ಬಿಎಸ್-4 ವೈಶಿಷ್ಟ್ಯತೆಗಳೊಂದಿಗೆ ಬರುತ್ತಿದೆ ಯಮಹಾ ವೈಝಡ್ಎಫ್-ಆರ್3
ಭಾರತೀಯ ಆಟೋ ಉದ್ಯಮ ವಲಯದಲ್ಲಿ ಬಿಎಸ್ 3 ನಿಷೇಧ ಹಿನ್ನೆಲೆ ಮಾರಾಟ ಸ್ಥಗಿತಗೊಂಡಿದ್ದ ಯಮಹಾ ವೈಝಡ್ಎಫ್-ಆರ್3 ಇದೀಗ ಬಿಎಸ್ 4 ವೈಶಿಷ್ಟ್ಯತೆಗಳೊಂದಿಗೆ ಮರು ಬಿಡುಗಡೆ ಸಿದ್ಧಗೊಂಡಿದೆ.
ಭಾರತೀಯ ಆಟೋ ಉದ್ಯಮ ವಲಯದಲ್ಲಿ ಬಿಎಸ್ 3 ನಿಷೇಧ ಹಿನ್ನೆಲೆ ಮಾರಾಟ ಸ್ಥಗಿತಗೊಂಡಿದ್ದ ಯಮಹಾ ವೈಝಡ್ಎಫ್-ಆರ್3 ಇದೀಗ ಬಿಎಸ್ 4 ವೈಶಿಷ್ಟ್ಯತೆಗಳೊಂದಿಗೆ ಮರು ಬಿಡುಗಡೆ ಸಿದ್ಧಗೊಂಡಿದೆ.

ಜಪಾನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ಉತ್ಪಾದನಾ ಸಂಸ್ಥೆಯಾದ ಯಮಹಾ ತನ್ನ ಸೂಪೃರ್ ಬೈಕ್ ಮಾದರಿಯಾದ ವೈಝಡ್ಎಫ್-ಆರ್3 ಅನ್ನು ಪ್ರಸ್ತುತ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಸಿದ್ಧಗೊಳಿಸಿದ್ದು, ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಬೇಡಿಕೆ ಹೊಂದಿರುವ ಯಮಹಾ ವೈಝಡ್ಎಫ್-ಆರ್3, ಈ ಹಿಂದೆ ಪ್ರಮುಖ ಬೈಕ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ಮೂಲಕ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಆದ್ರೆ ಏಪ್ರಿಲ್ 1ರಿಂದ ಬಿಎಸ್ 4 ಎಂಜಿನ್ ಕಡ್ಡಾಯವಾದ ಹಿನ್ನೆಲೆ ವೈಝಡ್ಎಫ್-ಆರ್3 ಮಾರಾಟ ಹಿಂಪಡೆದಿದ್ದ ಯಮಹಾ, ಮುಂಬರುವ ನವೆಂಬರ್ ಮೊದಲ ವಾರದಲ್ಲಿ ಮರುಬಿಡುಗಡೆ ಮಾಡುವ ಮಾಹಿತಿ ಹೊರಹಾಕಿದೆ.
Recommended Video


ಇನ್ನು 321 ಸಿಸಿ ಇನ್ ಲೈನ್ ಟ್ವಿನ್ ಸಿಲಿಂಡರ್ ಎಂಜಿನ್ ಸಾಮರ್ಥ್ಯದೊಂದಿಗೆ ಸೂಪರ್ ಬೈಕ್ ಪ್ರಿಯರಿಗೆ ಹೊಸ ಅನುಭೂತಿ ನೀಡಿರುವ ವೈಝಡ್ಎಫ್-ಆರ್3, 41-ಬಿಎಚ್‌ಪಿ ಮತ್ತು 29-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿರುವುದು ವಿಶೇಷ.

ಇದರ ಜೊತೆ ಎಬಿಎಸ್ ತಂತ್ರಜ್ಞಾನ, ಮೋನೋಶಾರ್ಕ್ ಸಸ್ಪೆಷನ್, ಟೆಲಿಸ್ಕೊಲಿಪ್ ಫೊರ್ಕ್ ಅಪ್, 6-ಸ್ಪೀಡ್ ಗೇರ್‌ಬಾಕ್ಸ್, ಡಿಸ್ಕ್ ಬ್ರೇಕ್ ವ್ಯವಸ್ಥೆಯನ್ನು ಹೊಂದಿದ್ದು, ಥೈಲ್ಯಾಂಡ್ ಯಮಹಾ ಉತ್ಪಾದನಾ ಘಟಕದಲ್ಲಿ ಸಿದ್ಧಗೊಂಡಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಸೂಪರ್ ಬೈಕ್ ಆವೃತ್ತಿಯಲ್ಲೇ ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ವೈಝಡ್ಎಫ್-ಆರ್3 ತನ್ನದೇ ಆದ ಬೇಡಿಕೆ ಹೊಂದಿದ್ದು, ಇದೀಗ ಬಿಎಸ್ 4 ಜೊತೆ ಅಭಿವೃದ್ಧಿ ಹೊಂದಿರುವುದರಿಂದ ಮತ್ತಷ್ಟು ಬೇಡಿಕೆ ಹೆಚ್ಚಲಿದೆ.


Click it and Unblock the Notifications