850 ಸಿಸಿ ಸಾಮರ್ಥ್ಯದ ಸಾಹಸಿ ಬೈಕ್ ಸಿದ್ಧಗೊಳಿಸಿದ ಯಮಹಾ: ಏನ್ ಇದರ ವಿಶೇಷತೆ ಗೊತ್ತಾ?

Written By:

ಇತ್ತೀಚಿನ ದಿನಗಳಲ್ಲಿ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆಗಳು ಸಾಹಸಿ ಬೈಕ್ ಉತ್ವಾದನೆ ಮೇಲೆ ಸಾಕಷ್ಟು ಆಸಕ್ತಿ ವಹಿಸುತ್ತಿವೆ. ಕೇವಲ ಸಾಂಪ್ರದಾಯಿಕ ಆವೃತ್ತಿಗಳ ಹೊರತಾಗಿಯೂ ಭಾರೀ ಸಾಮರ್ಥ್ಯದ ಸಾಹಿಸಿ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇವುಗಳ ಸಾಲಿಗೆ ಇದೀಗ ಯಮಹಾ ಕೂಡಾ ಸೇರ್ಪಡೆಗೊಳ್ಳುತ್ತಿದೆ.

850 ಸಿಸಿ ಸಾಮರ್ಥ್ಯದ ಸಾಹಸಿ ಬೈಕ್ ಸಿದ್ಧಗೊಳಿಸಿದ ಯಮಹಾ: ಏನ್ ಇದರ ವಿಶೇಷತೆ ಗೊತ್ತಾ?

ಮಾಹಿತಿಗಳ ಪ್ರಕಾರ 850ಸಿಸಿ ಸಾಮರ್ಥ್ಯ ಹೊಂದಿರುವ ಸಾಹಸಿ ಬೈಕ್ ಹೊರತರಲು ಯೋಜನೆ ರೂಪಿಸಿರುವ ಯಮಹಾ ಸಂಸ್ಥೆಯು, ಬಹೃತ್ ಬೈಕ್ ಉತ್ಪಾದನಾ ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲು ಸಜ್ಜುಗೊಳ್ಳುತ್ತಿದೆ. ಹೀಗಾಗಿ ಸಿದ್ಧಗೊಳ್ಳುತ್ತಿರುವ ವಿನೂತನ ಆವೃತ್ತಿಯನ್ನು ಮಧ್ಯಮ ಗಾತ್ರದ MT-09 ಎಂಜಿನ್ ಜೊತೆ ಅಭಿವೃದ್ಧಿಗೊಳಿಸಲಾಗುತ್ತಿದೆ.

850 ಸಿಸಿ ಸಾಮರ್ಥ್ಯದ ಸಾಹಸಿ ಬೈಕ್ ಸಿದ್ಧಗೊಳಿಸಿದ ಯಮಹಾ: ಏನ್ ಇದರ ವಿಶೇಷತೆ ಗೊತ್ತಾ?

ಬಿಡುಗಡೆಗೆ ಯೋಜಿಸಿರುವ ವಿನೂತನ ಯಮಹಾ ಸಾಹಸಿ ಬೈಕ್ 850ಸಿಸಿ ಮೂರು ಸಿಲಿಂಡರಿನ ಎಂಜಿನ್ ಸಾಮರ್ಥ್ಯ ಹೊಂದಿದ್ದು, 115-ಬಿಎಚ್‌ಪಿ ಉತ್ಪಾದಿಸುವ ಶಕ್ತಿ ಹೊಂದಿದೆ.

850 ಸಿಸಿ ಸಾಮರ್ಥ್ಯದ ಸಾಹಸಿ ಬೈಕ್ ಸಿದ್ಧಗೊಳಿಸಿದ ಯಮಹಾ: ಏನ್ ಇದರ ವಿಶೇಷತೆ ಗೊತ್ತಾ?

ಇದಲ್ಲದೇ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಮಹಾ XT1200Z ಸೂಪರ್ ಟೆನೆರೆ ಬೈಕ್, ಪ್ರಸ್ತುತ ಬಿಎಂಡಬ್ಲ್ಯು ಸಾಹಿಸಿ ಬೈಕ್ ಆವೃತ್ತಿಗೆ ಸ್ಪರ್ಧೆ ಒಡ್ಡುತ್ತಿದೆ. ಹೀಗಾಗಿ ವಿನೂತನ ಮಾದರಿ ಬಿಡುಯಾದ್ರೆ ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುವ ನೀರಿಕ್ಷೆಯಿದೆ.

850 ಸಿಸಿ ಸಾಮರ್ಥ್ಯದ ಸಾಹಸಿ ಬೈಕ್ ಸಿದ್ಧಗೊಳಿಸಿದ ಯಮಹಾ: ಏನ್ ಇದರ ವಿಶೇಷತೆ ಗೊತ್ತಾ?

ಕಳೆದ ಬಾರಿ ಅಂತರ್‌ರಾಷ್ಟ್ರೀಯ EICMA ಶೋನಲ್ಲಿ T7 ಟೆನೆರೆ ಬೈಕ್ ಪ್ರದರ್ಶನ ಮಾಡಿದ್ದ ಯಮಹಾ, ಭಾರತೀಯ ಮಾರುಕಟ್ಟೆಯ ಬೇಡಿಕೆ ತಕ್ಕಂತೆ ಹೊಸ ಮಾದರಿಯೊಂದನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಸುಳಿವು ಕೊಟ್ಟಿತ್ತು.

850 ಸಿಸಿ ಸಾಮರ್ಥ್ಯದ ಸಾಹಸಿ ಬೈಕ್ ಸಿದ್ಧಗೊಳಿಸಿದ ಯಮಹಾ: ಏನ್ ಇದರ ವಿಶೇಷತೆ ಗೊತ್ತಾ?

ಇದೀಗ 850 ಸಿಸಿ ಸಾಮರ್ಥ್ಯದ ಸಾಹಸಿ ಬೈಕ್ ಅಭಿವೃದ್ಧಿಗೊಳಿಸುತ್ತಿರುವ ಯಮಹಾ, MT-09 ಎಂಜಿನ್ ಜೊತೆ ಹೊಸ ಬೈಕ್ ಸಿದ್ಧಗೊಳಿಸಿದೆ. ಸದ್ಯದಲ್ಲೇ ಮಾರುಕಟ್ಟೆ ಲಗ್ಗೆಯಿಡಲಿದ್ದು, ಬೆಲೆಗಳ ಬಗೆಗೆ ಇನ್ನು ಯಾವುದೇ ನಿಖರ ಮಾಹಿತಿಗಳಿಲ್ಲ,

850 ಸಿಸಿ ಸಾಮರ್ಥ್ಯದ ಸಾಹಸಿ ಬೈಕ್ ಸಿದ್ಧಗೊಳಿಸಿದ ಯಮಹಾ: ಏನ್ ಇದರ ವಿಶೇಷತೆ ಗೊತ್ತಾ?

ಒಂದು ವೇಳೆ ಭಾರತದಲ್ಲಿ ಯಮಹಾ ಸೂಪರ್ ಬೈಕ್ ಬಿಡುಗಡೆಯಾದರೆ ಹೋಂಡಾ ಆಫ್ರಿಕಾ ಟ್ವಿನ್ ಆವೃತ್ತಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ. ಜೊತೆಗೆ ಆಪ್ ರೋಡಿಂಗ್ ಪ್ರಿಯರ ಪ್ರಸ್ತುತ ಬೇಡಿಕೆಗಳಿಗೆ ಹೆಚ್ಚಿನ ಒತ್ತು ನೀಡುವುರದಲ್ಲಿ ಯಾವುದೇ ಸಂದೇಹವಿಲ್ಲ.

850 ಸಿಸಿ ಸಾಮರ್ಥ್ಯದ ಸಾಹಸಿ ಬೈಕ್ ಸಿದ್ಧಗೊಳಿಸಿದ ಯಮಹಾ: ಏನ್ ಇದರ ವಿಶೇಷತೆ ಗೊತ್ತಾ?

ನೀವು ಸ್ಪೋರ್ಟ್ಸ್ ಬೈಕ್ ಪ್ರಿಯರಾಗಿದ್ದರೆ ಯಮಹಾ YZF-R1 ರೇಸ್ ಬೈಕ್ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಯಮಹಾ yamaha
English summary
The mid-sized off-road machine from Yamaha will likely borrow the engine from the MT-09
Story first published: Wednesday, March 8, 2017, 14:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark