ಬಿಡುಗಡೆಗೆ ಸಜ್ಜುಗೊಂಡ ಮಹೀಂದ್ರಾ ವಿನೂತನ ಮೊಜೊ ಬೈಕ್

ಕಡಿಮೆ ಬೆಲೆಯ ಜೊತೆಗೆ ಹೊಸ ವಿನ್ಯಾಸಗಳನ್ನ ಹೊಂದಿರುವ ಮಹೀಂದ್ರಾ ವಿನೂತನ ಮಾದರಿಯ ಮೊಜೊ ಬೈಕ್ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಸ್ಪಾಟ್ ಟೆಸ್ಟಿಂಗ್ ವೇಳೆ ಹೊಸ ಬೈಕ್ ವಿನ್ಯಾಸಗಳು ಬಹಿರಂಗಗೊಂಡಿವೆ.

By Praveen

ಸಾಂಪ್ರಾದಾಯಿಕ ಮೊಜೊ ಬಾಕ್ ಮಾದರಿಗಿಂತಲೂ ಹೆಚ್ಚು ಬದಲಾವಣೆ ಕಂಡಿರುವ ಮಹೀಂದ್ರಾ ಅಗ್ಗದ ಬೆಲೆ ಮೊಜೊ ಬೈಕ್, ಬಿಎಸ್-4 ಜೊತೆ ಡ್ಯುಯಲ್ ಎಕ್ಸಾಸ್ಟ್ ಬದಲಾಗಿ ಸಿಂಗಲ್ ಎಕ್ಸಾಸ್ಟ್ ಸೌಲಭ್ಯವನ್ನು ಹೊಂದಿದೆ.

ಬಿಡುಗಡೆಗೆ ಸಜ್ಜುಗೊಂಡ ಮಹೀಂದ್ರಾ ವಿನೂತನ ಮೊಜೊ ಬೈಕ್

ಇದಲ್ಲದೇ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ವಿನ್ಯಾಸದಲ್ಲೂ ಹೆಚ್ಚಿನ ಬದಲಾವಣೆ ತರಲಾಗಿದ್ದು, ಈ ಹಿಂದಿನ ಮಾದರಿಯಂತೆಯೇ 295 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರಲಿದೆ.

ಬಿಡುಗಡೆಗೆ ಸಜ್ಜುಗೊಂಡ ಮಹೀಂದ್ರಾ ವಿನೂತನ ಮೊಜೊ ಬೈಕ್

ಇದರ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಮಹೀಂದ್ರಾ ಹೊಸ ಮೊಜೊ ಬೈಕ್ ಮಾದರಿಯೂ 26.8-ಬಿಎಚ್‌ಪಿ ಮತ್ತು 30-ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, ಕೆಲವು ಐಷಾರಾಮಿ ವೈಶಿಷ್ಟ್ಯತೆಗಳನ್ನು ಕಡಿತಗೊಳಿಸಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಮಹೀಂದ್ರಾ ವಿನೂತನ ಮೊಜೊ ಬೈಕ್

ಆದ್ರೆ ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದ್ದು, ಹೊಸ ಮಾದರಿಯಲ್ಲಿ 21-ಲೀಟರ್ ಫ್ಯೂಲ್ ಟ್ಯಾಂಕ್ ಇರಿಸಲಾಗಿದೆ. ಜೊತೆಗೆ ಕೆಟಿಎಂ 250, ಬಜಾಜ್ ಡೋಮಿನಾರ್ 400 ಮಾದರಿಗಳನ್ನು ಹಿಂದಿಕ್ಕುವ ತವಕದಲ್ಲಿದೆ.

ಬಿಡುಗಡೆಗೆ ಸಜ್ಜುಗೊಂಡ ಮಹೀಂದ್ರಾ ವಿನೂತನ ಮೊಜೊ ಬೈಕ್

ಹೀಗಾಗಿ ಹೊಸ ಬೈಕ್ ಬೆಲೆ ನಿಗದಿಯಲ್ಲಿ ಮಹತ್ವದ ನಿರ್ಧಾರವನ್ನು ಪ್ರಕಟಿಸಲಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮೊಜೊ ಬೈಕಿನ ಬೆಲೆ ಗಣನೀಯ ಮಟ್ಟದಲ್ಲಿ ಇಳಿಕೆ ಮಾಡಲು ಮುಂದಾಗಿದ್ದು, ಕೆಲವು ಸುದ್ಧಿ ಮೂಲಗಳ ಪ್ರಕಾರ ರೂ.1.05 ಲಕ್ಷದಿಂದ 1.10 ಲಕ್ಷಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ.

ಬಿಡುಗಡೆಗೆ ಸಜ್ಜುಗೊಂಡ ಮಹೀಂದ್ರಾ ವಿನೂತನ ಮೊಜೊ ಬೈಕ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಮಾರುಕಟ್ಟೆಯಲ್ಲಿರುವ ಮೊಜೊ ಬೈಕ್ ಬೆಲೆಯೂ ರೂ.1.72 ಲಕ್ಷಕ್ಕೆ ಲಭ್ಯವಿದ್ದು, ಅದೇ ಮಾದರಿಯನ್ನು ಕೆಲವು ತಾಂತ್ರಿಕ ಬದಲಾವಣೆ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಪರಿಚಯಿಸಲು ಮಹೀಂದ್ರಾ ಮುಂದಾಗಿದ್ದು, ಬಿಡುಗಡೆ ನಂತರವಷ್ಟೇ ಪೂರ್ಣ ಮಾಹಿತಿ ಲಭ್ಯವಾಗಲಿದೆ.

Article Published On: Thursday, October 12, 2017, 13:37 [IST]
English summary
Read in Kannada about New Cheaper Variant Of Mahindra Mojo Spotted Testing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+