2017ರ ಮಾರುತಿ ಸುಜುಕಿ ದಕ್ಷಿಣ ಡೇರ್- ಮುನ್ನಡೆ ಸಾಧಿಸಿದ ಸಾಮಾರ್ಥ್ ಯಾದವ್ ಮತ್ತು ಎಸ್‌.ಎನ್ ನಿಜಾಮಿ

ಮೊಬಿಲ್ ಒನ್ ಸಂಸ್ಥೆಯ ನೇತೃತ್ವದಲ್ಲಿ ಜುಲೈ 16ರಿಂದ ಆರಂಭವಾಗಿರುವ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ‌ರ‍್ಯಾಲಿಯ ಮೊದಲ ದಿನದ ಸ್ಪರ್ಧೆ ಕೊನೆಗೊಂಡಿದ್ದು, ಮೋಟಾರ್ ಸ್ಪೋರ್ಟ್ ಸ್ಪರ್ಧೆಯು ಹತ್ತು ಹಲವು ವಿಶೇಷತೆಗಳಿಗೆ ಕಾರಣವಾಯಿತು.

By Praveen

ಮೊಬಿಲ್ ಒನ್ ಸಂಸ್ಥೆಯ ನೇತೃತ್ವದಲ್ಲಿ ಜುಲೈ 16ರಿಂದ ಆರಂಭವಾಗಿರುವ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ‌ರ‍್ಯಾಲಿಯ ಮೊದಲ ದಿನದ ಸ್ಪರ್ಧೆ ಕೊನೆಗೊಂಡಿದ್ದು, ಮೋಟಾರ್ ಸ್ಪೋರ್ಟ್ ಸ್ಪರ್ಧೆಯು ಹತ್ತು ಹಲವು ವಿಶೇಷತೆಗಳಿಗೆ ಕಾರಣವಾಯಿತು.

ರೋಚಕತೆಗೆ ಕಾರಣವಾದ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ

ಬೆಂಗಳೂರಿನಿಂದ ಆರಂಭವಾಗಿರುವ ದಕ್ಷಿಣ ಡೇರ್ ಮೋಟಾರ್ ರ‍್ಯಾಲಿಯು ಮೊದಲ ಹಂತವಾಗಿ ರಾಜಧಾನಿಯಿಂದ 463 ಕಿ.ಮಿ(ಆಪ್ ರೋಡ್) ದೂರದಲ್ಲಿರುವ ಚಿತ್ರದುರ್ಗ ತುಲುಪಿದ್ದು, ಅಲ್ಟಿಮೇಟ್ ಕಾರುಗಳ ವಿಭಾಗದಲ್ಲಿ ಸಾಮರ್ಥ್ ಯಾದವ್ ಮತ್ತು ಎಸ್ ಎನ್ ನಿಜಾಮಿ ಮುನ್ನಡೆ ಸಾಧಿಸಿದರು.

ರೋಚಕತೆಗೆ ಕಾರಣವಾದ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ

ಕೇವಲ 2 ಗಂಟೆ 46 ನಿಮಿಷ 26 ಸೇಕೆಂಡುಗಳಲ್ಲಿ ನಿಗದಿತ ಗುರಿ ತಲುಪಿದ ಸಾಮರ್ಥ್ ಯಾದವ್ ಮತ್ತು ಎಸ್ ಎನ್ ನಿಜಾಮಿ, 463 ಕಿ.ಮಿ ದೂರವನ್ನು ಯಾವುದೇ ತೊಂದರೆ ಇಲ್ಲದೇ ಗುರಿ ತಲುಪುವಲ್ಲಿ ಯಶಸ್ವಿಯಾದರು.

ರೋಚಕತೆಗೆ ಕಾರಣವಾದ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ

ದ್ವಿತೀಯ ಸ್ಥಾನಕ್ಕೆ ತೀವ್ರ ಸೆಣಸಾಟ ನಡೆಸಿದ ಮಾರುತಿ ಸುಜುಕಿ ತಂಡದ ಸದಸ್ಯರಾದ ಸಂದೀಪ್ ಶರ್ಮಾ ಮತ್ತು ಕರಣ್ ಆರ್ಯಾ 2 ಗಂಟೆ 46 ನಿಮಿಷ 35 ಸೇಕೆಂಡುಗಳಲ್ಲಿ ಗುರಿ ತಲುಪಿದರು.

ರೋಚಕತೆಗೆ ಕಾರಣವಾದ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ

ಅದೇ ರೀತಿಯಾಗಿ ಆಪ್ ರೋಡಿಂಗ್ ಕಸರತ್ತುಗಳನ್ನು ಎದುರಿಸಿದ ಮಾರುತಿ ಸುಜುಕಿಯ ಮತ್ತೊಂದು ತಂಡದ ಸದಸ್ಯರಾದ ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್ ಜೋಡಿಯು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ರೋಚಕತೆಗೆ ಕಾರಣವಾದ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ

ಇದಲ್ಲದೇ ಅಲ್ಟಿಮೇಟ್ ದ್ವಿಚಕ್ರ ವಾಹನ ವಿಭಾಗದಲ್ಲಿ ಸಂಜಯ್ ಕುಮಾರ್ 1 ಗಂಟೆ, 50 ನಿಮಿಷ, 0.8 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಮೊದಲ ಹಂತದಲ್ಲಿ ಮುನ್ನಡೆ ಸಾಧಿಸಿದ್ದು, ನಟರಾಜ್ ಆರ್ 1 ಗಂಟೆ, 50 ನಿಮಿಷ, 42 ಸೆಕೆಂಡ್‌ಗಳಲ್ಲಿ ಎರಡನೇ ಸ್ಥಾನ ಮತ್ತು ಅಬ್ದುಲ್ ವಾಹಿದ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ರೋಚಕತೆಗೆ ಕಾರಣವಾದ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ

ಸದ್ಯ ಎಂಡ್ಯುರೆನ್ಸ್ ಬೈಕ್ ವಿಭಾಗದಲ್ಲಿ ಸುಬಿರ್ ರಾಯ್ ನಿರವ್ ಮೆಹ್ತಾ ಮುನ್ನಡೆ ಕಾಯ್ದುಕೊಂಡಿದ್ದು, 15ನೇ ದಕ್ಷಿಣ ಡೇರ್ ಮೋಟಾರ್ ರ‍್ಯಾಲಿ ಭಾರೀ ರೋಚಕತೆಯಿಂದ ಕೂಡಿದೆ.

Most Read Articles

Kannada
English summary
Read in Kannada about 2017 Maruti Suzuki Dakshin Dare Rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X