ಮೊದಲ ಹಂತದಲ್ಲಿ 50 ಆಫ್ರಿಕಾ ಟ್ವಿನ್ ಬೈಕ್‌ಗಳನ್ನು ಮಾರಾಟ ಮಾಡಿದ ಹೋಂಡಾ

Written By:

ಕಳೆದ ಕೆಲ ದಿನಗಳ ಹಿಂದೆ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಮಾದರಿಗಳಿಗೆ ಉತ್ತಮ ಬೇಡಿಕೆ ಸೃಷ್ಠಿಯಾಗಿದ್ದು, ಈ ಹಿನ್ನೆಲೆ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಂಸ್ಥೆಯು ಮೊದಲ ಹಂತವಾಗಿ 50 ಬೈಕ್‌ಗಳನ್ನು ವಿತರಣೆ ಮಾಡಿದೆ.

ಮೊದಲ ಹಂತವಾಗಿ 50 ಆಫ್ರಿಕಾ ಟ್ವಿನ್ ಬೈಕ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಸ್ಪೋರ್ಟ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ(ಹೆಚ್‌ಎಂಎಸ್ಐ) ಸಂಸ್ಥೆಯು ಸದ್ಯದಲ್ಲೇ ಮೊದಲ ಹಂತದ ಬೇಡಿಕೆಗೆ ಅನುಗುಣವಾಗಿ ಆಫ್ರಿಕಾ ಟ್ವಿನ್ ಬೈಕ್‌ಗಳನ್ನು ವಿತರಣೆ ಮಾಡಿದ್ದು, ಮನೆಸಾರ್ ಬೈಕ್ ಉತ್ಪಾದನಾ ಘಟಕದಲ್ಲಿ ಅಂತಿಮ ಹಂತದ ರೂಪ ಪಡೆದುಕೊಂಡಿದ್ದವು.

ಮೊದಲ ಹಂತವಾಗಿ 50 ಆಫ್ರಿಕಾ ಟ್ವಿನ್ ಬೈಕ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಜಾಗತಿಕ ಮಟ್ಟದ ಸೂಪರ್ ಬೈಕ್‌ಗಳಲ್ಲಿ 6ನೇ ಸ್ಥಾನದಲ್ಲಿರುವ ಆಫ್ರಿಕಾ ಟ್ವಿನ್ ಬೈಕ್ ಆವೃತ್ತಿಗಳಿಗೆ ಭಾರತದಲ್ಲೂ ಉತ್ತಮ ಬೇಡಿಕೆ ಬಂದಿದ್ದು, ಈಗಾಗಲೇ ನೂರಾರು ಗ್ರಾಹಕರು ಆಫ್ರಿಕಾ ಟ್ವಿನ್ ಖರೀದಿಗೆ ಎದುರು ನೋಡುತ್ತಿದ್ದಾರೆ.

ಮೊದಲ ಹಂತವಾಗಿ 50 ಆಫ್ರಿಕಾ ಟ್ವಿನ್ ಬೈಕ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಈ ಹಿನ್ನೆಲೆ ಉತ್ಪಾದನೆಯನ್ನು ಚುರುಕುಗೊಳಿಸಿರುವ ಹೋಂಡಾ ಸಂಸ್ಥೆಯು, ಆಮದು ಬೈಕ್ ಮಾದರಿಗಳಿಗೆ ದೆಹಲಿ ಬಳಿ ಇರುವ ಮನೆಸಾರ್ ಬೈಕ್ ಉತ್ಪಾದನಾ ಘಟಕದಲ್ಲಿ ಅಂತಿಮ ಹಂತದ ಬೀಡಿಭಾಗಗಳ ಕಾರ್ಯವನ್ನು ಪೂರ್ಣಗೊಳಿಸುತ್ತಿದೆ.

ಮೊದಲ ಹಂತವಾಗಿ 50 ಆಫ್ರಿಕಾ ಟ್ವಿನ್ ಬೈಕ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಈ ನಡುವೆ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡ 50 ಬೈಕ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದ್ದು, ಸದ್ಯದಲ್ಲೇ ಮತ್ತಷ್ಟು ಬೈಕ್ ಮಾದರಿಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿತರಣೆ ಮಾಡಲಿದೆ.

ಮೊದಲ ಹಂತವಾಗಿ 50 ಆಫ್ರಿಕಾ ಟ್ವಿನ್ ಬೈಕ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಇನ್ನು ಸಿಆರ್‌ಎಫ್1000ಎಲ್ ತಂತ್ರಜ್ಞಾನ ಪ್ರೇರಿತ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಮಾದರಿಯೂ 998-ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಾಲಾಲ್ ಟ್ವಿನ್ ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿದ್ದು, 93ಬಿಎಚ್‌ಪಿ ಮತ್ತು 98ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಮೊದಲ ಹಂತವಾಗಿ 50 ಆಫ್ರಿಕಾ ಟ್ವಿನ್ ಬೈಕ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಜೊತೆಗೆ 6-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಕೂಡಾ ಹೊಂದಿರುವ ಆಫ್ರಿಕಾ ಟ್ವಿನ್ ಬೈಕ್ ಎಕ್ಸ್‌ಶೋರಂ ಬೆಲೆಗಳ ಪ್ರಕಾರ ರೂ. 13.07 ಲಕ್ಷಕ್ಕೆ ಲಭ್ಯವಿದ್ದು, ಸೂಪರ್ ಬೈಕ್ ಪ್ರಿಯರ ನೆಚ್ಚಿನ ಬೈಕ್ ಆವೃತ್ತಿಯಾಗಿ ಹೊರಹೊಮ್ಮಿದೆ.

Read more on ಹೋಂಡಾ honda
English summary
Read in Kannada about Honda Commences Deliveries Of The Africa Twin, With The First Batch Of 50 Motorcycles.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark