ಕೋಲಾರ ಜಿಲ್ಲೆಯಲ್ಲಿ ಆರಂಭಗೊಂಡ ವಿಶ್ವದ ಅತಿದೊಡ್ಡ ಹೋಂಡಾ ಬೈಕ್ ಉತ್ಪಾದನಾ ಘಟಕ

Written By:

ಭಾರತದಲ್ಲಿ ದ್ವಿಚಕ್ರ ವಾಹನಗಳ ಉತ್ಪಾದನೆ ಮತ್ತು ಮಾರಾಟ ಹೆಚ್ಚಳಕ್ಕೆ ಬೃಹತ್ ಯೋಜನೆ ರೂಪಿಸಿರುವ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಸಂಸ್ಥೆಯು, ಬೆಂಗಳೂರಿನ ಹೊರವಲಯ ನರಸಪುರ ಕೈಗಾರಿಕಾ ಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ಬೈಕ್ ಉತ್ಪಾದನಾ ಘಟಕವನ್ನು ಆರಂಭಗೊಳಿಸಿದೆ.

ಕೋಲಾರ ಜಿಲ್ಲೆಯಲ್ಲಿ ಆರಂಭವಾದ ವಿಶ್ವದ ಅತಿದೊಡ್ಡ ಹೋಂಡಾ ಉತ್ಪಾದನಾ ಘಟಕ

ಮೇಕ್ ಇನ್ ಇಂಡಿಯಾ ಅಭಿಯಾನದ ನಂತರ ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಉತ್ಪಾದನೆ ಹೆಚ್ಚಳಕ್ಕೆ ಗಮನಹರಿಸಿರುವ ಹೋಂಡಾ ಸಂಸ್ಥೆಯು ಬೃಹತ್ ಬಂಡವಾಳದೊಂದಿಗೆ ನರಸಪುರ ಕೈಗಾರಿಕಾ ಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ಬೈಕ್ ಉತ್ಪಾದನಾ ಘಟಕವನ್ನು ತೆರೆದಿದೆ.

ಕೋಲಾರ ಜಿಲ್ಲೆಯಲ್ಲಿ ಆರಂಭವಾದ ವಿಶ್ವದ ಅತಿದೊಡ್ಡ ಹೋಂಡಾ ಉತ್ಪಾದನಾ ಘಟಕ

ಸದ್ಯ ನರಸಪುರದಲ್ಲಿ ಆರಂಭಗೊಂಡಿರುವ ಹೋಂಡಾ ದ್ವಿಚಕ್ರ ವಾಹನಗಳ ಉತ್ಪಾದನಾ ಘಟಕವು ವಿಶ್ವದಲ್ಲೇ ಅತಿದೊಡ್ಡ ಘಟಕವಾಗಿದ್ದು, ದೇಶಿಯ ಮಾರುಕಟ್ಟೆ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಇಲ್ಲಿಂದಲೇ ಹೊಸ ಬೈಕ್‌ಗಳು ಪೂರೈಕೆಯಾಗಲಿವೆ.

ಕೋಲಾರ ಜಿಲ್ಲೆಯಲ್ಲಿ ಆರಂಭವಾದ ವಿಶ್ವದ ಅತಿದೊಡ್ಡ ಹೋಂಡಾ ಉತ್ಪಾದನಾ ಘಟಕ

ಮನೆಸಾರ್ ಮತ್ತು ಗುಜರಾತ್‌ನಲ್ಲಿರುವ ಘಟಕಗಳಿಂತಲೂ ಅತಿದೊಡ್ಡದಾಗಿರುವ ನರಸಪುರ ಬೈಕ್ ಉತ್ಪಾದನಾ ಘಟಕವು, ಪ್ರತಿದಿನ 2350 ಬೈಕ್‌ಗಳನ್ನು ಉತ್ಪಾದನೆ ಮಾಡುವಷ್ಟು ಸಾಮಾರ್ಥ್ಯ ಹೊಂದಿದೆ.

ಕೋಲಾರ ಜಿಲ್ಲೆಯಲ್ಲಿ ಆರಂಭವಾದ ವಿಶ್ವದ ಅತಿದೊಡ್ಡ ಹೋಂಡಾ ಉತ್ಪಾದನಾ ಘಟಕ

ಇದರೊಂದಿಗೆ ಪ್ರತಿವರ್ಷ ಸರಸಪುರ ಘಟಕದಿಂದ 6 ಲಕ್ಷ ಬೈಕ್‌ಗಳು ಉತ್ಪಾದನೆಗೊಳ್ಳಲಿದ್ದು, ಇದಕ್ಕಾಗಿ ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಸಂಸ್ಥೆಯು 665 ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

ಕೋಲಾರ ಜಿಲ್ಲೆಯಲ್ಲಿ ಆರಂಭವಾದ ವಿಶ್ವದ ಅತಿದೊಡ್ಡ ಹೋಂಡಾ ಉತ್ಪಾದನಾ ಘಟಕ

ಈ ಬಗ್ಗೆ ಮಾತನಾಡಿರುವ ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಜಪಾನ್ ವಿಭಾಗದ ಹಿರಿಯ ಅಧಿಕಾರಿ ಶಿಂಜಿ ಒಯೋಮಾ "ಹೋಂಡಾ ಉತ್ಪನ್ನಗಳ ಜಾಗತಿಕ ಮಾರಾಟದಲ್ಲಿ ಭಾರತದ ಪಾಲು ಶೇ.30 ರಷ್ಟಿದ್ದು, ಇದೇ ಕಾರಣಕ್ಕಾಗಿ ಉತ್ಪಾದನೆ ಮತ್ತು ಮಾರಾಟ ಮಾರಾಟ ಹೆಚ್ಚಳಕ್ಕಾಗಿ ಅತಿ ದೊಡ್ಡ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗಿದೆ" ಎಂದಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಆರಂಭವಾದ ವಿಶ್ವದ ಅತಿದೊಡ್ಡ ಹೋಂಡಾ ಉತ್ಪಾದನಾ ಘಟಕ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ನರಸಪುರದಲ್ಲಿ ಆರಂಭಗೊಂಡಿರುವ ಹೋಂಡಾ ನೂತನ ಬೈಕ್ ಉತ್ಪಾದನಾ ಘಟಕ ಸಂಪೂರ್ಣ ಪರಿಸರ ಪೂರಕ ಅಂಶಗಳನ್ನು ಹೊಂದಿದ್ದು, ಸ್ಥಳೀಯವಾಗಿ ಉದ್ಯೋಗ ಅವಕಾಶಗಳು ಲಭ್ಯವಾಗಿರುವುದು ಮತ್ತೊಂದು ಗಮರ್ನಾಹ ಸಂಗತಿ.

Read more on ಹೋಂಡಾ honda
English summary
Read in Kannada about Honda’s Narsapura Factory Is Now World’s Largest Honda Two Wheelers Factory.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark