ಆಪ್ ರೋಡಿಂಗ್ ಕಿಂಗ್ ಆಗುತ್ತಾ ಯಮಹಾ ಟಿ7 ಅಡ್ವೆಂಚರ್ ಮೋಟಾರ್ ಸೈಕಲ್?

Written By:

ಆಪ್ ರೋಡಿಂಗ್ ಪ್ರಿಯರಿಗಾಗಿ ಯಮಹಾ ಸಂಸ್ಥೆಯು ಹೊಸ ನಮೂನೆಯ ಟಿ7 ಅಡ್ವೆಂಚರ್ ಮೋಟಾರ್ ಸೈಕಲ್‌ ಅನ್ನು ಬಿಡುಗಡೆ ಮಾಡುತ್ತಿದ್ದು, ವಿನೂತನ ಮಾದರಿಯ ಸಂಪೂರ್ಣ ವಿವರಣೆಗಳು ಇಲ್ಲಿವೆ.

ಆಪ್ ರೋಡಿಂಗ್ ಕಿಂಗ್ ಆಗುತ್ತಾ ಯಮಹಾ ಟಿ7 ಅಡ್ವೆಂಚರ್ ಮೋಟಾರ್ ಸೈಕಲ್?

ಈ ಹಿಂದೆ 2016ರಲ್ಲಿ ನಡೆದಿದ್ದ ಪ್ಯಾರಿಸ್ ಇಐಸಿಎಂಎ ಆಟೋ ಮೇಳದಲ್ಲಿ ಟಿ7 ಅಡ್ವೆಂಚರ್ ಮೋಟಾರ್ ಸೈಕಲ್ ಮಾದರಿಯನ್ನು ಪ್ರದರ್ಶನ ಮಾಡಿದ್ದ ಯಮಹಾ ಸಂಸ್ಥೆಯು ಇದೀಗ ಬಿಡುಗಡೆಗೊಳಿಸಲು ಸಜ್ಜುಗೊಂಡಿದ್ದು, ಭಾರೀ ಬೇಡಿಕೆ ಪಡೆಯುವ ತವಕದಲ್ಲಿದೆ.

ಆಪ್ ರೋಡಿಂಗ್ ಕಿಂಗ್ ಆಗುತ್ತಾ ಯಮಹಾ ಟಿ7 ಅಡ್ವೆಂಚರ್ ಮೋಟಾರ್ ಸೈಕಲ್?

ಮೋಟಾರ್ ಸ್ಪೋರ್ಟ್ ಕೌಶಲ್ಯ ಪ್ರದರ್ಶನಕ್ಕೆ ನೆರವಾಗುವ ರೀತಿಯಲ್ಲಿ ಟಿ7 ಅಡ್ವೆಂಚರ್ ಮೋಟಾರ್ ಸೈಕಲ್ ವಿನ್ಯಾಸಗೊಳಿಸಲಾಗಿದ್ದು, ಅಂತರ್‌ರಾಷ್ಟ್ರೀಯ ಮಟ್ಟದ ಮೋಟಾರ್ ಸೈಕಲ್ ಪ್ರಿಯರ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್‌ನ್ನು ಸಿದ್ಧಗೊಳಿಸಲಾಗಿದೆ.

ಆಪ್ ರೋಡಿಂಗ್ ಕಿಂಗ್ ಆಗುತ್ತಾ ಯಮಹಾ ಟಿ7 ಅಡ್ವೆಂಚರ್ ಮೋಟಾರ್ ಸೈಕಲ್?

ಯಮಹಾ ಮೋಟಾರ್ ಸ್ಪೋರ್ಟ್ ಅಭಿವೃದ್ಧಿ ವಿಭಾಗದಲ್ಲಿ ಟಿ7 ಅಡ್ವೆಂಚರ್ ಮೋಟಾರ್ ಸೈಕಲ್‌ ಅನ್ನು ವಿನ್ಯಾಸ ಮಾಡಲಾಗಿದ್ದು, ಇಟಾಲಿಯ ಆರ್‌ಡಿ ಮತ್ತು ನೆದರ್‌ಲ್ಯಾಂಡ್ ಜಿಕೆ ಡಿಸೈನ್ ಕೇಂದ್ರಗಳಲ್ಲಿ ಹೊಸ ಬೈಕ್ ಮಾದರಿಯನ್ನು ಅಂತಿಮಗೊಳಿಸಲಾಗಿದೆ.

ಆಪ್ ರೋಡಿಂಗ್ ಕಿಂಗ್ ಆಗುತ್ತಾ ಯಮಹಾ ಟಿ7 ಅಡ್ವೆಂಚರ್ ಮೋಟಾರ್ ಸೈಕಲ್?

ಎಂಜಿನ್

689-ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿರುವ ಟಿ7 ಅಡ್ವೆಂಚರ್ ಮೋಟಾರ್ ಸೈಕಲ್ ಮಾದರಿಯೂ 75-ಬಿಎಚ್‌ಪಿ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದ್ದು, ಲೈಟ್‌ವೆಟ್ ಬಾಡಿ, ಹೈ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಆಪ್ ರೋಡಿಂಗ್ ಕಿಂಗ್ ಆಗುತ್ತಾ ಯಮಹಾ ಟಿ7 ಅಡ್ವೆಂಚರ್ ಮೋಟಾರ್ ಸೈಕಲ್?

ತಾಂತ್ರಿಕ ವಿಭಾಗದಲ್ಲೂ ಸಾಕಷ್ಟು ಉನ್ನತಿಕರಣ ಮಾಡಲಾಗಿದ್ದು, ಹೈ ಎಂಡ್ ಕಾಂಪೊನೆಂಟ್ಸ್ , ಅಲ್ಯಮಿನಿಯಂ ಫ್ಯೂಲ್ ಟ್ಯಾಂಕ್ ಸೇರಿದಂತೆ ಹಲವು ಬಗೆಯ ಮೋಟಾರ್ ಸ್ಪೋರ್ಟ್‌ಗೆ ನೆರವಾಗಬಲ್ಲ ವೈಶಿಷ್ಟ್ಯತೆಗಳನ್ನು ಅಳವಡಿಕೆ ಮಾಡಲಾಗಿದೆ.

ಆಪ್ ರೋಡಿಂಗ್ ಕಿಂಗ್ ಆಗುತ್ತಾ ಯಮಹಾ ಟಿ7 ಅಡ್ವೆಂಚರ್ ಮೋಟಾರ್ ಸೈಕಲ್?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮೋಟಾರ್ ಸ್ಪೋರ್ಟ್ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡುತ್ತಿರುವ ಯಮಹಾ ಸಂಸ್ಥೆಯು 2018ರ ಮೊದಲ ತ್ರೈಮಾಸಿಕ ವೇಳೆಗೆ ಟಿ7 ಬಿಡುಗಡೆ ಮಾಡುತ್ತಿದ್ದು, ಸೆಪ್ಟೆಂಬರ್ 6ರ ನಂತರ ಹೊಸ ಬೈಕಿನ ಬಗೆಗೆ ಮತ್ತಷ್ಟು ತಾಂತ್ರಿಕ ವಿವರಣೆ ಮತ್ತು ಬೆಲೆ ಮಾಹಿತಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

Read more on ಯಮಹಾ yamaha
English summary
Read in Kannada about Yamaha Teases T7 Adventure Motorcycle.
Story first published: Saturday, August 19, 2017, 13:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark