ಬಿಡುಗಡೆಗೆ ದಿನಗಣನೆ- ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆಸಿಕ್ಕ ಯಮಹಾ ಫೇಜರ್ 250..!!
ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಯಮಹಾ ಹೊಚ್ಚ ಹೊಸ ಫೇಜರ್ 250 ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆಸಿಕ್ಕಿದ್ದು, ಸದ್ಯದಲ್ಲೇ ಬಿಡುಗಡೆಯಾಗುವ ನೀರಿಕ್ಷೆಯಿದೆ.
ಜಪಾನ್ ಮೂಲದ ಪ್ರತಿಷ್ಠಿತ ದ್ಪಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಯಮಹಾ, ತನ್ನ ಹೊಸ ಬೈಕ್ ಆವೃತ್ತಿ ಫೇಜರ್ 250 ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆದಿದ್ದು, ಇನ್ನು ಕೆಲವೇ ದಿನಗಳಲ್ಲಿ ಫೇಜರ್ 250 ಖರೀದಿಗೆ ಲಭ್ಯವಾಗುವ ನೀರಿಕ್ಷೆಯಿದೆ.

ಸುಧಾರಿತ ತಂತ್ರಜ್ಞಾನಗಳೊಂದಿಗೆ ಫೇಜರ್ 250 ಅಭಿವೃದ್ಧಿಗೊಳಿಸಿರುವ ಯಮಹಾ, ಗ್ರೇ ಬಣ್ಣದೊಂದಿಗೆ ಹೊಚ್ಚ ಹೊಸ ಬೈಕ್ ಬಿಡುಗಡೆಗೆ ಸಜ್ಜುಗೊಳಿಸಿದೆ.

ಈ ಹಿಂದಿನ ಫೇಜರ್ 25 ಗುಣಲಕ್ಷಣಗಳನ್ನು ಹೊಂದಿರುವ ಫೇಜರ್ 250, ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಡ್ಯುಯಲ್ ಹೆಡ್‌ಲ್ಯಾಂಪ್ ವ್ಯವಸ್ಥೆ ಹೊಂದಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆಸಿಕ್ಕ ಬೈಕ್ ಚಿತ್ರಗಳ ಆಧಾರದ ಮೇಲೆ ಫೇಜರ್ 250 249 ಬೈಕ್ ಸಿಸಿ ಫ್ಯೂಲ್ ಇಂಜೆಕ್ಷನ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 20.9-ಬಿಎಚ್‌ಪಿ ಹಾಗೂ 20-ಎಂಎನ್‌ಪಿ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ.

5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಫೇಜರ್ 250 ಬೈಕ್, ಫೇಜರ್ 25 ಬೈಕ್ ಮಾದರಿಯ ಬಹುತೇಕ ವೈಶಿಷ್ಟ್ಯತೆಗಳನ್ನೇ ಮುಂದುವರಿಸಿಕೊಂಡು ಬರಲಾಗಿದೆ.

ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡಿರುವ ಫೇಜರ್ 250, ಬಿಸ್ 4 ಹಾಗೂ ಎಎಚ್‌ಓ ಅಷ್ಟೇ ಅಲ್ಲದೇ ಎಬಿಎಸ್ ತಂತ್ರಜ್ಞಾನವನ್ನು ಕೂಡಾ ಪರಿಚಯ ಮಾಡುವ ನೀರಿಕ್ಷೆಯಿದೆ.

ಇನ್ನು ಬೆಲೆಗಳು ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಳಿಸದ ಯಮಹಾ, ಫೇಜರ್ 250 ಬಿಡುಗಡೆ ಬಗ್ಗೆಯೂ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಆದ್ರೆ ಸ್ಪಾಟ್ ಟೆಸ್ಟಿಂಗ್ ಹಿನ್ನೆಲೆ ಫೇಜರ್ 250 ಬಿಡುಗಡೆ ಖಚಿತವಾಗಿದ್ದು, ವಿಶೇಷ ಹೊರ ವಿನ್ಯಾಸ ಮತ್ತು ಕಡಿಮೆ ತೂಕದೊಂದಿಗೆ ಅಭಿವೃದ್ಧಿಯಾಗಿರುವುದು ಸಾಬೀತಾಗಿದೆ.

ಎಲ್ಲವೂ ಅಂದುಕೊಂಡತೆ ಆದಲ್ಲಿ ಮುಂಬರುವ ಉತ್ಸವಗಳ ಸಂದರ್ಭದಲ್ಲಿ ಬಿಡುಗಡೆ ಸಾಧ್ಯತೆಗಳಿದ್ದು, ಬಜಾಜ್ ಆರ್‌ಎಸ್ 200, ಹೋಂಡಾ ಸಿಬಿಆರ್ 250ಆರ್ ಮತ್ತು ಕೆಟಿಎಂ 200 ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಯಿದೆ.


Click it and Unblock the Notifications