ಬಿಡುಗಡೆಗೂ ಮುನ್ನ ಸೋರಿಕೆಯಾದ ಹೋಂಡಾ ಗೋಲ್ಡ್ ವಿಂಗ್ ಚಿತ್ರಗಳು
ಬಿಡುಗಡೆಗೆ ಸಿದ್ಧಗೊಂಡಿರುವ ಹೋಂಡಾ ನಿರ್ಮಾಣದ ಐಷಾರಾಮಿ ಬೈಕ್ ಗೋಲ್ಡ್ ವಿಂಗ್ ಭಾರತೀಯ ಮಾರುಕಟ್ಟೆಗೆ ಅಕ್ಟೋಬರ್ 24ರಂದು ಲಗ್ಗೆಯಿಡುತ್ತಿದ್ದು, ಇದಕ್ಕೂ ಮುನ್ನ ವಿನೂತನ ಬೈಕಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿವೆ.
ಬಿಡುಗಡೆಗೆ ಸಿದ್ಧಗೊಂಡಿರುವ ಹೋಂಡಾ ನಿರ್ಮಾಣದ ಐಷಾರಾಮಿ ಬೈಕ್ ಗೋಲ್ಡ್ ವಿಂಗ್ ಭಾರತೀಯ ಮಾರುಕಟ್ಟೆಗೆ ಅಕ್ಟೋಬರ್ 24ರಂದು ಲಗ್ಗೆಯಿಡುತ್ತಿದ್ದು, ಇದಕ್ಕೂ ಮುನ್ನ ವಿನೂತನ ಬೈಕಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿವೆ.

ಸೋರಿಕೆಯಾಗಿರುವ ಚಿತ್ರಗಳ ಪ್ರಕಾರ 2018ರ ಗೋಲ್ಡ್ ವಿಂಗ್ ಸಾಕಷ್ಟು ಸುಧಾರಿತ ತಂತ್ರಜ್ಞಾನಗಳ ವ್ಯವಸ್ಥೆಗಳೊಂದಿಗೆ ಕ್ರಿಮ್ ಲೆಯರ್ ಹೊಂದಿದ್ದು, 2018ರ ಆವೃತ್ತಿ ಮೇಲೆ ಹೋಂಡಾ ಸಂಸ್ಥೆಯು ಭಾರೀ ನೀರಿಕ್ಷೆ ಇಟ್ಟುಕೊಂಡಿದೆ.

ಹಾರ್ಲೇ ಡೇವಿಡ್‌ಸನ್ ಸಿವಿಒ ಲಿಮಿಟೆಡ್ ಮತ್ತು ಇಂಡಿಯನ್ ರೋಡ್ ಮಾಸ್ಟರ್ ಬೈಕ್ ಪ್ರತಿಸ್ಪರ್ಧಿಯಾಗಿ 2018ರ ಹೋಂಡಾ ಗೋಲ್ಡ್ ವಿಂಗ್ ಸಿದ್ಧಗೊಂಡಿದ್ದು, 1,832 ಸಿಸಿ ಫ್ಯಾಟ್ ಸಿಕ್ಸ್ ಸಿಲಿಂಡರ್ ಎಂಜಿನ್ ವ್ಯವಸ್ಥೆ ಪಡೆದುಕೊಂಡಿವೆ.

ಹೀಗಾಗಿ 117-ಬಿಎಚ್‌ಪಿ ಮತ್ತು 167-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿರುವ ಗೋಲ್ಡ್ ವಿಂಗ್‌ನಲ್ಲಿ ಯುರೋ ಫೈವ್ ವೈಶಿಷ್ಟ್ಯತೆಗಳ ಎಲೆಕ್ಟ್ರಿಕ್ ರಿವರ್ಸ್ ಗೇರ್ ಸೌಲಭ್ಯವನ್ನು ಅಳವಡಿಸಲಾಗಿದೆ.

ಜೊತೆಗೆ ಹೊಸ ಬೈಕ್ ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಮಲ್ಟಿಪಲ್ ರೈಡ್ ಮೂಡ್, ಎಬಿಎಸ್, ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ.

ಈ ಹಿಂದಿನ ಗೋಲ್ಡ್ ವಿಂಗ್ ಮಾದರಿಗಿಂತಲೂ 2018ರ ಮಾದರಿ ಗೋಲ್ಡ್ ವಿಂಗ್‌ನಲ್ಲಿ ಭಾರೀ ಬದಲಾವಣೆ ತಂದಿರುವ ಹೋಂಡಾ ಸಂಸ್ಥೆಯು, ದೂರದ ಪ್ರಮಾಣಕ್ಕೆ ಹಾಗೂ ಕ್ಲಾಸಿಕ್ ಮಾದರಿಯ ಬೈಕ್ ಸವಾರಿಗೆ ಅನುಕೂಲಕರವಾಗುವಂತೆ ಬೃಹದಾಕರವಾದ ಆಸನವನ್ನು ಒದಗಿಸಲಾಗಿದೆ.

ಇನ್ನು 2018ರ ಗೋಲ್ಡ್ ವಿಂಗ್ ಬೆಲೆಗಳ ಬಗೆಗೆ ನಿಖರ ಮಾಹಿತಿ ಇಲ್ಲವಾದರೂ ರೂ.15 ರಿಂದ 18 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಯುರೋ ಫೈವ್ ವೈಶಿಷ್ಟ್ಯತೆಗಳನ್ನು ಒದಗಿಸಿರುವ ಹಿನ್ನೆಲೆ ಈ ಹಿಂದಿನ ಮಾದರಿಗಿಂತ ರೂ.2 ಲಕ್ಷ ಹೆಚ್ಚಳ ಮಾಡುವು ಸಾಧ್ಯತೆಗಳಿವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಸದ್ಯ ಐಷಾರಾಮಿ ಕಾರು ಮಾದರಿಗಳಲ್ಲಿ ಉತ್ತಮ ಬೇಡಿಕೆ ಹೊಂದಿರುವ ಮಾದರಿಗಳಲ್ಲಿ ಗೋಲ್ಡ್ ವಿಂಗ್ ಕೂಡಾ ಒಂದಾಗಿದ್ದು, ಯುರೋ ಫೈವ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹಿನ್ನೆಲೆ ಹೊಸ ಮಾದರಿಯು ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದೆ ಎನ್ನಬಹುದು.


Click it and Unblock the Notifications