ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!
ವಾಹನಗಳಲ್ಲಿನ ಕೆಲವು ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ 125 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಹೊಸ ನಿಯಮವೊಂದನ್ನು ಜಾರಿಗೆ ತರುತ್ತಿದೆ.
ದೇಶಾದ್ಯಂತ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ವಾಹನಗಳಲ್ಲಿನ ಕೆಲವು ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ 125 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಹೊಸ ನಿಯಮವೊಂದನ್ನು ಜಾರಿಗೆ ತರುತ್ತಿದೆ.

ಈ ಹಿಂದೆ 2017ರ ಏಪ್ರಿಲ್ 1 ರಿಂದ ಬಿಎಸ್ 3 ಎಂಜಿನ್ ವಾಹನಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದ ಕೇಂದ್ರ ಸರ್ಕಾರವು, ಇದೀಗ 125ಸಿಸಿ ಮೇಲ್ಪಟ್ಟ ಬೈಕ್‌ಗಳು ಮತ್ತು ಸ್ಕೂಟರ್‌ಗಳು ಕಡ್ಡಾಯವಾಗಿ ಎಬಿಎಸ್ ಹೊಂದರಬೇಕೆಂಬ ಮಹತ್ವದ ಆದೇಶವನ್ನು ಹೊರಡಿಸಲಿದೆ.

ಬೈಕ್‌ಗಳು ಮತ್ತು ಸ್ಕೂಟರ್‌ಗಳಲ್ಲಿ ಎಬಿಎಸ್ (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನವನ್ನು ಕಡ್ಡಾಯಗೊಳಿಸುವ ಮೂಲಕ ಅಪಘಾತಗಳ ಸಂಖ್ಯೆ ತಗ್ಗಿಸುವ ಉದ್ದೇಶ ಹೊಂದಿದ್ದು, ಇದು ಬೈಕ್ ಸವಾರರಿಗೂ ಕೂಡಾ ಸಹಕಾರಿಯಾಗಿರಲಿದೆ ಎನ್ನಲಾಗಿದೆ.

ಈಗಾಗಲೇ ಕೆಲವು ಸುಧಾರಿತ ಬೈಕ್ ಮತ್ತು ದುಬಾರಿ ಬೈಕ್‌ಗಳಲ್ಲಿ ಮಾತ್ರ ಈ ಸೌಲಭ್ಯವಿದ್ದು, ಕೇಂದ್ರ ಸರ್ಕಾರ ಹೊಸ ನಿಮಯದಂತೆ 125 ಸಿಸಿ ಮೇಲ್ಪಟ್ಟ ಎಲ್ಲಾ ಬೈಕ್‌ಗಳಲ್ಲೂ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ಮಾಡಲಿದೆ.

ಜೊತೆಗೆ ಏಪ್ರಿಲ್ 1ರಿಂದಲೇ ಎಬಿಎಸ್ ಇಲ್ಲದ 125 ಸಿಸಿ ಮೇಲ್ಪಟ್ಟ ಬೈಕ್‌ಗಳ ಮಾರಾಟಕ್ಕೂ ಬ್ರೇಕ್ ಬೀಳಲಿದ್ದು, ಒಂದು ವೇಳೆ ನೀವು ಅಂತಹ ಬೈಕ್‌ಗಳನ್ನು ಖರೀದಿ ಮಾಡಿದರೂ ನೋಂದಣಿ ಕೂಡಾ ಆಗುವುದಿಲ್ಲ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸದ್ಯ ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ 125ಸಿಸಿ ಮೇಲ್ಪಟ್ಟ ಕೆಲವು ಬೈಕ್‌ಗಳಲ್ಲಿ ಎಬಿಎಸ್ ಇಲ್ಲದಿರುವುದನ್ನು ಗಮನಿಸಬಹುದಾಗಿದ್ದು, ಇಂತಹ ಬೈಕ್‌ಗಳ ಮೇಲೂ ಕೇಂದ್ರ ಸಾರಿಗೆ ಇಲಾಖೆಯು ಸದ್ಯದಲ್ಲೇ ಮಹತ್ವದ ನಿರ್ಧಾರವನ್ನು ಪ್ರಕಟಿಸಲಿದೆ.

ಎಬಿಎಸ್‌ನಿಂದ ಏನು ಲಾಭ?
ಹೌದು. ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಬಹುದಾದ ಸಹಜ ಪ್ರಶ್ನೆ. ಒಂದು ವೇಳೆ ಬೈಕ್‌ಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿದ ಸಾಧಿಸಬಹುದಾಗಿದೆ.

ಎಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಮಾದರಿಗಳಿಗೂ ಬೆಲೆಗಳಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸವಿದ್ದು, ಬೈಕ್ ಮಾದರಿಗಳಿಗೆ ಅನುಗುಣವಾಗಿ ಅದು 8 ರಿಂದ 12 ಸಾವಿರ ರೂಪಾಯಿ ಹೆಚ್ಚುವರಿ ದರಗಳು ನಿಗದಿಯಾಗಿರುತ್ತವೆ.

ಮತ್ತೊಂದು ಮುಖ್ಯ ವಿಚಾರ ಏನೆಂದರೆ ಎಬಿಎಸ್ ತಂತ್ರಜ್ಞಾನವು ಸವಾರಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡಲಿದ್ದು, ಹೊಸ ನಿಮಯದಿಂದ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕೂಡಾ ತಡೆಯಬಹುದಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಹೊಸ ನಿಯಮವು ದ್ವಿಚಕ್ರ ವಾಹನ ಸವಾರರಿಗೆ ಅನುಕೂಲಕರವಾಗಲಿದ್ದು, ಮುಂದಿನ ತಿಂಗಳು ಏಪ್ರಿಲ್ 1ರಿಂದ ಎಬಿಎಸ್ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಹಿನ್ನೆಲೆ ಇನ್ಮುಂದೆ ಹೊಸ ಬೈಕ್ ಖರೀದಿದಾರರು ಪ್ರಸ್ತುತ ಮಾರುಕಟ್ಟೆಯಲ್ಲಿ ನಿಯಮಗಳಿಗೆ ಅನುಗುಣವಾಗಿ ಬೈಕ್ ಆಯ್ಕೆ ಮಾಡುವುದು ಸುರಕ್ಷತೆಯ ದೃಷ್ಠಿಯಿಂದ ಒಳ್ಳೆಯದು.


Click it and Unblock the Notifications








