ಬಿಡುಗಡೆಗೆ ಸಜ್ಜುಗೊಂಡ ಐಷಾರಾಮಿ ಬೈಕ್ ಹೋಂಡಾ ಗೋಲ್ಡ್ ವಿಂಗ್..!!
ಬಿಡುಗಡೆಗೆ ಸಿದ್ಧಗೊಂಡಿರುವ ಹೋಂಡಾ ನಿರ್ಮಾಣದ ಐಷಾರಾಮಿ ಬೈಕ್ ಗೋಲ್ಡ್ ವಿಂಗ್ ಭಾರತೀಯ ಮಾರುಕಟ್ಟೆಗೆ ಅಕ್ಟೋಬರ್ 24ರಂದು ಲಗ್ಗೆಯಿಡುತ್ತಿದ್ದು, ಈ ಬಗ್ಗೆ ಹೋಂಡಾ ಸಂಸ್ಥೆಯು ಟೀಸರ್ ಬಿಡುಗಡೆಗೊಳಿಸಿದೆ.
ಬಿಡುಗಡೆಗೆ ಸಿದ್ಧಗೊಂಡಿರುವ ಹೋಂಡಾ ನಿರ್ಮಾಣದ ಐಷಾರಾಮಿ ಬೈಕ್ ಗೋಲ್ಡ್ ವಿಂಗ್ ಭಾರತೀಯ ಮಾರುಕಟ್ಟೆಗೆ ಅಕ್ಟೋಬರ್ 24ರಂದು ಲಗ್ಗೆಯಿಡುತ್ತಿದ್ದು, ಈ ಬಗ್ಗೆ ಹೋಂಡಾ ಸಂಸ್ಥೆಯು ಟೀಸರ್ ಬಿಡುಗಡೆಗೊಳಿಸಿದೆ.

ಬಿಡುಗಡೆಯಾಗಿರುವ ಟೀಸರ್ ಪ್ರಕಾರ 2018ರ ಗೋಲ್ಡ್ ವಿಂಗ್ ಮಾದರಿಯ ಮೇಲೆ ಭಾರೀ ನೀರಿಕ್ಷೆ ಇಟ್ಟುಕೊಂಡಿರುವ ಹೋಂಡಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನಗಳ ಜೊತೆ ಜೊತೆಗೆ ಕ್ರಿಮ್ ಲೆಯರ್ ಮೂಲಕ ಹೊಸ ಉತ್ಪನ್ನವನ್ನು ಅಭಿವೃದ್ದಿಗೊಳಿಸಿದೆ.

ಹಾರ್ಲೇ ಡೇವಿಡ್‌ಸನ್ ಸಿವಿಒ ಲಿಮಿಟೆಡ್ ಮತ್ತು ಇಂಡಿಯನ್ ರೋಡ್ ಮಾಸ್ಟರ್ ಬೈಕ್ ಪ್ರತಿಸ್ಪರ್ಧಿಯಾಗಿ 2018ರ ಹೋಂಡಾ ಗೋಲ್ಡ್ ವಿಂಗ್ ಸಿದ್ಧಗೊಂಡಿದ್ದು, 1,832 ಸಿಸಿ ಫ್ಯಾಟ್ ಸಿಕ್ಸ್ ಸಿಲಿಂಡರ್ ಎಂಜಿನ್ ವ್ಯವಸ್ಥೆ ಪಡೆದುಕೊಂಡಿವೆ.
Recommended Video


ಹೀಗಾಗಿ 117-ಬಿಎಚ್‌ಪಿ ಮತ್ತು 167-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿರುವ ಗೋಲ್ಡ್ ವಿಂಗ್, ಯುರೋ ಫೈವ್ ವೈಶಿಷ್ಟ್ಯತೆಗಳೊಂದಿಗೆ ಎಲೆಕ್ಟ್ರಿಕ್ ರಿವರ್ಸ್ ಗೇರ್ ಸೌಲಭ್ಯವನ್ನು ಒದಗಿಸಲಾಗಿದೆ.

ಜೊತೆಗೆ ಹೊಸ ಬೈಕ್ ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಮಲ್ಟಿಪಲ್ ರೈಡ್ ಮೂಡ್, ಎಬಿಎಸ್, ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ.

ಈ ಹಿಂದಿನ ಗೋಲ್ಡ್ ವಿಂಗ್ ಮಾದರಿಗಿಂತಲೂ 2018ರ ಮಾದರಿ ಗೋಲ್ಡ್ ವಿಂಗ್‌ನಲ್ಲಿ ಭಾರೀ ಬದಲಾವಣೆ ತಂದಿರುವ ಹೋಂಡಾ ಸಂಸ್ಥೆಯು, ದೂರದ ಪ್ರಮಾಣಕ್ಕೆ ಹಾಗೂ ಕ್ಲಾಸಿಕ್ ಮಾದರಿಯ ಬೈಕ್ ಸವಾರಿಗೆ ಅನುಕೂಲಕರವಾಗುವಂತೆ ಬೃಹದಾಕರವಾದ ಆಸನವನ್ನು ಒದಗಿಸಲಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಸದ್ಯ ಐಷಾರಾಮಿ ಕಾರು ಮಾದರಿಗಳಲ್ಲಿ ಉತ್ತಮ ಬೇಡಿಕೆ ಹೊಂದಿರುವ ಮಾದರಿಗಳಲ್ಲಿ ಗೋಲ್ಡ್ ವಿಂಗ್ ಕೂಡಾ ಒಂದಾಗಿದ್ದು, ಯುರೋ ಫೈವ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹಿನ್ನೆಲೆ ಹೊಸ ಮಾದರಿಯು ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದೆ ಎನ್ನಬಹುದು.


Click it and Unblock the Notifications