ಹೊಸ ಬಣ್ಣದಲ್ಲಿ ಬಿಡುಗಡೆಗೊಂಡ ಕವಾಸಕಿ ನಿಂಜಾ 650 ಬೈಕ್..

ಜಪಾನ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಕವಾಸಕಿ ತಮ್ಮ ಹೊಸ ನಿಂಜಾ 650 ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಈ ಬೈಕಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.49 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

By Rahul Ts

ಜಪಾನ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಕವಾಸಕಿ ತಮ್ಮ ಹೊಸ ನಿಂಜಾ 650 ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಈ ಬೈಕಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.49 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಈ ಹಿಂದೆಯೆ ಕವಾಸಕಿ ನೀಲಿ ಬಣ್ಣದಲ್ಲಿ ನಿಂಜಾ 650 ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಇದೀಗ ಈ ಬೈಕ್ ಅನ್ನು ಕಪ್ಪು ಬಣ್ಣದಲ್ಲಿ ಬಿಡುಗಡೆಗೊಳಿಸಿದೆ.

ಹೊಸ ಬಣ್ಣಗಳಲ್ಲಿ ಬಿಡುಗಡೆಗೊಂಡ ಕವಾಸಕಿ ನಿಂಜಾ 650 ಬೈಕ್..

ಇದಲ್ಲದೆ 2018ರಲ್ಲಿ ಕವಾಸಕಿ ತಮ್ಮ ನಿಂಜಾ 650 ಬೈಕಿನ ಕೆಆರ್‍‍ಟಿ ವರ್ಷನ್ ಅನ್ನು ಸಹ ಬಿಡುಗಡೆಗೊಳಿಸಿದ್ದು, ಈ ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.60 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ. ಮಾರುಕಟ್ಟೆಗೆ ಲಗ್ಗೆಯಿಟ್ಟ ನಿಂಜಾ 650 ಬೈಕ್ ನೀಲಿ ಬಣ್ಣದೊಂದಿಗೆ ಇದೀಗ ಕಪ್ಪು ಬಣ್ಣದೊಂದಿಗೆ ಖರೀದಿಗೆ ಲಭ್ಯವಿದೆ.

ಹೊಸ ಬಣ್ಣಗಳಲ್ಲಿ ಬಿಡುಗಡೆಗೊಂಡ ಕವಾಸಕಿ ನಿಂಜಾ 650 ಬೈಕ್..

ಎಂಜಿನ್ ಸಾಮರ್ಥ್ಯ

2019ರ ಹೊಸ ಕವಾಸಕಿ ನಿಂಜಾ 650 ಬೈಕ್ 649ಸಿಸಿ ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್ 8 ವೇಲ್ವ್ ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 67.2 ಬಿಹೆಚ್‍‍ಪಿ ಮತ್ತು 65.7ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಬಣ್ಣಗಳಲ್ಲಿ ಬಿಡುಗಡೆಗೊಂಡ ಕವಾಸಕಿ ನಿಂಜಾ 650 ಬೈಕ್..

ಕವಾಸಕಿ ನಿಂಜಾ 650 ಬೈಕ್ ಡೀಜಿಟಲ್ ಇಗ್ನಿಷನ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ವೈಶಿಷ್ಟ್ಯತೆಗಳನ್ನು ಹೊಂದಿದ್ದು ಇದರಲ್ಲಿ ಪ್ಯಾರಲಲ್ ಟ್ವಿನ್ ಎಂಜಿನ್ ಸ್ಪಂದಿಸಲು ತ್ವರಿತಗತಿಯಲ್ಲಿ, ಇಂಧನ ದಕ್ಷತೆಗೆ ಹೊಂದುವಂತೆ ಮತ್ತು ಬಲವಾದ ಕಡಿಮೆ ಮಧ್ಯ ಶ್ರೇಣಿಯ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಹೊಸ ಬಣ್ಣಗಳಲ್ಲಿ ಬಿಡುಗಡೆಗೊಂಡ ಕವಾಸಕಿ ನಿಂಜಾ 650 ಬೈಕ್..

ಇನ್ನು ಇದರಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ 300ಎಮ್ಎಮ್ ಪೆಟಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220ಎಮ್ಎಮ್ ಸಿಂಗಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದ್ದು, ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಸಂಸ್ಥೆಯು ಆಯ್ಕೆಯಾಗಿ ನೀಡಿದೆ.

ಹೊಸ ಬಣ್ಣಗಳಲ್ಲಿ ಬಿಡುಗಡೆಗೊಂಡ ಕವಾಸಕಿ ನಿಂಜಾ 650 ಬೈಕ್..

ವೈಶಿಷ್ಟ್ಯತೆಗಳು

ಕವಾಸಕಿ ನಿಂಜಾ 650 ಬೈಕ್ ಎಲ್‍‍ಸಿಡಿ ಸ್ಕ್ರೀನ್ ಅನ್ನು ಪಡೆದಿದ್ದು ಇದನ್ನು ಆಧಿನಿಕ ಇನ್ಸ್ಟ್ರೂಮೆಂಟ್ ಕ್ಲಸ್ಟರ್‍‍ನಿಂದಿಗೆ ಜೋಡಿಸಲಾಗಿದೆ. ಇದಲ್ಲದೆ ಡಿಜಿಟಲ್ ಟಾಚೋಮೀಟರ್ ಮತ್ತು ಗೇರ್ ಸ್ಥಾನ ಸೂಚಕವನ್ನು ಅಳವಡಿಸಲಾಗಿದೆ.

ಹೊಸ ಬಣ್ಣಗಳಲ್ಲಿ ಬಿಡುಗಡೆಗೊಂಡ ಕವಾಸಕಿ ನಿಂಜಾ 650 ಬೈಕ್..

ಇದು ಮಾತ್ರ ಅಲ್ಲದೆ ಇದರಲ್ಲಿ ಅಳವಡಿಸಲಾಗಿರುವ ಎಲ್‍‍ಸಿಡಿ ಡಿಸ್ಪ್ಲೇ‍‍ನಲ್ಲಿ ಓಡೊಮೀಟರ್, ಡ್ಯುಯಲ್ ಟ್ರಿಪ್ ಮೀಟರ್, ರಿಮೈನಿಂಗ್ ರೇಂಜ್, ಪ್ರಸ್ಥುತ ಮತ್ತು ಸರಾಸರಿ ಇಂಧನ ಬಳಕೆ, ಕೂಲಂಟ್ ಟೆಂಪ್ರೇಚುರ್, ಸಮಯ ಮತ್ತು ಎಕಾನಾಮಿಕಲ್ ರೈಡಿಂಗ್ ಇಂಡಿಕೇಟರ್‍‍ನಂತಹ ಆಯ್ಕೆಗಳನ್ನು ತೋರಿಸುತ್ತದೆ.

ಹೊಸ ಬಣ್ಣಗಳಲ್ಲಿ ಬಿಡುಗಡೆಗೊಂಡ ಕವಾಸಕಿ ನಿಂಜಾ 650 ಬೈಕ್..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕವಾಸಕಿ ತಮ್ಮ ನಿಂಜಾ 650 ಬೈಕ್ ಅನ್ನು ಈಗಾಗಲೆ ನೀಲಿ ಬಣ್ಣದಲ್ಲಿ ಬಿಡುಗಡೆಗೊಳಿಸಿದ್ದು, ಇದೀಗ ಈ ಬೈಕ್ ಅನ್ನು ಕಪ್ಪು ಬಣ್ಣದಲ್ಲಿ ಬಿಡುಗಡೆಗೊಳಿಸಿದ್ದು, ಮಾರಕಟ್ಟೆಯಲ್ಲಿ ಹೋಂಡಾ ಸಿಬಿಆರ್ 650ಎಫ್ ಮತ್ತು ಬೆನೆಲ್ಲಿ ಟಿಎನ್‍‍ಟಿ 600ಜಿಟಿ ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Friday, July 6, 2018, 16:37 [IST]
English summary
2019 Kawasaki Ninja 650 launched in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+