ವಿನೂತನ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ಪರಿಚಯಿಸಿದ ಹಿರೋ

ಹಿರೋ ಮೊಟೊಕಾರ್ಪ್ ಸಂಸ್ಥೆಯು ತನ್ನ ಜನಪ್ರಿಯ ಮಾದರಿಗಳಾದ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ವಿನೂತನ ಆವೃತ್ತಿಗಳನ್ನು ದೇಶಿಯ ಮಾರುಕಟ್ಟೆಗಾಗಿ ಪರಿಚಯಿಸಿದೆ.

By Praveen

ದ್ವಿಚಕ್ರ ವಾಹನಗಳ ಮಾರಾಟ ಮತ್ತು ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸಿರುವ ಹಿರೋ ಮೊಟೊಕಾರ್ಪ್ ಸಂಸ್ಥೆಯು ತನ್ನ ಜನಪ್ರಿಯ ಮಾದರಿಗಳಾದ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ವಿನೂತನ ಆವೃತ್ತಿಗಳನ್ನು ದೇಶಿಯ ಮಾರುಕಟ್ಟೆಗಾಗಿ ಪರಿಚಯಿಸಿದೆ.

ವಿನೂತನ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ಪರಿಚಯಿಸಿದ ಹಿರೋ

ಮಧ್ಯಮ ವರ್ಗಗಳ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹಿರೋ ಸಂಸ್ಥೆಯು ಇದೀಗ 110 ಸಿಸಿ ಫ್ಯಾಷನ್ ಪ್ರೋ, 110 ಸಿಸಿ ಫ್ಯಾಷನ್ ಎಕ್ಸ್ ಪ್ರೋ ಮತ್ತು 125 ಸಿಸಿ ಸೂಪರ್ ಸ್ಪ್ಲೆಂಡರ್ ಆವೃತ್ತಿಗಳ ಹೊಸ ಮಾದರಿಗಳನ್ನು ಪರಿಚಯಿಸಲಾಗಿದ್ದು, ಜನವರಿ 1 ರಿಂದ ಹೊಸ ಬೈಕ್‌ಗಳು ಮಾರಾಟಕ್ಕೆ ಲಭ್ಯವಿರಲಿವೆ.

ವಿನೂತನ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ಪರಿಚಯಿಸಿದ ಹಿರೋ

ಜೊತೆಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿರುವ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ಹೊಸ ಆವೃತ್ತಿಗಳು ಈ ಹಿಂದಿನ ಮಾದರಿಗಳಿಂತ ಸುಧಾರಿತ ತಂತ್ರಜ್ಞಾನವನ್ನು ಪಡೆದುಕೊಂಡಿದ್ದು, ಬೆಲೆಗಳು ಕೂಡಾ ಕೊಂಚ ಹೆಚ್ಚಳವಾಗಿವೆ.

ವಿನೂತನ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ಪರಿಚಯಿಸಿದ ಹಿರೋ

ನ್ಯೂ ಫ್ಯಾಷನ್ ಪ್ರೋ

110 ಸಿಸಿ ಸಾಮರ್ಥ್ಯದ ಫ್ಯಾಷನ್ ಪ್ರೋ ಆವೃತ್ತಿಯು ಈಗಾಗಲೇ ಭಾರೀ ಜನಪ್ರಿಯತೆ ಸಾಧಿಸಿದ್ದು, ಹೊಸ ಮಾದರಿಯಲ್ಲಿ ಬಿಎಸ್ 4 ವೈಶಿಷ್ಟ್ಯತೆಗಳು ಮತ್ತು ಐ3ಎಸ್ ತಂತ್ರಜ್ಞಾನ ಬಳಕೆಯಿಂದಾಗಿ ಬೈಕ್ ಸವಾರರಿಗೆ ಹೊಸ ಅನುಭೂತಿ ನೀಡಲಿವೆ.

Recommended Video

Driverless Auto Rickshaw On Indian Highway
ವಿನೂತನ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ಪರಿಚಯಿಸಿದ ಹಿರೋ

ನ್ಯೂ ಫ್ಯಾಷನ್ ಎಕ್ಸ್ ಪ್ರೋ

ಯುವ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದಲೇ 110 ಸಿಸಿ ಸಾಮರ್ಥ್ಯದ ಫ್ಯಾಷನ್ ಎಕ್ಸ್ ಪ್ರೋ ಅಭಿವೃದ್ದಿ ಮಾಡಿರುವ ಹಿರೋ ಸಂಸ್ಥೆಯು ಹೊಸ ಬೈಕ್ ಮಾದರಿಯನ್ನು ಶಾರ್ಪ್ ಲುಕ್‌ ಜೊತೆಗೆ ಸ್ಪೋರ್ಟ್ ಬೈಕ್‌ನಂತೆ ಹಲವು ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ.

ವಿನೂತನ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ಪರಿಚಯಿಸಿದ ಹಿರೋ

ನ್ಯೂ ಸೂಪರ್ ಸ್ಪ್ಲೆಂಡರ್

ಬೆಸ್ಟ್ ಕ್ಲಾಸ್ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ನ್ಯೂ ಸೂಪರ್ ಸ್ಪ್ಲೆಂಡರ್ ಆವೃತ್ತಿಯು 125 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 11.2-ಬಿಎಚ್‌ಪಿ, 11-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ವಿನೂತನ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ಪರಿಚಯಿಸಿದ ಹಿರೋ

ಈ ಮೂಲಕ ಅತ್ಯುತ್ತಮ ಇಂಧನ ಕಾರ್ಯಕ್ಷಮತೆಯನ್ನು ಕೂಡಾ ಕಾಯ್ದುಕೊಂಡಿರುವ ಸೂಪರ್ ಸ್ಪ್ಲೆಂಡರ್, ಎಹೆಚ್‌ಓ, ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ವೈಡರ್ ರಿರ್ ಟೈರ್, ಸಿಕ್ ಟೈಲ್ ಲ್ಯಾಂಪ್ ಜೊತೆಗೆ ಡಿಸ್ಕ್ ಬ್ರೇಕ್ ಮತ್ತು ಡ್ರಮ್ ಬ್ರೇಕ್ ಆವೃತ್ತಿಯಲ್ಲಿಆಯ್ಕೆ ಮಾಡಬಹುದಾಗಿದೆ.

ವಿನೂತನ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ಪರಿಚಯಿಸಿದ ಹಿರೋ

ಲಭ್ಯವಿರುವ ಬಣ್ಣಗಳು- ಸ್ಪೋರ್ಟ್ ರೆಡ್ ವಿಥ್ ಬ್ಲ್ಯಾಕ್, ಪವರ್‌ಫುಲ್ ಆ್ಯಂಡ್ ವಾರ್ಮ್, ಬ್ಲ್ಯಾಕ್ ವಿಥ್ ಸ್ಪೋರ್ಟ್ ರೆಡ್, ಬ್ಯಾಕ್ ವಿಥ್ ಟೆಕ್ನೋ ಬ್ಲ್ಯೂ , ವೈಬ್ರಂಟ್ ಆ್ಯಂಡ್ ಯುಥ್‌ಫುಲ್, ಬ್ಲ್ಯಾಕ್ ವಿಥ್ ಹೆವಿ ಗ್ರೇ, ಫೋರ್ಸ್ ಸಿಲ್ವರ್ ವಿಥ್ ಬ್ಲ್ಯಾಕ್ ಮತ್ತು ಕೂಲ್ ಆ್ಯಂಡ್ ಬ್ರೈಟ್ ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದೆ.

ವಿನೂತನ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ಪರಿಚಯಿಸಿದ ಹಿರೋ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದೆ ಹಲವು ಬೈಕ್ ಮಾದರಿಗಳನ್ನು ಪರಿಚಯಿಸಿ ಯಶಸ್ವಿಯಾಗಿರುವ ಹಿರೋ ಸಂಸ್ಥೆಯು ಇದೀಗ ಫ್ಯಾಷನ್ ಪ್ರೋ, ಫ್ಯಾಷನ್ ಎಕ್ಸ್ ಪ್ರೋ ಮತ್ತು ಸೂಪರ್ ಸ್ಪ್ಲೆಂಡರ್ ಮುಂದುವರಿದ ಆವೃತ್ತಿಗಳನ್ನು ಪರಿಚಯಿಸಿದ್ದು, ಜನವರಿ ಮೊದಲ ವಾರದಿಂದಲೇ ನಿಮ್ಮ ಹತ್ತಿರದ ಹಿರೋ ಶೋರಂಗಳಲ್ಲಿ ಖರೀದಿಗೆ ಲಭ್ಯವಿರಲಿವೆ.

More from DriveSpark

Article Published On: Thursday, December 21, 2017, 14:31 [IST]
English summary
Read in Kannada about Hero MotoCorp Unveils The New Passion Pro, Passion XPro And Super Splendor In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+