ಖರೀದಿಗೆ ಸಿದ್ಧವಾಗಿದೆ ಹೋಂಡಾ ನಿರ್ಮಾಣದ ಹೊಸ ಸ್ಕೂಟರ್ ಗ್ರಾಜಿಯಾ
ಹೋಂಡಾ ಮೋಟಾರ್ಸ್ ಇಂಡಿಯಾ ಸಂಸ್ಥೆಯು ಇದೀಗ ಗ್ರಾಜಿಯಾ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈ ಹಿನ್ನೆಲೆ ಹೊಸ ಸ್ಕೂಟರ್ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭವಾಗಿದೆ.
ಕಳೆದ 2ನೇ ತ್ರೈಮಾಸಿಕ ಅವಧಿಯಲ್ಲಿ ಹೊಸದಾಗಿ 2 ಸ್ಕೂಟರ್ ಹಾಗೂ 2 ಮೋಟಾರ್ ಸೈಕಲ್ ಉತ್ಪನ್ನಗಳನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದ ಹೋಂಡಾ ಮೋಟಾರ್ಸ್ ಇಂಡಿಯಾ ಸಂಸ್ಥೆಯು ಇದೀಗ ಗ್ರಾಜಿಯಾ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈ ಹಿನ್ನೆಲೆ ಹೊಸ ಸ್ಕೂಟರ್ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭವಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ನಿರ್ಮಾಣದ ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ವರ್ಗದ ಜನರನ್ನು ಸೆಳೆಯಲು ನಿಟ್ಟಿನಲ್ಲಿ ಹೊಸ ಹೊಸ ನಮೂನೆಯ ಸ್ಕೂಟರ್ ಮತ್ತು ಮೋಟಾರ್ ಸೈಕಲ್‌ಗಳನ್ನು ಸಿದ್ಧಗೊಳಿಸುತ್ತಿದೆ.

ಇದಲ್ಲದೇ ಹೊಸ ಉತ್ಪನ್ನಗಳ ಬಗ್ಗೆ ಈ ಹಿಂದೆಯೇ ಸುಳಿವು ನೀಡಿದ್ದ ಹೋಂಡಾ ಸಂಸ್ಥೆಯು 2017ರ ಅಂತ್ಯಕ್ಕೆ ಮತ್ತು 2018ರ ಆರಂಭದಲ್ಲಿ 2 ಹೊಸ ಸ್ಕೂಟರ್ ಉತ್ಪನ್ನಗಳನ್ನು ಮತ್ತು 2 ಹೊಸ ಬೈಕ್‌ಗಳನ್ನು ಪರಿಚಯಿಸುವ ಬಗ್ಗೆ ಇರಾದೆ ವ್ಯಕ್ತಪಡಿಸಿತ್ತು.
Recommended Video


ಅಂತೆಯೇ ಇದೀಗ ಗ್ರಾಜಿಯಾ ಎನ್ನುವ ಹೊಸ ನಮೂನೆಯ ಸ್ಕೂಟರ್ ಮಾದರಿಯೊಂದನ್ನು ಪರಿಚಯಿಸಲಾಗುತ್ತಿದ್ದು, ಡೀಲರ್ಸ್ ಯಾರ್ಡ್‌ಗಳಲ್ಲಿ ಈಗಾಗಲೇ ಹೊಸ ಸ್ಕೂಟರ್‌ಗಳನ್ನು ಸ್ಟಾಕ್ ಕೂಡಾ ಮಾಡಲಾಗುತ್ತಿದೆ.

ಸ್ಟಾಕ್ ಯಾರ್ಡ್‌ನಲ್ಲಿ ಕಾಣಿಸಿಕೊಂಡಿರುವ ಗ್ರಾಜಿಯಾ ಸ್ಕೂಟರ್‌ಗಳು ಪ್ರಸ್ತುತ ಸ್ಕೂಟರ್ ಆವೃತ್ತಿಗಳಲ್ಲೇ ವಿಭಿನ್ನ ಮಾದರಿಯಾಗಿದ್ದು, ವಿ ಆಕಾರದ ಹೆಡ್‌ಲ್ಯಾಂಪ್ ಗ್ರಾಜಿಯಾ ಸ್ಕೂಟರ್‌ಗೆ ಲುಕ್ ನೀಡಿರುವುದಂತು ಸುಳ್ಳಲ್ಲ.

ಜೊತೆಗೆ ಆ್ಯಕ್ಟಿವಾ ರೀತಿಯಲ್ಲಿಯೇ ಮುಂಭಾಗದಲ್ಲಿ ಅಗಲವಾದ ಕ್ರೋಮ್ ಹೊಂದಿದ್ದು, ಟೆಲಿಸ್ಕೂಪಿಕ್ ಫ್ರಂಟ್, ಡಿಸ್ಕ್ ಬ್ರೇಕ್ ಮತ್ತು ಸುಧಾರಿತ ತಂತ್ರಜ್ಞಾನ ಮಾದರಿಯಾದ ಕೊಂಬಿ ಬ್ರೇಕ್ ವ್ಯವಸ್ಥೆಯನ್ನು ಹೊಂದಿದೆ.
ಓದಿರಿ-

ಎಂಜಿನ್ ಸಾಮರ್ಥ್ಯ
ಗ್ರಾಜಿಯಾ ಸ್ಕೂಟರ್ ಮಾದರಿಯ ಎಂಜಿನ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದ್ರು ಕೆಲವು ವರದಿಗಳ ಪ್ರಕಾರ 110 ಸಿಸಿ ಅಥವಾ ಆಕ್ಟಿವಾ ಸರಿಸಮಾನದ 125 ಸಿಸಿ ಎಂಜಿನ್ ಅಳವಡಿಕೆ ಮಾಡಬಹುದಾದ ಸಾಧ್ಯತಗಳಿವೆ.

ಹೀಗಾಗಿ ಹೊಸ ಸ್ಕೂಟರ್ ಬೆಲೆ ಕೂಡಾ ದೆಹಲಿ ಎಕ್ಸ್‌ಶೋರಂ ಪ್ರಕಾರ 65 ಸಾವಿರ 70 ಸಾವಿರ ನಿಗದಿಯಾಗುವ ಸಾಧ್ಯತೆಗಳಿದ್ದು, ಯಮಹಾ ರೆ ಮತ್ತು ಸುಜುಕಿ ಆಕ್ಸೆಸ್ 125 ಆವೃತ್ತಿಗಳಲ್ಲಿ ತೀವ್ರ ಸ್ಪರ್ಧೆ ಒಡ್ಡುವುದಲ್ಲಿ ಯಾವುದೇ ಅನುಮಾನವಿಲ್ಲ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಹೋಂಡಾ ಸ್ಕೂಟರ್ ಆವೃತ್ತಿಗಳಲ್ಲೇ ಗ್ರಾಜಿಯಾ ಮಾದರಿ ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿರುವ ಸ್ಕೂಟರ್ ಆವೃತ್ತಿಯಾಗಿದ್ದು, ನವೆಂಬರ್ ಅಂತ್ಯಕ್ಕೆ ದೇಶ್ಯಾದ್ಯಂತ ಬಿಡುಗಡೆಯಾಗಲಿದೆ. ಹೀಗಾಗಿ ಆಸಕ್ತ ಗ್ರಾಹಕರು ಅಧಿಕೃತ ಡೀಲರ್‌ಗಳ ಬಳಿ ರೂ.2000 ಮುಂಗಡ ಪಾವತಿಸಿ ಹೊಸ ಸ್ಕೂಟರ್‌ಗಾಗಿ ಬುಕ್ಕಿಂಗ್ ಮಾಡಬಹುದಾಗಿದೆ.
ಓದಿರಿ-


Click it and Unblock the Notifications