆವೃತ್ತಿಯನ್ನು ಪರಿಚಯಿಸಿದ್ದು, ಬೆಲೆ ಮತ್ತು ತಾಂತ್ರಿಕ ವೈಶಿಷ್ಟ್ಯತೆಗಳ ಮಾಹಿತಿಗಳು ಇಲ್ಲಿದೆ ಓದಿ.

By Praveen

ಸೂಪರ್ ಬೈಕ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಸಿಬಿಆರ್ 650 ಎಫ್ ಆವೃತ್ತಿಯನ್ನು ಪರಿಚಯಿಸಿದ್ದು, ಬೆಲೆ ಮತ್ತು ತಾಂತ್ರಿಕ ವೈಶಿಷ್ಟ್ಯತೆಗಳ ಮಾಹಿತಿಗಳು ಇಲ್ಲಿದೆ ಓದಿ.

ಬಿಡುಗಡೆಯಾದ ಹೋಂಡಾ ಸೂಪರ್ ಬೈಕ್ ಸಿಬಿಆರ್ 650 ಎಫ್

ಈ ಹಿಂದೆ ಪ್ರತಿಷ್ಠಿತ ಇಐಸಿಎಂಎ ಆಟೋ ಮೇಳದಲ್ಲಿ ಸಿಬಿಆರ್ 650 ಎಫ್ ಮಾದರಿಯನ್ನು ಪ್ರದರ್ಶನಗೊಳಿಸಿದ್ದ ಹೋಂಡಾ ಸಂಸ್ಥೆಯು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಬೆಲೆಯನ್ನು ರೂ. 7.30 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ಬಿಡುಗಡೆಯಾದ ಹೋಂಡಾ ಸೂಪರ್ ಬೈಕ್ ಸಿಬಿಆರ್ 650 ಎಫ್

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಸೂಪರ್ ಬೈಕ್‌ಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆ ಬೇಡಿಕೆಯಲ್ಲಿರುವ ಕವಾಸಕಿ ನಿಂಜಾ 650 ಮತ್ತು ಬೆನೆಲ್ಲಿ ಟಿಎನ್‌ಟಿ 600 ಆವೃತ್ತಿಗಳನ್ನು ಹಿಂದಿಕ್ಕಲು ಹೋಂಡಾ ಸಂಸ್ಥೆಯು ಸಿಬಿಆರ್ 650 ಎಫ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಬಿಡುಗಡೆಯಾದ ಹೋಂಡಾ ಸೂಪರ್ ಬೈಕ್ ಸಿಬಿಆರ್ 650 ಎಫ್

ಎಂಜಿನ್ ಸಾಮರ್ಥ್ಯ

ಬಿಎಸ್ 4 ವೈಶಿಷ್ಟ್ಯತೆಗಳನ್ನು ಹೊಂದಿರುವ ಸಿಬಿಆರ್ 650 ಎಫ್ ಆವೃತ್ತಿಯು 648.72 ಸಿಸಿ ನಾಲ್ಕು ಸಿಲಿಂಡರ್ ಎಂಜಿನ್ ಹೊಂದಿದ್ದು, 85.28-ಬಿಎಚ್‌ಪಿ ಮತ್ತು 60.5-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಒದಗಿಸುತ್ತದೆ.

ಬಿಡುಗಡೆಯಾದ ಹೋಂಡಾ ಸೂಪರ್ ಬೈಕ್ ಸಿಬಿಆರ್ 650 ಎಫ್

ಜೊತೆಗೆ 6-ಸ್ಪೀಡ್ ಗೇರ್ ಹೊಂದಿರುವ ಸಿಬಿಆರ್ 650 ಎಫ್, 810 ಎಂಎಂ ಎತ್ತರ, 133 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 17.3 ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಯಾದ ಹೋಂಡಾ ಸೂಪರ್ ಬೈಕ್ ಸಿಬಿಆರ್ 650 ಎಫ್

ಈ ಮೂಲಕ 194 ಟಾಪ್ ಸ್ಪೀಡ್ ಪಡೆದುಕೊಂಡಿರುವ ಹೋಂಡಾ ಸಿಬಿಆರ್ 650 ಎಫ್, ಡ್ಯುಯಲ್ ಬಣ್ಣದ ಜೊತೆಗೆ ಎಬಿಎಸ್, ರೈಡ್ ಬೈ ವೈರ್ ತಂತ್ರಜ್ಞಾನ, ಸುಧಾರಿತ ತಂತ್ರಜ್ಞಾನಗಳ ಮೂಲಕ ಹೊಸ ಬೈಕಿಗೆ ಮತ್ತಷ್ಟು ಬಲ ನೀಡಲಾಗಿದೆ.

ಬಿಡುಗಡೆಯಾದ ಹೋಂಡಾ ಸೂಪರ್ ಬೈಕ್ ಸಿಬಿಆರ್ 650 ಎಫ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದಿನ ಸಿಬಿಆರ್ 650 ಆವೃತ್ತಿಯನ್ನೇ ಉನ್ನತಿಕರಿಸಿರುವ ಹೋಂಡಾ ಸಂಸ್ಥೆಯು ಇದೀಗ ಸಿಬಿಆರ್ 650 ಎಫ್ ಆವೃತ್ತಿಯನ್ನು ಪರಿಚಯಿಸುತ್ತಿದ್ದು, ನಿಂಜಾ 650 ಮತ್ತು ಬೆನೆಲ್ಲಿ ಟಿಎನ್‌ಟಿ 600 ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on ಹೋಂಡಾ honda
English summary
Read in Kannada about 2017 Honda CBR650F Launched In India.
Story first published: Tuesday, October 10, 2017, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X