ಬಿಡುಗಡೆಗೂ ಮುನ್ನವೇ 'ಹೋಂಡಾ ಡಿಯೊ' ಸ್ಕೂಟರ್ ರಹಸ್ಯ ಚಿತ್ರಗಳು ಬಿಡುಗಡೆ.
ಹೊಚ್ಚ ಹೊಸ ಹೋಂಡಾ ಡಿಯೊ ಫೇಸ್‌ಲಿಫ್ಟ್ ಸ್ಕೂಟರ್ ರಹಸ್ಯ ಚಿತ್ರಗಳನ್ನು BikeAdvice.in ಅನಾವರಣಗೊಳಿಸಿದೆ.
ಇದೇ ವರ್ಷ ಬಿಡುಗಡೆಯಾಗಲಿರುವ ಮತ್ತು ಸ್ವಯಂಚಾಲಿತ ಹೆಡ್ ಲ್ಯಾಂಪ್ ಆನ್ (ಎಓಎಚ್) ವಿಶೇಷತೆ ಹೊಂದಿರುವ ಹೋಂಡಾ ಕಂಪನಿಯ ಡಿಯೊ ಸ್ಕೂಟರ್ ರಹಸ್ಯ ಕ್ಯಾಮೆರಾ ಚಿತ್ರಗಳು ಬಿಡುಗಡೆಗೊಂಡು ಹೆಚ್ಚು ಸುದ್ದಿ ಮಾಡುತ್ತಿವೆ.

ಈ ನವೀನ ಮಾದರಿಯ ಫೇಸ್ ಲಿಫ್ಟ್ ಸ್ಕೂಟರ್ ನೀರಿಕ್ಷೆಯಂತೆ ಬಿಎಸ್ IV ಕಂಪ್ಲೇಂಟ್ ಎಂಜಿನ್ ಹೊಂದಿದ್ದು, ಭಾರತ ಸರ್ಕಾರದ ನಿಯಮದಂತೆ ಸ್ವಯಂಚಾಲಿತ ಹೆಡ್ ಲೈಟ್ ಆಯ್ಕೆ ಹೊಂದಿದೆ.

ಕಳೆದ ಮಾದರಿಗಿಂತ ಹೆಚ್ಚು ಅಂದಗೊಂಡು ಜನರ ಮುಂದೆ ಬರುತ್ತಿರುವ ಈ ಹೋಂಡಾ ಡಿಯೊ ಸ್ಕೂಟರ್ ಜನರನ್ನು ಹೆಚ್ಚು ಆಕರ್ಷಿಸುವುದು ಖಂಡಿತ.

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮೆಟೆಡ್ (ಎಚ್‌ಎಂಎಸ್ಐ) ಸಂಸ್ಥೆಯ ಹೆಮ್ಮೆಯ ಕೂಸು ಈ ಡಿಯೊ.

ಹೋಂಡಾ ತನ್ನ ಜನಪ್ರಿಯ ಡಿಯೊ ಫೇಸ್ ಲಿಫ್ಟ್ ಮಾದರಿಯನ್ನು ಹೆಚ್ಚು ತಾಜಾತನದೊಂದಿಗೆ ಈ ವರ್ಷ ಮರು ಬಿಡುಗಡೆಗೊಳಿಸಿಲಿದೆ.

ಈಗಾಗಲೇ ಏವಿಯೇಟರ್ ಮತ್ತು ಆಕ್ಟಿವಾ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿರುವ ಜಪಾನ್ ಮೂಲದ ದೈತ್ಯ ಸಂಸ್ಥೆ ಬಿಎಸ್IV ಹೊಂದಿರುವ ಡಿಯೊ ಸ್ಕೂಟರ್ ಸಾದ್ಯಾದರಲ್ಲಿಯೇ ಬಿಡುಗಡೆಗೊಳಿಸಿದೆ.

ಡೀಲರ್ ಒಬ್ಬರ ದಾಸ್ತಾನಿನಲ್ಲಿ ಸೆರೆಹಿಡಿದಿರುವ ಈ ಚಿತ್ರ ಸೆರೆ ಹಿಡಿಯಲಾಗಿದೆ ಎನ್ನಲಾಗಿದ್ದು, ಮುಂಭಾಗದಲ್ಲಿ ನಗುವಿನ ರೂಪದಲ್ಲಿ ಹೆಡ್ ಲೈಟ್ ರೂಪಿಸಲಾಗಿದೆ.

ಮುಂಭಾಗದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಎಲ್ಇಡಿ ದೀಪಗಳನ್ನು ಗಮನಿಸಬಹುದಾಗಿದ್ದು, ಈ ದೀಪಗಳು ಹೆಚ್ಚು ಆಕರ್ಷಣೆ ನೀಡಲಿವೆ.

ಎರಡು ಬಣ್ಣಗಳ ಹೊದಿಕೆ ಹೊಂದಿರುವ ಮುಂಭಾಗ ಹೊಂದಿರುವ ಈ ಡಿಯೊ ಸ್ಕೂಟರ್ ತುಂಬೆಲ್ಲಾ ಸ್ಪೋರ್ಟ್ಸ್ ಗ್ರಾಫಿಕ್ಸ್ ಹೊಂದಿರುವ ಈ ಸ್ಕೂಟರ್ ಯುವಕ ಯುವತಿಯರ ಸದ್ಯದರಲ್ಲಿಯೇ ಸಾರತಿಯಾಗಲಿದೆ.

ಈ ಹೊಚ್ಚ ಹೊಸ ಸ್ಕೂಟರ್ 109.2 ಸಿಸಿ ಏರ್ ಕೋಲ್ಡ್ ಎಂಜಿನ್ ಹೊಂದಿದ್ದು, ನಾಲ್ಕು ಸ್ಟ್ರೋಕ್ ಎಂಜಿನ್ 8.77 ತಿರುಗುಬಲದಲ್ಲಿ 8 ಅಶ್ವಶಕ್ತಿ ಉತ್ಪಾದಿಸಲಿದೆ.

ಈ ಬಿಎಸ್IV ಹೊಂದಿರುವ ಡಿಯೊ ಸ್ಕೂಟರ್ ಸದ್ಯ ಇರುವ ಸ್ಕೂಟರಿಗಿಂತ ನಾಲ್ಕರಿಂದ ಐದು ಸಾವಿರ ರೂಗಳು ಹೆಚ್ಚಿಗೆ ಇರಲಿದೆ.


Click it and Unblock the Notifications