ಬಿಡುಗಡೆಗೂ ಮುನ್ನ ಹಿರೋ ಎಕ್ಸ್‌ಟ್ರಿಮ್ 200ಎಸ್ ಬೈಕಿನ ಉತ್ಪಾದನಾ ಚಿತ್ರಗಳು ಸೋರಿಕೆ

ಎಕ್ಸ್‌ಟ್ರಿಮ್ 200ಎಸ್ ಹೊಸ ಬೈಕ್ ಮಾದರಿಯೊಂದನ್ನು ಪ್ರದರ್ಶನಗೊಳಿಸಿದ್ದ ಹಿರೋ ಮೋಟೋಕಾರ್ಪ್‌ ಸಂಸ್ಥೆಯು ಮುಂದಿನ ತಿಂಗಳು ಬಿಡುಗಡೆ ಮಾಡುತ್ತಿದ್ದು, ಈ ನಡುವೆ ಹೊಸ ಬೈಕಿನ ಉತ್ಪಾದನಾ ಚಿತ್ರಗಳು ಸೋರಿಕೆಯಾಗಿವೆ.

By Praveen

ಈ ಹಿಂದೆ 2016ರ ಆಟೋ ಮೇಳದಲ್ಲಿ 200-ಸಿಸಿ ಸಾಮರ್ಥ್ಯ ಎಕ್ಸ್‌ಟ್ರಿಮ್ 200ಎಸ್ ಹೊಸ ಬೈಕ್ ಮಾದರಿಯೊಂದನ್ನು ಪ್ರದರ್ಶನಗೊಳಿಸಿದ್ದ ಹಿರೋ ಮೋಟೋಕಾರ್ಪ್‌ ಸಂಸ್ಥೆಯು ಮುಂದಿನ ತಿಂಗಳು ಬಿಡುಗಡೆ ಮಾಡುತ್ತಿದ್ದು, ಈ ನಡುವೆ ಹೊಸ ಬೈಕಿನ ಉತ್ಪಾದನಾ ಚಿತ್ರಗಳು ಸೋರಿಕೆಯಾಗಿವೆ.

ಬಿಡುಗಡೆಗೂ ಮುನ್ನ ಎಕ್ಸ್‌ಟ್ರಿಮ್ 200ಎಸ್ ಬೈಕಿನ ಚಿತ್ರಗಳು ಸೋರಿಕೆ

ಸುಧಾರಿತ ತಂತ್ರಜ್ಞಾನಗಳ ವ್ಯವಸ್ಥೆಯನ್ನು ಕಲ್ಪಿಸಿರುವ ಹಿನ್ನೆಲೆ ಎಕ್ಸ್‌ಟ್ರಿಮ್ 200ಎಸ್ ಹೊಸ ಬೈಕ್ ಮಾದರಿಯು ಇತರೆ ಕಂಪನಿಗಳ 180ಸಿಸಿ ಯಿಂದ 220 ಸಿಸಿ ಸಾಮರ್ಥ್ಯ ಬೈಕ್‌ಗಳಿಂತ ಭಿನ್ನತೆಯನ್ನು ಹೊಂದಿದ್ದು, ಕೆಲವು ವರದಿಗಳ ಪ್ರಕಾರ 150 ಸಿಸಿ ಸಾಮರ್ಥ್ಯದ ಮಾದರಿಯ ಕೂಡಾ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಬಿಡುಗಡೆಗೂ ಮುನ್ನ ಎಕ್ಸ್‌ಟ್ರಿಮ್ 200ಎಸ್ ಬೈಕಿನ ಚಿತ್ರಗಳು ಸೋರಿಕೆ

ಹೀಗಾಗಿ ಪ್ರಮುಖ ಬೈಕ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಎಕ್ಸ್‌ಟ್ರಿಮ್ 200ಎಸ್ ಬೈಕ್ ಅನ್ನು ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದ್ದು, ಸ್ಲಾಯರ್‌ಗಳು ಮತ್ತು ಮುಂಭಾಗದ ನೋಟದಲ್ಲಿ ಸ್ಪೋರ್ಟ್ ಲುಕ್ ನೀಡಲಾಗಿದೆ.

Recommended Video

TVS Apache RR 310 Launched In India
ಬಿಡುಗಡೆಗೂ ಮುನ್ನ ಎಕ್ಸ್‌ಟ್ರಿಮ್ 200ಎಸ್ ಬೈಕಿನ ಚಿತ್ರಗಳು ಸೋರಿಕೆ

200ಸಿಸಿ ಸಾಮರ್ಥ್ಯ ನೀಡಿರುವ ಹಿನ್ನೆಲೆ ಎಕ್ಸ್‌ಟ್ರಿಮ್ 200ಎಸ್ ಹೊಸ ಬೈಕಿನಲ್ಲಿ ಏರ್ ಕೂಲ್ಡ್ ಎಂಜಿನ್ ಅಳವಡಿಕೆ ಮಾಡಲಾಗಿದ್ದು, ಬಿಡುಗಡೆ ಬಳಿಕ ಆಯಿಲ್ ಕೂಲ್ಡ್ ಆವೃತ್ತಿಯ ಎಂಜಿನ್ ಆಯ್ಕೆಯು ಕೂಡಾ ಲಭ್ಯವಾಗಲಿದೆ. ಇದರಿಂದ ಅತಿಯಾಗಿ ಉತ್ಪತ್ತಿಯಾಗುವ ಶಾಖವನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಬಹುದು.

ಬಿಡುಗಡೆಗೂ ಮುನ್ನ ಎಕ್ಸ್‌ಟ್ರಿಮ್ 200ಎಸ್ ಬೈಕಿನ ಚಿತ್ರಗಳು ಸೋರಿಕೆ

ಇನ್ನು ಎಕ್ಸ್‌ಟ್ರಿಮ್ 200ಎಸ್ ಬೈಕ್ ಮಾದರಿಯು 18-ಬಿಎಚ್‌ಪಿ ಮತ್ತು 17-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಮಾದರಿಯಾಗಿದ್ದು, ಎಬಿಎಸ್ ಸೇರಿದಂತೆ ಎರಡು ಬದಿಯ ಚಕ್ರಗಳು ಡಿಸ್ಕ್ ಬ್ರೇಕ್‌ಯೊಂದಿಗೆ ಬಿಡುಗಡೆಗೊಳ್ಳಲಿವೆ.

ಬಿಡುಗಡೆಗೂ ಮುನ್ನ ಎಕ್ಸ್‌ಟ್ರಿಮ್ 200ಎಸ್ ಬೈಕಿನ ಚಿತ್ರಗಳು ಸೋರಿಕೆ

ಆದರೆ ಬೆಲೆಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರೂ ದೆಹಲಿ ಎಕ್ಸ್‌ಶೋರಂಗಳ ಬೆಲೆಗಳ ಪ್ರಕಾರ ಅಂದಾಜು ರೂ.90 ಸಾವಿರದಿಂದ ರೂ.1.15 ಲಕ್ಷ ಇರಬಹುದೆಂದು ನೀರಿಕ್ಷೆ ಮಾಡಲಾಗಿದೆ.

ಬಿಡುಗಡೆಗೂ ಮುನ್ನ ಎಕ್ಸ್‌ಟ್ರಿಮ್ 200ಎಸ್ ಬೈಕಿನ ಚಿತ್ರಗಳು ಸೋರಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

200ಸಿಸಿ ಸಾಮರ್ಥ್ಯ ಎಕ್ಸ್‌ಟ್ರಿಮ್ 200ಎಸ್ ಹೊಸ ಬೈಕ್ ಮಾದರಿಯೊಂದಿಗೆ ಹಿರೋ ಸಂಸ್ಥೆಯು ಹೊಸ ಅಧ್ಯಾಯ ಶುರುಮಾಡಲಿದ್ದು, ಬಜಾಜ್ ಪಲ್ಸರ್ ಎನ್ಎಸ್200, ಟಿವಿಎಸ್ ಅಪಾಚಿ ಆರ್‌ಟಿಆರ್, 2004ವಿ ಬೈಕ್‌ಗಳಿಗೆ ಸ್ಪರ್ಧೆ ನೀಡಲಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Tuesday, December 19, 2017, 19:08 [IST]
English summary
Read in Kannada about Production Spec Hero Xtreme 200S Image Leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+