ಸೂಪರ್ ಚಾರ್ಜ್ಡ್ ಬೈಕ್‌ಗಳನ್ನು ಪರಿಚಯಿಸುತ್ತಿದೆ ಕವಾಸಕಿ
ಸೂಪರ್ ಬೈಕ್ ಉತ್ಪಾದನಾ ಸಂಸ್ಥೆಯಾದ ಕವಾಸಕಿಯು ಸದ್ಯದಲ್ಲೇ ಸುಧಾರಿತ ಮಾದರಿಯ ಸೂಪರ್ ಚಾರ್ಜ್ಡ್‌ನೊಂದಿಗೆ ಅಭಿವೃದ್ಧಿ ಹೊಂದಿರುವ ವಿಶೇಷ ಬೈಕ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಸೂಪರ್ ಬೈಕ್ ಉತ್ಪಾದನಾ ಸಂಸ್ಥೆಯಾದ ಕವಾಸಕಿಯು ಸದ್ಯದಲ್ಲೇ ಸುಧಾರಿತ ಮಾದರಿಯ ಸೂಪರ್ ಚಾರ್ಜ್ಡ್‌ನೊಂದಿಗೆ ಅಭಿವೃದ್ಧಿ ಹೊಂದಿರುವ ವಿಶೇಷ ಬೈಕ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಬೃಹತ್ ಯೋಜನೆ ಕೈಗೊಂಡಿರುವ ಕವಾಸಕಿಯು ಸದ್ಯದ್ಲಲೇ ಸೂಪರ್ ಚಾರ್ಜ್ಡ್ ಪ್ರೇರಿತ ಬೈಕ್ ಮಾದರಿಯೊಂದನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದು ,ಮುಂಬರುವ ಪ್ರತಿಷ್ಠಿತ ಇಐಸಿಎಂಎ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಲಿದೆ.

ಇದಕ್ಕಾಗಿಯೇ ಟೀಸರ್ ಒಂದನ್ನು ಬಿಡುಗಡೆ ಕೂಡಾ ಮಾಡಿರುವ ಕವಾಸಕಿ ಸಂಸ್ಥೆಯು ದೂರದ ಪ್ರಮಾಣಗಳಿಗೆ ಅನುಕೂಲಕರವಾಗಬಲ್ಲ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಆಟೋ ಉದ್ಯಮಕ್ಕೆ ಪರಿಚಯಿಸುವ ಇರಾದೆ ವ್ಯಕ್ತಪಡಿಸಿದೆ.
Recommended Video


ವರದಿಗಳ ಪ್ರಕಾರ ನಿಂಜಾ ಹೆಚ್2 ಎಕ್ಸ್ಎಸ್ ಆವೃತ್ತಿಯನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಹೊರತರಲು ನಿರ್ಧರಿಸಿರುವ ಕವಾಸಕಿ ಸಂಸ್ಥೆಯು ಇದಕ್ಕಾಗಿ ಹಲವು ಮಹತ್ವದ ಸಂಶೋಧನೆಗಳನ್ನು ಕೈಗೊಂಡಿದ್ದು, ಮುಂಬರುವ ಇಐಸಿಎಂಎ ಆಟೋ ಮೇಳದಲ್ಲಿ ಹೊಸ ಬೈಕ್ ಪರಿಕಲ್ಪನೆ ಬಗ್ಗೆ ಮಾಹಿತಿ ಬಿಚ್ಚಿಡಲಿದೆ.

ಸೂಪರ್ ಚಾರ್ಜ್ಡ್ ಎಂಜಿನ್ ವಿಶೇಷತೆ ಏನು?
ಸದ್ಯ ಎಲೆಕ್ಟ್ರಿಕ್ ಎಂಜಿನ್ ಮಾದರಿಗಳಲ್ಲೇ ಅತಿ ಹೆಚ್ಚು ಸುಧಾರಿತ ಮಾದರಿಯಾಗಿರುವ ಸೂಪರ್ ಚಾರ್ಜ್ಡ್ ಎಂಜಿನ್‌ಗಳು ಅತಿಹೆಚ್ಚು ಮೈಲೇಜ್ ನೀಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದಲ್ಲಿ 500ಕ್ಕೂ ಹೆಚ್ಚು ಅಧಿಕ ಮೈಲೇಜ್ ಒದಗಿಸುವ ಶಕ್ತಿಯನ್ನು ಪಡೆದಿಕೊಂಡಿವೆ.
ಹೀಗಾಗಿ ಕವಾಸಕಿ ಪರಿಚಯಸಲು ಮುಂದಾಗಿರುವ ಬೈಕ್ ಬಗ್ಗೆ ಆಟೋ ಉದ್ಯಮದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಬಿಡುಗಡೆ ನಂತರ ಮೈಲೇಜ್ ವಿಚಾರಕ್ಕೆ ಸಾಕಷ್ಟು ಸದ್ದು ಮಾಡುವುದಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications