ಭಾರತದಲ್ಲಿ ಬಿಡುಗಡೆಗಾಗಿ ಸ್ಕೂಪಿ ಸ್ಕೂಟರ್ ಟೆಸ್ಟಿಂಗ್ ನಡೆಸಿದ ಹೋಂಡಾ..!!

Written By:

ಜಪಾನ್ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆಯಾದ ಹೋಂಡಾ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಹೊಸ ಸ್ಕೂಟರ್ ಆವೃತ್ತಿಯೊಂದನ್ನು ಸಿದ್ಧಗೊಳಿಸಿದ್ದು, ಯುವ ಸಮುದಾಯವನ್ನು ಗುರಿಯಾಗಿಕೊಂಡು ಸ್ಕೂಪಿ ಸ್ಕೂಟರ್ ಒಂದನ್ನು ಅಭಿವೃದ್ಧಿಗೊಳಿಸಿದೆ.

ಭಾರತದಲ್ಲಿ ಬಿಡುಗಡೆಗಾಗಿ ಸ್ಕೂಪಿ ಸ್ಕೂಟರ್ ಟೆಸ್ಟಿಂಗ್ ನಡೆಸಿದ ಹೋಂಡಾ

ಸ್ಕೂಟರ್ ಮಾದರಿಗಳಲ್ಲೇ ಅತ್ಯಧಿಕ ಬದಲಾವಣೆ ಹೊಂದಿರುವ ಮಾದರಿಯೊಂದನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿರುವ ಹೋಂಡಾ ಇಂಡಿಯಾ ಸಂಸ್ಥೆಯು, ಸ್ಕೂಪಿ ಸ್ಕೂಟರ್ ಮಾದರಿಯನ್ನು ಭಾರತೀಯ ರಸ್ತೆಗಳಲ್ಲಿ ಟೆಸ್ಟಿಂಗ್ ಕಾರ್ಯವನ್ನು ಕೈಗೊಂಡಿದೆ.

ಭಾರತದಲ್ಲಿ ಬಿಡುಗಡೆಗಾಗಿ ಸ್ಕೂಪಿ ಸ್ಕೂಟರ್ ಟೆಸ್ಟಿಂಗ್ ನಡೆಸಿದ ಹೋಂಡಾ

ಹೀಗಾಗಿ ಪ್ರಸಕ್ತ ವರ್ಷದ ಕೊನೆಯಲ್ಲಿ ಸ್ಕೂಪಿ ಸ್ಕೂಟರ್ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಸ್ಕೂಟರ್ ಮಾದರಿಯಜನ್ನು ರೆಟ್ರೊ ಲುಕ್‌ನೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

Recommended Video - Watch Now!
TVS Jupiter Classic Launched In India | In Kannada - DriveSpark ಕನ್ನಡ
ಭಾರತದಲ್ಲಿ ಬಿಡುಗಡೆಗಾಗಿ ಸ್ಕೂಪಿ ಸ್ಕೂಟರ್ ಟೆಸ್ಟಿಂಗ್ ನಡೆಸಿದ ಹೋಂಡಾ

ಸ್ಪಾಟ್ ಟೆಸ್ಟಿಂಗ್ ವೇಳೆ ಡಾರ್ಕ್ ಬ್ಲೂ ಪೇಂಟ್ ವಿನ್ಯಾಸದ ಮಾದರಿಯೊಂದಿಗೆ ಪರೀಕ್ಷೆ ಕೈಗೊಳ್ಳಲಾಗಿದ್ದು, ಮುಂಭಾಗದಲ್ಲಿ ನೀಡಲಾಗಿರುವ ದೊಡ್ಡ ಸುತ್ತಿನ ಹೆಡ್‌ಲ್ಯಾಂಪ್‌ಗಳು ಸ್ಕೂಟರ್‌ನ ವಿಶಿಷ್ಟ ಲಕ್ಷಣವಾಗಿದೆ.

ಭಾರತದಲ್ಲಿ ಬಿಡುಗಡೆಗಾಗಿ ಸ್ಕೂಪಿ ಸ್ಕೂಟರ್ ಟೆಸ್ಟಿಂಗ್ ನಡೆಸಿದ ಹೋಂಡಾ

ಇನ್ನು ಟರ್ನ್ ಇಂಡಿಕೇಟರ್ ಅನ್ನು ಹೆಡ್‌ಲ್ಯಾಂಪ್‌ನೊಂದಿಗೆ ಸಂಯೋಜಿಸಲಾಗಿದ್ದು, ಇದು ರೆಟ್ರೊ ಲುಕ್‌ಗೆ ಕಾರಣವಾಗಿದೆ. ಜೊತೆಗೆ ಹಿಂಭಾಗದ ಕನ್ನಡಿಗಳು ವಿಶೇಷ ವಿನ್ಯಾಸ ಹೊಂದಿದ್ದು, ಡ್ಯುಯಲ್ ಟೋನ್ ಬಣ್ಣಗಳನ್ನು ಹೊಂದಿರಲಿವೆ.

ಭಾರತದಲ್ಲಿ ಬಿಡುಗಡೆಗಾಗಿ ಸ್ಕೂಪಿ ಸ್ಕೂಟರ್ ಟೆಸ್ಟಿಂಗ್ ನಡೆಸಿದ ಹೋಂಡಾ

ಎಂಜಿನ್

ಸ್ಕೂಪಿ ಸ್ಕೂಟರ್ ಮಾದರಿಯು 110 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಪಡೆದುಕೊಳ್ಳಲಿದ್ದು, 8-ಬಿಎಚ್‌ಪಿ ಮತ್ತು 9-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿವೆ. ಜೊತೆಗೆ ಹೋಂಡಾ ಇಕೋ ಟೆಕ್ನಾಲಜಿ ಸಲಕಣೆಗಳನ್ನು ಪಡೆದುಕೊಳ್ಳಲಿದೆ.

ಭಾರತದಲ್ಲಿ ಬಿಡುಗಡೆಗಾಗಿ ಸ್ಕೂಪಿ ಸ್ಕೂಟರ್ ಟೆಸ್ಟಿಂಗ್ ನಡೆಸಿದ ಹೋಂಡಾ

ಇದರೊಂದಿಗೆ ಸಾಮಾನ್ಯ ಮತ್ತು ಡಿಸ್ಕ್ ಬ್ರೇಕ್ ಆಯ್ಕೆಯನ್ನು ಸಹ ಇರಿಸವಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಕೂಟರ್ ಹಿಂಭಾಗದಲ್ಲಿ ಲಗೇಜ್ ಬಾಕ್ಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದಾಗಿ ಹೊಸ ಸ್ಕೂಟರ್ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.55 ಸಾವಿರಕ್ಕೆ ಲಭ್ಯವಾಗಲಿವೆ ಎಂದು ನೀರಿಕ್ಷಿಸಲಾಗಿದೆ.

Read more on ಹೋಂಡಾ honda
English summary
Read in Kannada about Honda Scoopy Spotted Testing In India.
Story first published: Monday, September 4, 2017, 19:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark