ಬಿಡುಗಡೆಗೆ ಸಿದ್ದವಾದ ಹೊಚ್ಚ ಹೊಸ ಸೂಪರ್‌ಡ್ಯುಯಲ್ ಸಾಹಸ ಮೋಟಾರ್ ಸೈಕಲ್
ಇಟಾಲಿಯನ್ ಮೋಟಾರ್ ಸೈಕಲ್ ತಯಾರಕ ಎಸ್.ಡಬ್ಲ್ಯೂ.ಎಂ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸೂಪರ್‌ಡ್ಯುಯಲ್ ಸಾಹಸ ಮೋಟಾರ್ ಸೈಕಲ್ ಪರಿಚಯಿಸಲು ಸಿದ್ಧವಾಗಿದೆ.
ಇಟಾಲಿಯನ್ ಮೋಟಾರ್ ಸೈಕಲ್ ತಯಾರಕ ಎಸ್.ಡಬ್ಲ್ಯೂ.ಎಂ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸೂಪರ್‌ಡ್ಯುಯಲ್ ಸಾಹಸ ಮೋಟಾರ್ ಸೈಕಲ್ ಪರಿಚಯಿಸಲು ಸಿದ್ಧವಾಗಿದೆ.

ಮುಂದಿನ ವರ್ಷದ ಆರಂಭದಲ್ಲಿ ಈ ವಿಶೇಷ ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. SWM ಸೂಪರ್ ಡ್ಯುಯಲ್ ಬೈಕನ್ನು ಕೈನೆಟಿಕ್ ಸ್ವಾಮ್ಯದ ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗವಾದ ಮೊಟೊರೊಯಲೆ ಕಂಪನಿಯು ಭಾರತದಲ್ಲಿ ಪ್ರಚಾರ ಮಾಡಲಿದೆ.

"ಮುಂದಿನ ಮೂರು ಅಥವಾ ನಾಲ್ಕು ತಿಂಗಳೊಳಗಾಗಿ ಭಾರತದಲ್ಲಿ SWM ಸೂಪರ್‌ಡ್ಯುಯಲ್ ಸಾಹಸ ಮೋಟಾರ್ ಸೈಕಲ್ ಬಿಡುಗಡೆ ಮಾಡಲಾಗುವುದು" ಎಂದು ಕನೆಟಿಕ್ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕ ಅಜಿಂಕ್ಯ ಫಿರೋಡಿಯ ತಿಳಿಸಿದ್ದಾರೆ.

SWM ಸೂಪರ್‌ಡ್ಯುಯಲ್ ವಾಹನವು ಹೆಚ್ಚು ಹಗುರವಾಗಿದೆ ಮತ್ತು ವೇಗವುಳ್ಳ ಸಾಹಸ ಮೋಟಾರ್ ಸೈಕಲ್ ಆಗಿದೆ. ಈ ವಾಹನವು 600 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳಲಿದ್ದು, ಈ ಎಂಜಿನ್ 53.5 ಎನ್ಎಂ ತಿರುಗುಬಲದಲ್ಲಿ 54 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

ಈ ದ್ವಿಚಕ್ರ ವಾಹನವು, ಎಳೆತ ನಿಯಂತ್ರಣ, ಬಹು ಸವಾರಿ ವಿಧಾನಗಳು ಮತ್ತು ರೈಡ್-ಬೈ-ವೈರ್ ಥ್ರೊಟಲ್‌ನಂತಹ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಒಳಗೊಂಡಿಲ್ಲ ಹಾಗು ಈ ಸಾಹಸ ಮೋಟಾರ್ ಸೈಕಲ್ ಸುಮಾರು 6 ಲಕ್ಷ ಬೆಲೆಯನ್ನು ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಈ ವಿಶೇಷ ಮೋಟಾರ್ ಸೈಕಲ್ ಸುದೀರ್ಘ ಪ್ರಯಾಣಕ್ಕೆ ಉತ್ತಮ ಸಸ್ಪೆನ್‌ಷನ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು 18-ಲೀಟರ್ ಇಂಧನ ಟ್ಯಾಂಕ್ ಹೊಂದಿದ್ದು, 186 ಕೆ.ಜಿ ತೂಕ ಪಡೆದುಕೊಂಡಿದೆ.

SWM ಎಂಬುದು ಪ್ರಸಿದ್ಧ ಬ್ರಾಂಡ್ ಆಗಿಲ್ಲದೇ ಇರಬಹುದು, ಆದರೆ 1970ರ ದಶಕದಿಂದ ತಯಾರಾದ ಎಂಡ್ಯೂರೋ, ಮೊಟೊಕ್ರಾಸ್ ಮತ್ತು ಆಫ್-ರೋಡ್ ಮೋಟರ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿ ತಾನೇನೆಂಬುದನ್ನು ಸಾಬೀತು ಮಾಡಿದೆ. ಪ್ರಸ್ತುತ,125 ಸಿಸಿ ಇಂದ 600 ಸಿಸಿ ವರೆಗಿನ 12 ವಿವಿಧ ಮಾದರಿಗಳನ್ನು ಹೊಂದಿದೆ.


Click it and Unblock the Notifications