ತಮಿಳುನಾಡಿನಲ್ಲಿ ಬಿಡುಗಡೆಗೊಂಡ ಹೋಂಡಾ ಕ್ಲಿಕ್ ಸ್ಕೂಟರ್
ಈ ಹಿಂದೆ ಮುಂಬೈ ಮತ್ತು ದೆಹಲಿಯಲ್ಲಿ ಮಾತ್ರ ಬಿಡುಗಡೆಯಾಗಿ ಭರ್ಜರಿಯಾಗಿ ಮಾರಾಟ ಕಾಣುತ್ತಿರುವ ಕ್ಲಿಕ್ ಸ್ಕೂಟರ್ ಇದೀಗ ತಮಿಳುನಾಡಿನಲ್ಲಿ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಬೆಂಗಳೂರಿನಲ್ಲೂ ಬಿಡುಗಡೆಯಾಗುವ ಬಗ್ಗೆ ಸುಳಿವು ನೀಡಿದೆ.
ಈ ಹಿಂದೆ ಮುಂಬೈ ಮತ್ತು ದೆಹಲಿಯಲ್ಲಿ ಮಾತ್ರ ಬಿಡುಗಡೆಯಾಗಿ ಭರ್ಜರಿಯಾಗಿ ಮಾರಾಟ ಕಾಣುತ್ತಿರುವ ಕ್ಲಿಕ್ ಸ್ಕೂಟರ್ ಇದೀಗ ತಮಿಳುನಾಡಿನಲ್ಲಿ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಬೆಂಗಳೂರಿನಲ್ಲೂ ಬಿಡುಗಡೆಯಾಗುವ ಬಗ್ಗೆ ಸುಳಿವು ನೀಡಿದೆ.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ) ಸಂಸ್ಥೆಯು ಕ್ಲಿಕ್ ಹೆಸರಿನ ಹೊಸ ಸ್ಕೂಟರ್ ಒಂದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಸ್ಕೂಟರಿನ ಬೆಲೆಯನ್ನು ರೂ.42,524ಕ್ಕೆ ನಿಗದಿಪಡಿಸಲಾಗಿದೆ.

ಹೋಂಡಾ ಕ್ಲಿಕ್ ಅನನ್ಯವಾಗಿ ವಿನ್ಯಾಸಗೊಳಿಸಲಾದ ಯುಟಿಲಿಟಿ ಸ್ಕೂಟರ್ ಇದಾಗಿದ್ದು, ಸ್ಕೂಟರಿನ ವಿನ್ಯಾಸವು ಪ್ರಸ್ತುತ ಬೇಡಿಕೆಗೆ ಆಧರಿಸಿ ಸಿದ್ಧವಾಗಿದೆ ಎಂದು ಕಂಪನಿ ಹೋಂಡಾ ಸ್ಕೂಟರ್ ವಿಭಾಗ ಹೇಳಿಕೊಂಡಿದೆ.

ಕ್ಲಿಕ್ ಸ್ಕೂಟರ್ ಮಾದರಿಯು ಗ್ರಾಮೀಣ ಭಾಗದ ಗ್ರಾಹಕರನ್ನು ಗುರಿಯಾಗಿಸಿಕೊಂಡು ಉತ್ಪಾದನೆ ಮಾಡಲಾಗಿದ್ದು, ಹೆಚ್ಚು ಬಲಿಷ್ಠವಾಗಿರುವ ಹಿನ್ನೆಲೆ ವಾಣಿಜ್ಯ ಬಳಕೆಗೆಗೂ ಇದು ಉಪಯುಕ್ತವಾಗಲಿದೆ.

ಕ್ಲಿಕ್ ಮುಂಭಾಗದಲ್ಲಿ ದೊಡ್ಡ ಏಪ್ರನ್, ದೊಡ್ಡ ಆಸನ ಮತ್ತು ಆಸನದ ಕೆಳಗಡೆ ಇರುವ ಶೇಖರಣಾ ಸ್ಥಳ ಹೆಚ್ಚು ವಿಶಾಲವಾಗಿದ್ದು, ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.
Recommended Video


ಆಕ್ಟಿವಾ ಸ್ಕೂಟರ್‌ಗೆ ಹೋಲಿಸಿದರೆ ಕಿರಿದಾದ ಸ್ಕೂಟರ್ ಇದಾಗಿದೆ ಮತ್ತು 6 ಕೆ.ಜಿಯಷ್ಟು ಹಗುರವಾಗಿದೆ. ಸ್ಕೂಟರ್ ಹಿಂಭಾಗದಲ್ಲಿ ಕೊಳವೆಯಾಕಾರದ ದೋಣಿ ಹಳಿಗಳನ್ನು ಹೊಂದಿದ್ದು, ಇವು ಕ್ಲಿಕ್ ಸ್ಕೂಟರಿನ ಉಪಯುಕ್ತತೆಯನ್ನು ಆಕರ್ಷಿಸುತ್ತವೆ.

ಹೊಸದಾಗಿ ಬಿಡುಗಡೆಯಾಗಿರುವ ಈ ಕ್ಲಿಕ್ ಸ್ಕೂಟರಿನ ಎತ್ತರ ಕಡಿಮೆ ಇದ್ದು, ಕೇವಲ 743 ಮಿಮಿಗಳಷ್ಟು ಎತ್ತರ ಹೊಂದಿದೆ. ಇದರಿಂದಾಗಿ ಮಹಿಳೆಯರಿಗೂ ಈ ಸ್ಕೂಟರ್‌ನ್ನು ಸವಾರಿ ಮಾಡಲು ಬಹಳಷ್ಟು ಸುಲಭವಾಗಲಿದೆ.

ಕ್ಲಿಕ್ ಸ್ಕೂಟರಿನ ಇಂಧನ ಟ್ಯಾಂಕ್ ಕೇವಲ 3.5-ಲೀಟರ್ ಇಂಧನ ಸಾಮರ್ಥ್ಯ ಹೊಂದಿದ್ದು, ಅದು ಆಕ್ಟಿವಾ ಮತ್ತು ನವಿ ಸ್ಕೂಟರ್‌ಗಳಿಗಿಂತ ಕಡಿಮೆ ಎನ್ನಬಹುದು. ಇದಲ್ಲದೆ, ಕ್ಲಿಕ್ ಸ್ಕೂಟರ್ ಕಾಂಬಿ ಬ್ರೇಕಿಂಗ್ ಸಿಸ್ಟಮ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಟ್ಯೂಬ್‌ಲೆಸ್ ಟೈರುಗಳು ಮತ್ತು ನಿರ್ವಹಣೆ ಮುಕ್ತ ಬ್ಯಾಟರಿ ಹೊಂದಿದೆ.

ಕ್ಲಿಕ್ ಸ್ಕೂಟರ್ 8.94 ಎನ್‌ಎಂ ತಿರುಗುಬಲದಲ್ಲಿ 8.04 ಅಶ್ವಶಕ್ತಿ ಉತ್ಪಾದಿಸುವ 109.19 ಸಿಸಿ ಎಂಜಿನ್ ಹೊಂದಿದೆ ಮತ್ತು ಗರಿಷ್ಠ 83 ಕಿ.ಮೀ ವೇಗವನ್ನು ಪಡೆದುಕೊಂಡಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಈ ಹಿಂದೆ ಜೂನ್ 21ರಂದು ಮುಂಬೈ ಮತ್ತು ದೆಹಲಿಯಲ್ಲಿ ಮಾತ್ರ ಬಿಡುಗಡೆಯಾಗಿದ್ದ ಕ್ಲಿಕ್ ಸ್ಕೂಟರ್ ಇದೀಗ ತಮಿಳುನಾಡು ಮಾರುಕಟ್ಟೆಗೂ ಪ್ರವೇಶಿಸಿದೆ. ಹೀಗಾಗಿ ಮುಂದಿನ ವಾರ ಬೆಂಗಳೂರು ಮತ್ತು ಹೈದ್ರಾಬಾದ್‌ನಲ್ಲೂ ಕ್ಲಿಕ್ ಬಿಡುಗಡೆ ಬಗ್ಗೆ ಹೋಂಡಾ ಸುಳಿವು ನೀಡಿದೆ.


Click it and Unblock the Notifications