ಭಾರತದ ಅತಿ ದೊಡ್ಡ ಸ್ಕೂಟರ್ ಉತ್ಪಾದಕ ಸಂಸ್ಥೆ ಯಾವುದೇ ಗೊತ್ತೆ ?

Written By:

ಹೀರೊ ಮೊಟೊಕಾರ್ಪ್‌ಗಿಂತ 39,287 ವಾಹನಗಳನ್ನು ಮಾರಾಟ ಮಾಡುವ ಮೂಲಕ ಟಿವಿಎಸ್ ಮೋಟಾರ್ಸ್ ಭಾರತದ ಎರಡನೇ ದೊಡ್ಡ ಸ್ಕೂಟರ್ ಉತ್ಪಾದಕ ಸಂಸ್ಥೆಯಾಗಿ ಹೊರಹೊಮ್ಮಿದೆ.

ಭಾರತದ ಅತಿ ದೊಡ್ಡ ಸ್ಕೂಟರ್ ಉತ್ಪಾದಕ ಸಂಸ್ಥೆ ಯಾವುದೇ ಗೊತ್ತೆ ?

ಈ ವರ್ಷದ ಏಪ್ರಿಲ್ ಮತ್ತು ಜೂನ್ ಅವಧಿಯಲ್ಲಿ ಟಿವಿಎಸ್ ಸಂಸ್ಥೆಯು ಒಟ್ಟಾರೆ 2,49,077 ವಾಹನಳನ್ನು ಮಾರಾಟ ಮಾಡಿದೆ ಮತ್ತು ಹೀರೊ ಮೊಟೊಕಾರ್ಪ್ 2,09,790 ವಾಹನಳನ್ನು ಮಾರಾಟ ಮಾಡಿದೆ.

ಭಾರತದ ಅತಿ ದೊಡ್ಡ ಸ್ಕೂಟರ್ ಉತ್ಪಾದಕ ಸಂಸ್ಥೆ ಯಾವುದೇ ಗೊತ್ತೆ ?

ಕಳೆದ ವರ್ಷ ಇದೇ ಅವಧಿಯಲ್ಲಿ ಟಿವಿಎಸ್ ಮೋಟಾರು ಸಂಸ್ಥೆಯು ಕೇವಲ 183,805 ವಾಹನಗಳನ್ನು ಮಾತ್ರ ಮಾರಾಟ ಮಾಡಲು ಶಕ್ತವಾಗಿತ್ತು. ಈ ವಿಚಾರವಾಗಿ ಹೇಳುವುದಾದರೆ ಈ ವರ್ಷದ ಮಾರಾಟ ಶೇಕಡಾ 35.51% ರಷ್ಟು ಏರಿಕೆ ಕಂಡಿದೆ.

ಭಾರತದ ಅತಿ ದೊಡ್ಡ ಸ್ಕೂಟರ್ ಉತ್ಪಾದಕ ಸಂಸ್ಥೆ ಯಾವುದೇ ಗೊತ್ತೆ ?

"ಬೆಳವಣಿಗೆಯ ಆವೇಗವನ್ನು ಮುಂದುವರೆಸಲು, ಸ್ಕೂಟರ್ ಸೆಗ್ಮೆಂಟ್‌ನಲ್ಲಿ ನಾವು ಉತ್ತೇಜಿತ ಯೋಜನೆಗಳನ್ನು ಹೊಂದಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಕಂಪನಿಯು ಇತ್ತೀಚಿಗೆ ಟಿವಿಎಸ್ ವಿಗೊ ಮತ್ತು ಟಿವಿಎಸ್ ಜುಪಿಟರ್ ಸ್ಕೂಟರ್‌ಗಳಲ್ಲಿ ಹೊಸ ಬಣ್ಣಗಳನ್ನು ಪರಿಚಯಿಸಿದೆ" ಎಂದು ಟಿವಿಎಸ್ ಕಂಪನಿಯ ಮಾರ್ಕೆಟಿಂಗ್(ಸ್ಕೂಟರ್) ವಿಭಾಗದ ಉಪಾಧ್ಯಕ್ಷ ಅನಿರುದ್ಧ ಹಲ್ಡಾರ್ ತಿಳಿಸಿದ್ದಾರೆ.

wdw

ಇದಲ್ಲದೆ, 'ಮ್ಯಾಟ್' ಎಂಬ ಹೊಚ್ಚ ಹೊಸ ರೀತಿಯ ಬಣ್ಣವನ್ನು ಟಿವಿಎಸ್ ಸ್ಕೂಟಿ ಝೆಸ್ಟ್ 110 ಮತ್ತು ಟಿವಿಎಸ್ ಸ್ಕೂಟಿ ಪೆಪ್+ ಸ್ಕೂಟರ್‌ ಸರಣಿಯಲ್ಲಿ ಬಿಡುಗಡೆಗೊಳಿಸಲು ಟಿವಿಎಸ್ ಮುಂದಾಗಿದೆ.

wdw

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಲಿಮಿಟೆಡ್(ಎಚ್ಎಂಎಸ್ಐಎಲ್) ಕಂಪನಿಯು ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ 9,73,725 ಯುನಿಟ್ ಮಾರಾಟ ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 22.15% ರಷ್ಟು ಏರಿಕೆಯಾಗಿದೆ.

wdw

ಮೊದಲ ಸ್ಥಾನ ಪಡೆದುಕೊಂಡಿರುವ ಹೋಂಡಾ ಜೊತೆಗೆ, ಭಾರತದ ಯಮಹಾ ಮೋಟಾರ್, ಪಿಯಾಜಿಯೊ ಮತ್ತು ಸುಜುಕಿ ಸ್ಕೂಟರ್ ತಯಾರಕ ಸಂಸ್ಥೆಗಳು ಮೊದಲ ತ್ರೈಮಾಸಿಕದಲ್ಲಿ ಸಾಧಾರಣ ಬೆಳವಣಿಗೆಯನ್ನು ದಾಖಲಿಸಿವೆ.

wdw

ಭಾರತದಲ್ಲಿ ಮಹಿಳೆಯರು ಸ್ಕೂಟರ್ ಬಳಕೆಗೆ ಹೆಚ್ಚಿನ ಮಟ್ಟದಲ್ಲಿ ಮುಂದಾಗಿದ್ದು ಮತ್ತು ಸ್ಕೂಟರ್‌ಗಳು ಕಡಿಮೆ ಕ್ಲಿಷ್ಟತೆಯನ್ನು ಪಡೆದುಕೊಂಡಿರುವ ಕಾರಣ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಬಹುದು.

English summary
With sales of 39,287 units more than Hero MotoCorp, TVS Motor became the second largest scooter manufacturer in India.
Story first published: Monday, July 17, 2017, 15:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark