ಸದ್ಯದಲ್ಲೇ ಬದಲಾಗಿದೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಜಮಾನಾ..!!

Written By:

ಕಸ್ಟಮ್ ಮೇಡ್ ಬೈಕ್ ವಿನ್ಯಾಸಗಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ರಾಯಲ್ ಎನ್‌ಫೀಲ್ಡ್, ವಿವಿಧ ರೀತಿಯ ಬೈಕ್ ಮಾದರಿಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಉಂಟು ಮಾಡಿದೆ.

ಸದ್ಯದಲ್ಲೇ ಬದಲಾಗಿದೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಜಮಾನಾ..!!

ದಿನದಿಂದ ದಿನಕ್ಕೆ ಆಟೋ ಉದ್ಯಮ ವಲಯದಲ್ಲಿ ಹೊಸ ಹೊಸ ಬದಲಾವಣೆಗಳಾಗುತ್ತಿದ್ದು, ಇದಕ್ಕೆ ರಾಯಲ್ ಎನ್‌ಫೀಲ್ಡ್ ಕೂಡಾ ಹೊರತಲ್ಲ. ಯಾಕೇಂದ್ರೆ ಕ್ಲಾಸಿಕ್ ಜಮಾನಾದಿಂದ ಹೊರಬರುತ್ತಿರುವ ರಾಯಲ್ ಎನ್‌ಫೀಲ್ಡ್, ಇದೀಗ ಹೊಸ ಬಗೆಯ ಕಸ್ಟಮ್ ಮೇಡ್ ಬೈಕ್ ಮಾದರಿಗಳನ್ನು ಸಿದ್ಧಗೊಳಿಸಿದೆ.

ಸದ್ಯದಲ್ಲೇ ಬದಲಾಗಿದೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಜಮಾನಾ..!!

ಕಸ್ಟಮ್ ಮೇಡ್ ಬೈಕ್ ವಿನ್ಯಾಸಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ರಾಯಲ್ ಎನ್‌ಫೀಲ್ಡ್, ಪ್ರಮುಖ ನಾಲ್ಕು ಬಗೆಯ ಬೈಕ್ ವಿನ್ಯಾಸಗಳನ್ನು ಪ್ರದರ್ಶನ ಮಾಡಿದೆ.

ಸದ್ಯದಲ್ಲೇ ಬದಲಾಗಿದೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಜಮಾನಾ..!!

ಇನ್ ಲೈನ್ ಥ್ರೀ, ಟಿಎನ್‌ಟಿ ಮೋಟಾರ್ಸೈಕಲ್ಸ್, ಬುಲ್ ಸಿಟಿ ಕಸ್ಟಮ್ಸ್ ಮತ್ತು ಬಾಂಬೆ ಕಸ್ಟಮ್ ವರ್ಕ್ಸ್ ಮೋಟಾರ್ಸ್‌ನಿಂದ ಒಟ್ಟು ನಾಲ್ಕು ಕಸ್ಟಮ್ ಮೋಟಾರು ಸೈಕಲ್‌ಗಳು ಸಿದ್ದಗೊಂಡಿದ್ದು, ವಿಶೇಷ ಹೊರ ವಿನ್ಯಾಸ ಹೊಂದಿವೆ.

ಸದ್ಯದಲ್ಲೇ ಬದಲಾಗಿದೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಜಮಾನಾ..!!

ಕೇವಲ ರಾಯಲ್ ಎನ್‌ಫೀಲ್ಡ್ ಬೈಕ್ ಅಷ್ಟೇ ಅಲ್ಲದೇ ರಾಯಲ್ ಎನ್‌ಫೀಲ್ಡ್ ಉಡುಪುಗಳು ಮತ್ತು ಪರಿಕರಗಳನ್ನು ಕೂಡಾ ಮಾಡಿಫೈ ಮಾಡಲಾಗಿದ್ದು, ನೀವು ಕೂಡಾ ಖರೀದಿ ಮಾಡಬಹುದಾಗಿದೆ.

ಸದ್ಯದಲ್ಲೇ ಬದಲಾಗಿದೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಜಮಾನಾ..!!

ಆದ್ರೆ ಪ್ರಮುಖ ವಿಚಾರವೆನೆಂದರೆ ಹೊಸ ಬಗೆಯ ವಿನ್ಯಾಸಗಳ ಬೈಕ್‌ಗಳನ್ನು ಸದ್ಯಕ್ಕೆ ಮಾರಾಟ ಪ್ರಕ್ರಿಯೆಗೆ ಒಪ್ಪದ ರಾಯಲ್ ಎನ್‌ಫೀಲ್ಡ್, ಕೇವಲ ಪರಿಕರಗಳ ಮಾರಾಟಕ್ಕೆ ಮಾತ್ರ ಒಪ್ಪಿಗೆ ಸೂಚಿಸಿದೆ.

ಸದ್ಯದಲ್ಲೇ ಬದಲಾಗಿದೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಜಮಾನಾ..!!

ಹೀಗಾಗಿ ವಿಶೇಷ ಹೊರ ವಿನ್ಯಾಸಗಳನ್ನು ಹೊಂದಿರುವ ರಾಯಲ್ ಎನ್‌ಫೀಲ್ಡ್ ಹೊಸ ಬೈಕ್‌ಗಳು ಸದ್ಯ ಮಾರಾಟಕ್ಕಿಲ್ಲ ಎಂಬುವುದು ಖಚಿತಗೊಂಡಿದ್ದು, ಅದರ ಬದಲಾಗಿ ಕಸ್ಟಮ್ ಮೇಡ್ ವಿನ್ಯಾಸಗಳನ್ನು ಮುಂಬರುವ ಬೈಕ್ ಮಾದರಿಗಳಲ್ಲಿ ಅಳವಡಿಸಲಾಗುತ್ತದೆ ಎನ್ನಲಾಗಿದೆ.

ಸದ್ಯದಲ್ಲೇ ಬದಲಾಗಿದೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಜಮಾನಾ..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ಬಗೆಯ ಬೈಕ್ ಮಾದರಿಗಳು ಲಗ್ಗೆಯಿಡುತ್ತಿದ್ದು, ಈ ಹಿನ್ನೆಲೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಮಾದರಿಗಳು ಸಿದ್ದಗೊಳಿಸುವ ಮೂಲಕ ಮುಂಬರುವ ಮಾದರಿಗಳಲ್ಲಿ ಬದಲಾವಣೆ ತರುವ ಸೂಚನೆ ನೀಡಿದೆ.

English summary
Read in Kannada about Royal Enfield Ties Up With Designers Then Reveals Four Custom Builds bikes.
Story first published: Friday, June 23, 2017, 14:52 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark