50 ವರ್ಷಗಳ ನಂತರ 'ಮಂಕಿ ಬೈಕ್' ಉತ್ಪಾದನೆ ನಿಲ್ಲಿಸಲಿದೆ ಹೋಂಡಾ..!!

Written By:

ಸಣ್ಣ ಗಾತ್ರದ ಸೂಪರ್ ಬೈಕ್ ಮಾದರಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿದ್ದ ಜನಪ್ರಿಯ ಮಂಕಿ ಬೈಕ್ ಉತ್ಪಾದನೆಯನ್ನು ಹೋಂಡಾ ಸಂಸ್ಥೆಯು ಸ್ಥಗಿತಗೊಳಿಸುತ್ತಿದ್ದು, ಮಂಕಿ ಬೈಕ್ ಕುರಿತಾದ ಸ್ಪಾರಸ್ಯಕರ ಮಾಹಿತಿ ಇಲ್ಲಿವೆ ತಪ್ಪದೇ ಓದಿ.

50 ವರ್ಷಗಳ ನಂತರ 'ಮಂಕಿ ಬೈಕ್' ಉತ್ಪಾದನೆ ನಿಲ್ಲಿಸಲಿದೆ ಹೋಂಡಾ..!!

ಅಂದು 1961ರ ಆರಂಭ ದಿನಗಳಲ್ಲಿ ಮೊದಲ ಬಾರಿಗೆ ಸಣ್ಣ ಗಾತ್ರದ ಮಂಕಿ ಮೋಟಾರ್ ಸೈಕಲ್‌ಗಳನ್ನು ಉತ್ಪಾದನೆ ಮಾಡಿದ್ದ ಹೋಂಡಾ ಸಂಸ್ಥೆಯು ಕೆಲವೇ ದಿನಗಳಲ್ಲಿ ಭಾರೀ ಜನಪ್ರಿಯತೆಗಳಲ್ಲಿ ಯಶಸ್ವಿಯಾಗಿತ್ತು. ಆದ್ರೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಸ್ಪರ್ಧೆಯಿಂದಾಗಿ ಮಂಕಿ ಬೈಕ್ ಉತ್ಪಾದನೆಯಿಂದ ಹಿಂದೆ ಸರಿಯುತ್ತಿದೆ.

50 ವರ್ಷಗಳ ನಂತರ 'ಮಂಕಿ ಬೈಕ್' ಉತ್ಪಾದನೆ ನಿಲ್ಲಿಸಲಿದೆ ಹೋಂಡಾ..!!

ಹೋಂಡಾ ನಿರ್ಮಾಣದ ಮಂಕಿ ಬೈಕ್ ಕೇವಲ ಜಪಾನ್ ಮತ್ತು ಏಷಿಯಾದ ಕೆಲವೇ ರಾಷ್ಟ್ರಗಳಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಇದುವರೆಗೂ ಮಂಕಿ ಖರೀದಿಗೆ ಸಾಕಷ್ಟು ಬೇಡಿಕೆಯಿದೆ ಎಂದರೇ ನಂಬಲೇಬೇಕು.

50 ವರ್ಷಗಳ ನಂತರ 'ಮಂಕಿ ಬೈಕ್' ಉತ್ಪಾದನೆ ನಿಲ್ಲಿಸಲಿದೆ ಹೋಂಡಾ..!!

ಸದ್ಯ ವರದಿಗಳ ಪ್ರಕಾರ ಮಂಕಿ ಬೈಕ್ ಖರೀದಿದಗೆ 50 ಸಾವಿರಕ್ಕೂ ಹೆಚ್ಚು ಗ್ರಾಹಕರು ತುದಿಗಾಲಿನಲ್ಲಿ ನಿಂತಿದ್ದು, ಈ ನಡುವೆ ಗ್ರಾಹಕರ ಬೇಡಿಕೆಗೂ ಕಿವಿಗೊಡದ ಹೋಂಡಾ ಸಂಸ್ಥೆಯು ಮಂಕಿ ಬೈಕ್ ಉತ್ಪಾದನೆಗೆ ತಿಲಾಂಜಲಿ ಇಡುತ್ತಿದೆ.

Recommended Video - Watch Now!
Triumph Street Scrambler Launched In India - DriveSpark
50 ವರ್ಷಗಳ ನಂತರ 'ಮಂಕಿ ಬೈಕ್' ಉತ್ಪಾದನೆ ನಿಲ್ಲಿಸಲಿದೆ ಹೋಂಡಾ..!!

ಆದ್ರೆ ವಿಶೇಷ ಅಂದ್ರೆ ಸದ್ಯ ಬೇಡಿಕೆಗೆ ಬಂದಿರುವ 50 ಸಾವಿರಕ್ಕೂ ಹೆಚ್ಚು ಬೇಡಿಕೆಗಳಲ್ಲಿ 500 ಗ್ರಾಹಕನಿಗೆ ಮಾತ್ರ ಮಂಕಿ ಬೈಕ್ ಅನ್ನು ವಿಶೇಷವಾಗಿ ಉತ್ಪಾದನೆ ಮಾಡಿಕೊಡಲು ಮುಂದಾಗಿರುವ ಹೋಂಡಾ, ಲಕ್ಕಿ ಡ್ರಾ ಮೂಲಕ ವಿಶೇಷ ಬೈಕ್‌ಗಳನ್ನು ವಿತರಣೆ ಮಾಡಲಿದೆ.

50 ವರ್ಷಗಳ ನಂತರ 'ಮಂಕಿ ಬೈಕ್' ಉತ್ಪಾದನೆ ನಿಲ್ಲಿಸಲಿದೆ ಹೋಂಡಾ..!!

ಎಂಜಿನ್ ಸಾಮರ್ಥ್ಯ

ಇನ್ನು ಸಣ್ಣ ಗಾತ್ರದಲ್ಲಿ ಅಭಿವೃದ್ಧಿಗೊಂಡಿದ್ದರು ಸಾಕಷ್ಟು ಗಮನಸೆಳೆಯುವ ವೈಶಿಷ್ಟ್ಯತೆಗಳನ್ನು ಹೊಂದಿರುವ ಮಂಕಿ ಬೈಕ್, 50 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದೆ.

50 ವರ್ಷಗಳ ನಂತರ 'ಮಂಕಿ ಬೈಕ್' ಉತ್ಪಾದನೆ ನಿಲ್ಲಿಸಲಿದೆ ಹೋಂಡಾ..!!

ಇದಲ್ಲದೇ ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲೆಂದೇ ಇಷ್ಟು ಗಾತ್ರದ ಬೈಕ್ ಅನ್ನು ಅಭಿವೃದ್ಧಿ ಮಾಡಲಾಗಿದ್ದು, ಫೋಲ್ಡ್ ಮಾಡಬಹುದಾದ ಹ್ಯಾಂಡಲ್‌ಗಳು ಮತ್ತು ಕಾಂಪ್ಯಾಕ್ಟ್ ವಿನ್ಯಾಸದಂತಹ ವೈಶಿಷ್ಟ್ಯತೆಗಳಿಂದಾಗಿ ಮಂಕಿ ಬೈಕ್ ಜನಪ್ರಿಯತೆಗೆ ಕಾರಣವಾಗಿದ್ದವು.

50 ವರ್ಷಗಳ ನಂತರ 'ಮಂಕಿ ಬೈಕ್' ಉತ್ಪಾದನೆ ನಿಲ್ಲಿಸಲಿದೆ ಹೋಂಡಾ..!!

ಹೀಗಾಗಿ ಕೆಲವೇ ದಿನಗಳಲ್ಲಿ ಅತ್ಯುತ್ತಮ ಮಾರಾಟಗೊಳ್ಳುವ ಹೋಂಡಾ ಉತ್ಪನ್ನಗಳಲ್ಲಿ ಅಗ್ರಸ್ಥಾನ ಹೊಂದಿದ್ದ ಮಂಕಿ ಬೈಕ್, ಇದೀಗ ಕಾಲ ಘಟಕ್ಕೆ ತಕ್ಕಂತೆ ತನ್ನ ಜನಪ್ರಿಯತೆಯೊಂದಿಗೆ ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿದೆ.

50 ವರ್ಷಗಳ ನಂತರ 'ಮಂಕಿ ಬೈಕ್' ಉತ್ಪಾದನೆ ನಿಲ್ಲಿಸಲಿದೆ ಹೋಂಡಾ..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಪ್ರಸ್ತುತ ಮೋಟಾರ್ ಸೈಕಲ್‌ಗಳ ಮೇಲೆ ಹೆಚ್ಚು ಗಮನಹರಿಸುವ ಉದ್ದೇಶದಿಂದ ಮಂಕಿ ಬೈಕ್ ಉತ್ಪಾದನೆ ಗುಡ್ ಬೈ ಹೇಳುತ್ತಿರುವ ಹೋಂಡಾ, ಮಂಕಿ ಬೈಕ್ ಹೋಲಿಕೆಯ ಹೋಂಡಾ ನವಿ ಮುಂದುವರಿಸಲಿದೆ.

Read more on ಹೋಂಡಾ honda
English summary
Read in Kannada about End Of The Line For The Honda Monkey Bike.
Story first published: Tuesday, August 29, 2017, 17:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark