ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಯಮಹಾ..!!

Written By:

ದ್ವಿಚಕ್ರ ವಾಹನಗಳ ಉತ್ವಾದನೆಯಲ್ಲಿ ಮುಂಚೂಣಿಯಲ್ಲಿರುವ ಜಪಾನ್ ಮೂಲದ ಯಮಹಾ, ಕಳೆದ ತಿಂಗಳು ಫೆಬ್ರವರಿ ಅಂತ್ಯಕ್ಕೆ ನೀರಿಕ್ಷೆ ಮೀರಿ ತನ್ನ ಉತ್ಪನ್ನಗಳನ್ನು ಮಾರಾಟಗೊಳಿಸಿದೆ. ಶೇಕಡಾ 20ರಷ್ಟು ಮಾರಾಟ ಏರಿಕೆ ಕಂಡಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿನ ಬೇಡಿಕೆಯ ಪ್ರಮಾಣವನ್ನು ಯಥಾಸ್ಥಿತಿ ಕಾಯ್ದುಕೊಂಡಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಯಮಹಾ..!!

ಭಾರತೀಯ ಮಾರುಕಟ್ಟೆ ಮತ್ತು ನೇಪಾಳದಲ್ಲಿ ಒಟ್ಟು 68,095 ಯೂನಿಟ್‌ಗಳನ್ನು ಮಾರಾಟಗೊಳಿಸಿರುವ ಯಮಹಾ, ಜನವರಿ ತಿಂಗಳ ನೀರಿಕ್ಷಿತ ಗುರಿಗಿಂತ ಫೆಬ್ರವರಿಯಲ್ಲಿ ಅತಿ ಹೆಚ್ಚು ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಜನವರಿಯಲ್ಲಿ 56,960 ಯೂನಿಟ್‌ಗಳನ್ನು ಮಾರಾಟ ಮಾಡಿದ್ದ ಯಮಹಾ, ಕೆಲವು ಮಾರಾಟ ತಂತ್ರಗಳನ್ನು ರೂಪಿಸುವ ಮೂಲಕ ಫೆಬ್ರುವರಿಯಲ್ಲಿ 68,095 ಯೂನಿಟ್‌ಗಳನ್ನು ಮಾರಾಟ ಮಾಡಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಯಮಹಾ..!!

ಕಳೆದ ಋತುಮಾನದಲ್ಲಿ ಬಿಡುಗಡೆಯಾಗಿದ್ದ ಯಮಹಾ ಉತ್ಪಾದಿತ 249 ಸಿಸಿ ಸಾಮರ್ಥ್ಯದ FZ25, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿತ್ತು. ಜೊತೆಗೆ ಸ್ಪರ್ಧಾತ್ಮಕ ಬೆಲೆಗಳಿಂದಾಗಿ ಪ್ರತಿಸ್ಫರ್ಧಿಗಳಿಗೆ ತೀವ್ರ ಸ್ಪರ್ಧೆ ಒಡ್ಡಿತ್ತು.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಯಮಹಾ..!!

ಇನ್ನು ಮಾರಾಟ ಹೆಚ್ಚಳ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಯಮಹಾ, ಗ್ರಾಹಕರನ್ನು ಆಕರ್ಷಿಸುವಲ್ಲಿ ನಿಟ್ಟಿನಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಜೊತೆಗೆ ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಇನ್ನಷ್ಟು ಹೊಸ ಹೊಸ ಆವೃತ್ತಿಗಳನ್ನು ಪರಿಚಯಿಸುವ ತವಕದಲ್ಲಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಯಮಹಾ..!!

ಕೇವಲ ಬೈಕ್ ಉತ್ಪನ್ನಗಳನ್ನು ಅಷ್ಟೇ ಅಲ್ಲದೇ ಬೈಕ್ ಬಿಡಿಭಾಗಗಳ ಮಾರಾಟದಲ್ಲೂ ಯಮಹಾ ಸಾಕಷ್ಟು ಏರಿಕೆ ಕಂಡಿದೆ. ಇದರಿಂದಾಗಿ ಬಿಡಿಭಾಗಗಳ ವಿಭಾಗದಲ್ಲೂ ಯಮಹಾ ವಿಶೇಷ ಆಸಕ್ತಿ ತೊರಿದ್ದು, ನೀರಿಕ್ಷೆಗೂ ಮೀರಿ ಹೆಚ್ಚಿನ ಮಾರಾಟ ಮಾಡಲು ಸಾಧ್ಯವಾಗಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಯಮಹಾ..!!

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ BS-IV ಎಂಜಿನ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಹೊಸದಾಗಿ ಉತ್ಪಾದಿತ ಎಲ್ಲ ಮಾದರಿಗಳಲ್ಲೂ BS-IV ಎಂಜಿನ್ ಕಡ್ಡಾಯವಾಗಿ ಅಳವಡಿಸಲಾಗಿದೆ. ಹೀಗಾಗಿ ಗುಣಮಟ್ಟ ಹೊಂದಿರುವ BS-IV ಎಂಜಿನ್ ಯಹಮಾ ಮಾದರಿಗಳಿಗೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಸೃಷ್ಠಿಯಾಗುವ ನೀರಿಕ್ಷೆಯಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಯಮಹಾ..!!

ಕಳೆದ ಋತುಮಾನದಲ್ಲಿ ಅತಿಹೆಚ್ಚು ಮಾರಾಟಗೊಂಡಿದ್ದ FZ25 ಮಾದರಿ ಮೇಲೆ ಅತಿ ಹೆಚ್ಚು ನೀರಿಕ್ಷೆ ಇಟ್ಟುಕೊಂಡಿರುವ ಯಮಹಾ ಕಂಪನಿ, 2017ರ ಅಂತ್ಯಕ್ಕೆ ಒಟ್ಟು 10 ಲಕ್ಷ ಯೂನಿಟ್‌ಗಳನ್ನು ಮಾರಾಟಗೊಳಿಸುವ ಗುರಿಹೊಂದಿದೆ. ಇದಕ್ಕಾಗಿ ಗ್ರಾಹಕರನ್ನು ಸೆಳೆಯಲು ಮತ್ತಷ್ಟು ತಂತ್ರಗಾರಿಕೆ ರೂಪಿಸಿರುವ ಯಮಹಾ ಪ್ರತಿಸ್ಪರ್ಧಿಗೆ ತ್ರೀವ ಸ್ಪರ್ಧೆ ನೀಡಲಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಯಮಹಾ..!!

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಬಿಡುಗಡೆಯಾಗಿರುವ ಯಮಹಾ ವಿನೂತನ ಆವೃತ್ತಿ FZ25 ಬೈಕ್ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಯಮಹಾ yamaha
English summary
India Yamaha Motor continued its upward growth in sales with 20 percent increase in the domestic market during the month of February 2017 as compared the same period last year.
Story first published: Friday, March 3, 2017, 12:45 [IST]
Please Wait while comments are loading...

Latest Photos