ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಬಜಾಜ್ ಪ್ಲಾಟಿನಾ 110 ಬೈಕ್
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ತಮ್ಮ ಜನಪ್ರಿಯ ಪ್ಲಾಟಿನಾ 110 ಬೈಕಿಗೆ ಹೊಸ ಅಪ್ಡೇಟ್‍ಗಳನ್ನು ನೀಡಿ ಮತ್ತು ಬಿಡುಗಡೆಗೊಳಿಸಿದೆ. ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 49,300 ಸಾವಿರಕ್ಕೆ ಬೆಕಿನ ಬೆಲೆಯನ್ನು ನಿಗದಿ ಮಾಡಲಾಗಿದ್ದು, ಈಗಾಗಲೆ ಬಜಾಜ್ ಡೀಲರ್‍ಗಳ ಬಳಿ ಖರೀದಿಗೆ ಸಿದ್ಧವಾಗಿದೆ.

ಬಜಾಜ್ ಪ್ಲಾಟಿನಾ 110 ಬೈಕ್‍ಗಳು ಈ ಬಾರಿ ಹೊಸ ಸೇಫ್ಟಿ ರೆಗ್ಯುಲೇಷನ್‍ಗಳ ಆಧಾರದ ಮೇಳೆ ಹೊಸದಾಗಿ ಸಿಬಿಎಸ್ (ಕಾಂಬಿ ಬ್ರೇಕಿಂ ಸಿಸ್ಟಂ) ಅನ್ನು ಪಡೆದುಕೊಂಡಿದ್ದು, ಜೊತೆಗೆ ಹೆಚ್ಚಿನ ಸಾಮರ್ಥ್ಯವನ್ನು ನೀಡಲು ಹೊಸ ಎಂಜಿನ್ ಅನ್ನು ಸಹ ಪಡೆದುಕೊಂಡಿದೆ.

ಪ್ರಸ್ಥುತ ಲಭ್ಯವಿರುವ ಬಜಾಜ್ ಪ್ಲಾಟಿನಾ ಬೈಕ್ 102ಸಿಸಿ ಏಕ್ ಕೂಲ್ಡ್ ಡಿಟಿಎಸ್-ಐ ಎಂಜಿನ್ ಅಧಾರಿತ ವಾಹನಗಳನ್ನು ಅವುಗಳ ಸ್ಟಾಕ್ ಇರುವ ವರೆಗು ಮಾರಾಟಮಾಡಲಾಗಿದ್ದು, ಅಪ್ಡೇಟೆಡ್ ಬೈಕ್‍ಗಳು ಕದಿಮೆ ಬೆಲೆಯಲ್ಲಿ ಲಭ್ಯವಾಗುತ್ತಿರುವುದು ಎಂಟ್ರಿ ಲೆವೆಲ್ ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

ಹೊಸ ಬಜಾಜ್ ಪ್ಲಾಟಿನಾ ಬೈಕ್‍ಗಳಲ್ಲಿ ಈ ಬಾರಿ ಡಿಸ್ಕ್ವರ್ 110 ಬೈಕ್‍ನಿಂದ ಪಡೆದ 115.5ಸಿಸಿ ಏರ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, 8.6 ಬಿಹೆಚ್‍ಪಿ ಮತ್ತು 9.81ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 4 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಎಂಜಿನ್ ಪಡೆದ ನಂತರ ಬಜಾಜ್ ಪ್ಲಾಟಿನಾ 110 ಬೈಕ್‍ಗಳು ಹಿಂದಿನ ತಲೆಮಾರಿನ ಬೈಕ್‍ಗಳಿಗಿಂತಾ 0.7 ಬಿಹೆಚ್‍ಪಿ ಮತ್ತು 1.46ಎನ್ಎಂ ಟಾರ್ಕ್ ಅನ್ನು ಅಧಿಕವಾಗಿ ಉತ್ಪಾದಿಸುತ್ತದೆ ಎನ್ನಲಾಗಿದೆ.

ಮೇಲೆ ಹೇಳಿರುವ ಹಾಗೆ ಬಜಾಜ್ ಪ್ಲಾಟಿನಾ 110 ಬೈಕ್‍ನಲ್ಲಿ ಈ ಬಾರಿ 2019ರಿಂದ ಕಡ್ಡಯ ಆಗಲಿರುವ ಹೊಸ ಸುರಕ್ಷಾ ಕಾಯಿದೆಯ ಅಡಿಯಲ್ಲಿ ಕಾಂಬಿ-ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದ್ದು, ಎರಡು ಬದಿಗಳಲ್ಲಿ ಡ್ರಂ ಬ್ರೇಕ್ ಅನ್ನು ಸ್ಟ್ಯಾಂಡರ್ಡ್ ಆಗಿ ಮತ್ತು ಪ್ರಂಟ್ ಡಿಸ್ಕ್ ಬ್ರೇಕ್ ಅನುನ್ ಆಯ್ಕೆಯಾಗಿ ಪಡೆದುಕೊಳ್ಳಬಹುದಾಗಿದೆ.

ಹೊಸ ಬಜಾಜ್ ಪ್ಲಾಟಿನಾ 110 ಸಿಸಿ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ ಬಜಾಜ್ ಸಂಸ್ಥೆಯು ಈ ಬೈಕ್ ಅನ್ನು ಬಿಡುಗಡೆಗೊಳಿಸಿದ ನಂತರ ಯಾವುದೇ ಮಾರ್ಪಾಡುಗಳನ್ನು ಮಾಡಲಿಲ್ಲ ಎನ್ನಲಾಗಿದ್ದು, ಈ ಬಾರಿ ಡೀಸ್ಕವರ್ ಬೈಕ್‍ನಿಂದ ಪಡೆದ ಸ್ಪೋರ್ಟಿಯರ್ ಮತ್ತು ಬೋಲ್ಡರ್ ಡೆಕಲ್ಸ್ ಹಾಗು ಹೊಸ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ.

ಸುತ್ತಳತೆಯ ವಿಚಾರದಲ್ಲಿ ಬಜಾಜ್ ಪ್ಲಾಟಿನಾ 110 ಬೈಕ್ 2006ಎಂಎಂ ಉದ್ದ, 1076ಎಂಎಂ ಎತ್ತರವನ್ನು ಪಡೆದುಕೊಂಡಿದ್ದು,11 ಲೀಟರ್‍ನ ಫ್ಯುಯಲ್ ಟಾಂಕ್ ಅನ್ನು ಅಳವಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿಸ್ಪರ್ಧಿಗಳಿಂದ ಇದೇ ರೀತಿಯ ನವೀಕರಣಗಳನ್ನು ಪ್ರಾರಂಭಿಸಲು ಈ ಅಪ್ಡೇಟ್ ಕಿಕ್ ಮಾಡಲು ನಾವು ನಿರೀಕ್ಷಿಸುತ್ತೇವೆ.
ಹೊಸ ಬಜಾಜ್ ಪ್ಲಾಟಿನಾ 110 ಬೈಕಿನ ವಾಲ್ಕ್ ಅರೌಂಡ್ ವೀಡಿಯೊ ಇಲ್ಲಿದೆ ನೋಡಿ..


Click it and Unblock the Notifications








