ಹಿಮಾಲಯನ್ ಮಾರಾಟ ಹಿಂಪಡೆದ ರಾಯಲ್ ಎನ್‌ಫೀಲ್ಡ್
ರಾಯಲ್ ಎನ್‌ಫೀಲ್ಡ್ ಆಪ್ ರೋಡಿಂಗ್ ಆವೃತ್ತಿ ಹಿಮಾಲಯನ್ ಬೈಕ್ ಮಾರಾಟ ಸ್ಥಗಿತಗೊಂಡಿದ್ದು, ಬದಲಾಗಿ ಫ್ಯೂಲ್ ಇಂಜೆಕ್ಷನ್ ಬೈಕ್ ಆವೃತ್ತಿಯನ್ನು ಪರಿಚಯಿಸುತ್ತಿದೆ.
ರಾಯಲ್ ಎನ್‌ಫೀಲ್ಡ್ ಆಪ್ ರೋಡಿಂಗ್ ಆವೃತ್ತಿ ಹಿಮಾಲಯನ್ ಬೈಕ್ ಮಾರಾಟ ಸ್ಥಗಿತಗೊಂಡಿದ್ದು, ಬದಲಾಗಿ ಫ್ಯೂಲ್ ಇಂಜೆಕ್ಷನ್ ಬೈಕ್ ಆವೃತ್ತಿಯನ್ನು ಪರಿಚಯಿಸುತ್ತಿದೆ.

ಬಿಎಸ್3 ಎಂಜಿನ್ ನಿಷೇಧದ ಬಳಿಕ ಸುಧಾರಿತ ತಂತ್ರಜ್ಞಾನ ಹೊಂದಿರುವ ಹಿಮಾಲಯನ್ ಬೈಕ್ ಬಿಡುಗಡೆ ಮುಂದಾಗಿರುವ ರಾಯಲ್ ಎನ್‌ಫೀಲ್ಡ್, ಫ್ಯೂಲ್ ಇಂಜೆಕ್ಷನ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ.

ಈ ಹಿಂದಿನ ಹಿಮಾಲಯನ್ ಕಾರ್ಬ್ಯೂಟೆರ್ ಆವೃತ್ತಿಯಲ್ಲಿ ಕೆಲವು ತಾಂತ್ರಿಕ ದೋಷ ಹಿನ್ನೆಲೆ ಮಾರಾಟ ಸ್ಥಗಿತ ನಿರ್ಧಾರ ತೆಗೆದುಕೊಂಡಿರುವ ರಾಯಲ್ ಎನ್‌ಫೀಲ್ಡ್, ಫ್ಯೂಲ್ ಇಂಜೆಕ್ಷನ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ.

ಈ ಹಿನ್ನೆಲೆ ಫ್ಯೂಲ್ ಇಂಜೆಕ್ಷನ್ ಎಂಜಿನ್ ಹೊಂದಿರುವ ಹಿಮಾಲಯನ್ ಬೈಕ್ ಆವೃತ್ತಿಗಳು ಡಿಲರ್ಸ್ ಬಳಿ ಈಗಾಗಲೇ ಸ್ಟಾಕ್ ಪತ್ತೆಯಾಗಿದ್ದು, ಕೆಲವೇ ದಿನಗಳಲ್ಲಿ ಫ್ಯೂಲ್ ಇಂಜೆಕ್ಷನ್ ಆವೃತ್ತಿ ಖರೀದಿಗೆ ಲಭ್ಯವಾಗಲಿದೆ.

ಇನ್ನು ಈ ಹಿಂದಿನ ಹಿಮಾಲಯನ್ ಬೈಕ್ ಕಾರ್ಯಕ್ಷಮತೆ ಕುರಿತಂತೆ ಹಲವಾರು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ಬ್ರಾಂಡ್ ಮೌಲ್ಯವನ್ನು ಕಾಪಾಡಿಕೊಳ್ಳಲು ರಾಯಲ್ ಎನ್‌ಫೀಲ್ಡ್ ಮಹತ್ವದ ನಿರ್ಧಾರ ಕೈಗೊಂಡಿದೆ.


Click it and Unblock the Notifications