ಹೋಂಡಾ ನಿರ್ಮಾಣದ ಗ್ರೂಮ್ ಬೈಕ್, ಸ್ಕೂಪಿ ಸ್ಕೂಟರ್ ಬಿಡುಗಡೆ ಇಲ್ವಂತೆ..!?

Written By:

ಕಳೆದ ಕೆಲದಿನಗಳಿಂದ ಹೊಸ ಬೈಕ್ ಮತ್ತು ಸ್ಕೂಟರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಸ್ಪಾಟ್ ಟೆಸ್ಟಿಂಗ್ ಕೈಗೊಳ್ಳುತ್ತಿರುವ ಹೋಂಡಾ ಸಂಸ್ಥೆಯು ಗ್ರೂಮ್ ಬೈಕ್ ಮತ್ತು ಸ್ಕೂಪಿ ಸ್ಕೂಟರ್ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗಾಗಿಯೇ ನಿರ್ಮಾಣ ಮಾಡಲಾಗಿದೆ ಎನ್ನಲಾಗಿತ್ತು. ಆದ್ರೆ ಇದೀಗ ಹೊಸ ಉತ್ಪನ್ನಗಳ ಬಗ್ಗೆ ಹೋಂಡಾ ಹೊಸ ಹೇಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿದೆ.

ಹೋಂಡಾ ನಿರ್ಮಾಣದ ಗ್ರೂಮ್ ಬೈಕ್, ಸ್ಕೂಪಿ ಸ್ಕೂಟರ್ ಬಿಡುಗಡೆ ಇಲ್ವಂತೆ!

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಕ್ಲಾಸಿಕ್ ಬೈಕ್ ಮಾದರಿಗಳಿಂತ ರೆಟ್ರೊ ಮಾದರಿಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ಹಿನ್ನೆಲೆ ಹೋಂಡಾ ದ್ವಿಚಕ್ರ ವಾಹನ ಉತ್ಪಾದನಾ ವಿಭಾಗವು ಗ್ರೂಮ್ ಮತ್ತು ಸ್ಕೂಪಿ ಎಂಬ ಹೊಸ ಆವೃತ್ತಿಗಳನ್ನು ಸಿದ್ಧಪಡಿಸುತ್ತಿದೆ.

ಹೋಂಡಾ ನಿರ್ಮಾಣದ ಗ್ರೂಮ್ ಬೈಕ್, ಸ್ಕೂಪಿ ಸ್ಕೂಟರ್ ಬಿಡುಗಡೆ ಇಲ್ವಂತೆ!

ಆದರೆ ಹೊಸ ಬೈಕ್ ಉತ್ಪನ್ನಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಹೊರ ಹಾಕಿರುವ ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಮಾರಾಟ ವಿಭಾಗದ ಹಿರಿಯ ಅಧಿಕಾರಿ ವೈ.ಎಸ್.ಗುಲೇರಿಯಾ, 'ಹೊಸ ಉತ್ಪನ್ನಗಳಾದ ಗ್ರೂಮ್ ಮತ್ತು ಸ್ಕೂಪಿ ಹೊಸ ಉತ್ಪನ್ನಗಳನ್ನು ಕೇವಲ ಪರೀಕ್ಷಾ ಉದ್ದೇಶಕ್ಕಾಗಿ ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ಕೈಗೊಳ್ಳಲಾಗುತ್ತಿದೆ" ಎಂದಿದ್ದಾರೆ.

Recommended Video - Watch Now!
TVS Jupiter Classic Launched In India | In Kannada - DriveSpark ಕನ್ನಡ
ಹೋಂಡಾ ನಿರ್ಮಾಣದ ಗ್ರೂಮ್ ಬೈಕ್, ಸ್ಕೂಪಿ ಸ್ಕೂಟರ್ ಬಿಡುಗಡೆ ಇಲ್ವಂತೆ!

ಹೀಗಾಗಿ ಹೊಸ ಬೈಕ್ ಉತ್ಪನ್ನಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಇಲ್ಲ ಎಂಬ ಬಗ್ಗೆ ಸುಳಿವು ನೀಡಿರುವ ಹೋಂಡಾ ಸಂಸ್ಥೆಯು, ವಿದೇಶಿ ಮಾರುಕಟ್ಟೆಗಳಿಗಾಗಿ ಭಾರತದಿಂದಲೇ ರಫ್ತು ಕೈಗೊಳ್ಳಲಾಗುವುದು ಎಂದಿದೆ.

ಹೋಂಡಾ ನಿರ್ಮಾಣದ ಗ್ರೂಮ್ ಬೈಕ್, ಸ್ಕೂಪಿ ಸ್ಕೂಟರ್ ಬಿಡುಗಡೆ ಇಲ್ವಂತೆ!

ಇನ್ನು ಸ್ಕೂಪಿ ಸ್ಕೂಟರ್ ಮಾದರಿಯು 110 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಪಡೆದುಕೊಳ್ಳಲಿದ್ದು, 8-ಬಿಎಚ್‌ಪಿ ಮತ್ತು 9-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿವೆ. ಜೊತೆಗೆ ಹೋಂಡಾ ಇಕೋ ಟೆಕ್ನಾಲಜಿ ಸಲಕಣೆಗಳನ್ನು ಪಡೆದುಕೊಳ್ಳಲಿದೆ.

ಹೋಂಡಾ ನಿರ್ಮಾಣದ ಗ್ರೂಮ್ ಬೈಕ್, ಸ್ಕೂಪಿ ಸ್ಕೂಟರ್ ಬಿಡುಗಡೆ ಇಲ್ವಂತೆ!

ಅಂತೆಯೇ ಗ್ರೂಮ್ ಬೈಕ್ ಮಾದರಿಯು ವಿಶೇಷ ಲುಕ್ ಪಡೆದುಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ನವಿ ಬೈಕ್ ಹೋಲಿಕೆಯನ್ನೇ ಪಡೆದುಕೊಂಡಿದೆ. ಆದರೂ ಭಾಗಶಃ ವಿಭಿನ್ನವಾಗಿರುವ ಗ್ರೂಮ್, 124.9-ಸಿಸಿ ಎಂಜಿನ್‌ನೊಂದಿಗೆ 9.7-ಬಿಎಚ್‌ಪಿ ಮತ್ತು 10.9-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿರಲಿದೆ.

ಹೋಂಡಾ ನಿರ್ಮಾಣದ ಗ್ರೂಮ್ ಬೈಕ್, ಸ್ಕೂಪಿ ಸ್ಕೂಟರ್ ಬಿಡುಗಡೆ ಇಲ್ವಂತೆ!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಪರಿಚಯಿಸುತ್ತಿರುವ ಸ್ಕೂಪಿ ಸ್ಕೂಟರ್ ಹಾಗೂ ಗ್ರೂಮ್ ಬೈಕ್ ವಿನ್ಯಾಸದಲ್ಲಿ ಈ ಹಿಂದಿನ ರೆಟ್ರೊ ಉತ್ಪನ್ನಗಳಿಂತಲೂ ವಿಭಿನ್ನವಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೈಕ್ ಮಾದರಿಗಳು ಬಿಡುಗಡೆ ಇಲ್ಲ ಎಂದಿರುವುದು ಬೇಸರದ ಸಂಗತಿ.

Read more on ಹೋಂಡಾ honda
English summary
Read in Kannada about Honda Unlikely To Launch Grom And Scoopy In India.
Story first published: Tuesday, September 12, 2017, 11:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark