ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಕೆಲವು ಬೈಕ್ ಸವಾರರಿಗೆ ಹೆಲ್ಮೆಟ್ ಬಳಕೆ ಮಾಡುವುದು ಅಂದ್ರೆ ಅಲರ್ಜಿ ಅಂತಾ ಕಾಣುತ್ತೆ. ಟ್ರಾಫಿಕ್ ಪೊಲೀಸರು ದಂಡ ಹಾಕಿದ್ರು ಪರವಾಗಿಲ್ಲ ಹೆಲ್ಮೆಟ್ ಹಾಕೋದಿಲ್ಲ ಎನ್ನುವರರು ನಮ್ಮ ಸುತ್ತುಮುತ್ತ ಹಲವಾರು ಜನ ಇದ್ದಾರೆ. ಇದಕ್ಕೆ ಅವರು ಕೋಡುವ ಕಾರಣವೇ ಬೇರೆ. ತುಂಬಾ ಹೊತ್ತು ಹೆಲ್ಮೆಟ್ ಹಾಕುವುದರಿಂದ ತಲೆಗೂದಲು ಉದುರುತ್ತೆ ಅಂತಾ ಜೀವ ರಕ್ಷಕ ಹೆಲ್ಮೆಟ್ ಬಳಕೆಗೆ ಹಿಂದೇಟು ಹಾಕುತ್ತಾರೆ. ಆದ್ರೆ ಅದಕ್ಕೆ ಇನ್ಮುಂದೆ ಚಿಂತಿಸಬೇಕಿಲ್ಲ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಹೌದು, ಆಟೋ ಉದ್ಯಮದಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ವಾಹನ ಸವಾರರ ಸುರಕ್ಷತೆಗಾಗಿ ದಿನಕ್ಕೊಂದು ಹೊಸ ಸೌಲಭ್ಯಗಳನ್ನು ಪರಿಚಯಿಸಲಾಗುತ್ತಿದ್ದು, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಫೆಹರ್ ಹೆಲ್ಮೆಟ್ ಉತ್ಪಾದನಾ ಸಂಸ್ಥೆಯು ಬೈಕ್ ಸವಾರರಿಗೆ ಸಹಾಯಕವಾಗಬಲ್ಲ ಹವಾನಿಯಂತ್ರಿತ ಹೆಲ್ಮೆಟ್ ಮಾದರಿಗಳನ್ನು ಪರಿಚಯಿಸುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಫೆಹರ್ ACH-1 ಹೆಸರಿನೊಂದಿಗೆ ಎಸಿ ಸೌಲಭ್ಯ ಹೊಂದಿರುವ ಹೆಲ್ಮೆಟ್ ಪರಿಚಯಿಸಲಾಗಿದ್ದು, ಇದು ವಿಶ್ವದ ಮೊದಲ ಹವಾನಿಯಂತ್ರಿತ ಹೆಲ್ಮೆಟ್ ಮಾದರಿಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಅಂದ್ರೆ ನೀವು ನಂಬಲೇಬೇಕು.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ವಾಸ್ತವವಾಗಿ, ಬಹುತೇಕ ಬೈಕ್ ಸವಾರರು ಟ್ರಾಫಿಕ್ ಪೊಲೀಸರು ದಂಡ ಹಾಕುತ್ತಾರೆ ಎನ್ನುವ ಭಯದಿಂದಲೇ ಹೆಲ್ಮೆಟ್ ಬಳಕೆ ಮಾಡುತ್ತಿದ್ದಾರೆ ಹೊರತು, ಸ್ವಯಂ ಪ್ರೇರಣೆಯಿಂದ ಜೀವ ರಕ್ಷಕವಾಗಿ ಕಾರ್ಯನಿರ್ವಹಣೆ ಮಾಡುವ ಹೆಲ್ಮೆಟ್ ಬಳಕೆ ಮಾಡುತ್ತಿರುವ ಬೈಕ್ ಸವಾರರು ತುಂಬಾ ವಿರಳ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಇದಕ್ಕೆ ಕಾರಣ, ದೀರ್ಘ ಕಾಲದವರೆಗೆ ಹೆಲ್ಮೆಟ್ ಬಳಕೆಗೆ ಮಾಡುವುದರಿಂದ ತಲೆಗೂದಲು ಉದುರುತ್ತೆ ಎಂಬ ಕಾರಣ ಹೇಳುವ ಹಲವು ಬೈಕ್ ಸವಾರರು, ಬೆವರಿನ ಸಮಸ್ಯೆಯಿಂದಾಗಿ ಹೆಲ್ಮೆಟ್ ಉಸಾಬರಿಯೇ ಸಾಕು ಎನ್ನುವಷ್ಟು ರೋಸಿ ಹೋಗಿತ್ತಾರೆ. ಆದ್ರೆ ಅದಕ್ಕೆ ಇನ್ನು ಚಿಂತಿಸಬೇಕಿಲ್ಲ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಬೈಕ್ ಪ್ರಿಯರ ಎಸಿ ಹೆಲ್ಮೆಟ್..!

ವಿಶ್ವದರ್ಜೆಯ ಹೆಲ್ಮೆಟ್ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಫೆಹರ್ ಸಂಸ್ಥೆಯು ಈಗಾಗಲೇ ಹಲವು ಬಗೆಯ ಹೆಲ್ಮೆಟ್‌ಗಳನ್ನು ಪರಿಚಯಿಸಿದ್ದು, ಇದೀಗ ಬೈಕ್ ಸವಾರರ ನೆರವಿಗೆ ಬರುವಂತಹ ಹವಾನಿಯಂತ್ರಿತ ಹೆಲ್ಮೆಟ್‌ಗಳನ್ನು ಅಭಿವೃದ್ಧಿಗೊಳಿಸಿ ಮಾರಾಟಕ್ಕೆ ಸಿದ್ದವಾಗಿದೆ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ತಲೆ ಬಿಸಿ ಬೇಡ..

ಫೆಹರ್ ACH-1 ಹೆಲ್ಮೆಟ್ ಬಳಕೆಯಿಂದ ಬೆವರಿನ ಸಮಸ್ಯೆ ನಿಮ್ಮ ಬಳಿ ಸುಳಿಯಲಾರದು. ಯಾಕೆಂದ್ರೆ ಹೆಲ್ಮೆಟ್ ಒಳಭಾಗದಲ್ಲಿ 15 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಬಿಸಿ ಉತ್ಪತ್ತಿಯಾದಲ್ಲಿ ಸ್ವಯಂ ನಿಯಂತ್ರಿತ ಎಸಿ ಕಾರ್ಯನಿರ್ವಹಣೆ ಶುರುವಾಗುತ್ತೆ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಇದು ಕೆಲವೇ ನಿಮಿಷಗಳಲ್ಲಿ ಹೆಲ್ಮೆಟ್ ಒಳಭಾಗದಲ್ಲಿ ಬಿಸಿ ಗಾಳಿಯನ್ನ ಹೊರಹಾಕುವುದಲ್ಲದೇ ತಲೆ ತಂಪಾಗುವಂತೆ ಮಾಡುತ್ತೆ. ಈ ಮೂಲಕ ದೂರದ ಪ್ರಯಾಣದಲ್ಲೂ ಯಾವುದೇ ಕಿರಿಕಿರಿಯಾಗದಂತೆ ಬೈಕ್ ಸವಾರಿಗೆ ನೆರವಾಗುತ್ತೆ ಎನ್ನಬುಹುದು.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಹೇಗೆ ಕಾರ್ಯನಿರ್ವಹಿಸುತ್ತೆ?

ಹೆಲ್ಮೆಟ್ ಹಿಂಭಾಗದಲ್ಲಿ ಎಸಿ ಯುನಿಟ್ ಅಳವಡಿಸಲಾಗಿದ್ದು, ಇದರಲ್ಲಿ ರೈಡರ್ಸ್ ಮೋಟಾರ್‌ಸೈಕಲ್ ಸಂಸ್ಥೆಯು ಬ್ಯಾಟರಿ ಬಳಕೆ ಮಾಡಲಾಗಿದೆ. ಇದು ರೀಚಾರ್ಜ್ ಮಾಡಬಹುದು ಬ್ಯಾಟರಿ ಮಾದರಿಯಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದಲ್ಲಿ 6 ಗಂಟೆಗಳ ಕಾಲ ಕಾರ್ಯನಿರ್ವಹಣೆ ಮಾಡಬಲ್ಲದು.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ನಿಮಗೆ ಅಗತ್ಯವಿದ್ದಲ್ಲಿ ಹೆಚ್ಚುವರಿಯಾಗಿ ಬ್ಯಾಕ್ ಅಪ್ ಸಹ ಖರೀದಿ ಮಾಡಬಹುದಾಗಿದ್ದು, ಬೇರೆ ಬೇರೆ ಬೆಲೆಗಳಲ್ಲಿ ಲಭ್ಯವಿರುವ 3000mAh ಮತ್ತು 12,00mAh ಪವರ್ ಪ್ರೇರಿತ ಬ್ಯಾಕ್ ಅಪ್ ಬ್ಯಾಟರಿಗಳನ್ನು ಆಯ್ಕೆ ಮಾಡುವುದರಿಂದ ದೂರದ ಪ್ರಯಾಣದ ವೇಳೆ ಇವು ಸಹಕಾರಿಯಾಗುತ್ತವೆ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಹಗುರುವಾಗಿ ಈ ಎಸಿ ಹೆಲ್ಮೆಟ್...

ಫೆಹರ್ ಹೆಲ್ಮೆಟ್‌ನಲ್ಲಿ ಎಸಿ ಯುನಿಟ್ ಬಳಕೆ ಮಾಡಿದ್ದರೂ ಸಹ ಸಾಮಾನ್ಯ ಹೆಲ್ಮೆಟ್‌ನಂತೆಯೇ ಅತಿ ಹಗುರವಾಗಿದ್ದು, ಗುಣಮಟ್ಟದ ಮೇಲ್ಪದರದೊಂದಿಗೆ 1 ಕೆ.ಜಿ 450 ಗ್ರಾಂ ತೂಕ ಪಡೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ದುಬಾರಿ ಹೆಲ್ಮೆಟ್‌ಗಳಿಗೆ ಹೋಲಿಕೆ ಮಾಡಿದಲ್ಲಿ ಇದು ಉತ್ತಮ ಎನ್ನಬಹುದು.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಸೌಲಭ್ಯಕ್ಕೆ ತಕ್ಕಂತೆ ಹೆಲ್ಮೆಟ್ ಬೆಲೆ..!

ಎಸಿ ಸೌಲಭ್ಯ ಹೊಂದಿರುವ ಈ ಹೆಲ್ಮೆಟ್ ತುಸು ದುಬಾರಿ ಎನ್ನಿಸಿದರೂ ನೀಡಿರುವ ಸೌಲಭ್ಯಕ್ಕೆ ಅದು ದುಬಾರಿ ಆಗದೇ ಇರಲಾರದು. ಸದ್ಯ ಮಾರುಕಟ್ಟೆಯಲ್ಲಿ ರೂ.42 ಸಾವಿರ ಬೆಲೆ ಹೊಂದಿರುವ ಈ ಹೆಲ್ಮೆಟ್ ಸೂಪರ್ ಬೈಕ್ ಸವಾರರ ಆಕರ್ಷಣೆ ಕಾರಣವಾಗಿದೆ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಪ್ರಸ್ತುತ ಮಾರುಕಟ್ಟೆಯಲ್ಲಿ ವಿಶ್ವದರ್ಜೆಯ ಹಲವು ಐಷಾರಾಮಿ ಹೆಲ್ಮೆಟ್‌ಗಳು ಮಾರಾಟಕ್ಕಿದ್ದು, ಸಾವಿರದಿಂದ ಲಕ್ಷದ ತನಕ ಹೆಲ್ಮೆಟ್ ಬೆಲೆ ಇವೆ ಅಂದ್ರೆ ನೀವು ನಂಬಲೇಬೇಕು. ಅವುಗಳಲ್ಲಿ ಫೆಹರ್ ACH-1 ಹೆಲ್ಮೆಟ್ ಮೊದಲ ಬಾರಿಗೆ ಎಸಿ ಸೌಲಭ್ಯ ಹೊಂದಿದೆ ಎನ್ನುವುದೇ ವಿಶೇಷ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಹೆಲ್ಮೆಟ್ ಇಲ್ಲದ ಬೈಕ್ ಸವಾರರಿಗೆ ಕಷ್ಟ-ಕಷ್ಟ

ದುಬಾರಿ ದಂಡಗಳನ್ನು ಒಳಗೊಂಡ ಹೊಸ ಸಂಚಾರಿ ನಿಯಮ ಜಾರಿ ನಂತರ ಕಡಿಮೆಯಾಗಬೇಕಿದ್ದ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯು ಮತ್ತಷ್ಟು ಹೆಚ್ಚಳವಾಗುತ್ತಿದ್ದು, ಕಡ್ಡಾಯ ಹೆಲ್ಮೆಟ್ ಬಳಕೆಗಾಗಿ ಮತ್ತಷ್ಟು ಹೊಸ ಕ್ರಮಗಳನ್ನು ಜಾರಿಗೆ ತರಲಾಗಿದೆ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಹೊಸ ಮೋಟಾರ್ ವೆಹಿಕಲ್ ಕಾಯ್ದೆ ಜಾರಿಗೆ ಬಂದ ನಂತರ ವಾಹನ ಸವಾರರನ್ನು ತೀವ್ರ ತಪಾಸಣೆ ಮಾಡುತ್ತಿರುವ ಟ್ರಾಫಿಕ್ ಪೊಲೀಸರು ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಭರ್ಜರಿ ದಂಡ ವಸೂಲಿ ಮಾಡುತ್ತಿದ್ದಾರೆ. ಹೀಗಿರುವಾಗ ಕೆಲವು ವಾಹನ ಸವಾರರು ಮಾತ್ರ ಹೊಸ ರೂಲ್ಸ್‌ಗೂ ಡೋಂಟ್ ಕೇರ್ ಎನ್ನುವಂತೆ ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇದ್ದು, ಹೆಲ್ಮೆಟ್ ಕಡ್ಡಾಯ ಬಳಕೆಗೆ ಬೆಂಗಳೂರು ಪೊಲೀಸರು ಹೊಸ ನಿಯಮವೊಂದನ್ನು ಕಡ್ಡಾಯವಾಗಿ ಜಾರಿಗೆ ತಂದಿದ್ದಾರೆ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಬೈಕ್ ಸವಾರರಿಗೆ ಹೆಲ್ಮೆಟ್ ಬಳಕೆಯು ಜೀವ ರಕ್ಷಕವಾಗಿದ್ದರೂ ಕೆಲವು ಬೈಕ್ ಸವಾರರು ಮಾತ್ರ ಹೆಲ್ಮೆಟ್ ಬಳಕೆ ಅವಶ್ಯಕತೆಯೇ ಇಲ್ಲ ಎನ್ನುವಂತಹ ಮನಸ್ಥಿತಿ ಹೊಂದಿದ್ದು, ಅಪಘಾತಗಳ ವೇಳೆ ಅದೆಷ್ಟೋ ಸವಾರರು ಜೀವ ಕಳೆದುಕೊಂಡಿದ್ದಾರೆ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಹೀಗಾಗಿ ಬೈಕ್ ಸವಾರರು ಕಡ್ಡಾಯ ಹೆಲ್ಮೆಟ್ ಬಳಕೆಗೆ ಹೊಸ ಸಂಚಾರಿ ನಿಯಮದಲ್ಲಿ ಭರ್ಜರಿ ದಂಡಗಳ ಹೊರತಾಗಿಯೂ ಹೆಲ್ಮೆಟ್ ಬಳಕೆಯನ್ನು ಕಟ್ಟುನಿಟ್ಟಾಗಿ ಕಡ್ಡಾಯಗೊಳಿಸುತ್ತಿರುವ ಬೆಂಗಳೂರು ಪೊಲೀಸರು ನೋ ಹೆಲ್ಮೆಟ್, ನೋ ಪೆಟ್ರೋಲ್ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಪೆಟ್ರೋಲ್ ಬಂಕ್ ಮಾಲೀಕರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಪೆಟ್ರೋಲ್ ಬಂಕ್‌ಗಳಿಗೆ ಬರುವ ದ್ವಿಚಕ್ರ ಸವಾರರು ಹೆಲ್ಮೆಟ್ ಬಳಕೆ ಮಾಡಿದ್ದರೆ ಮಾತ್ರವೇ ಇಂಧನ ಹಾಕುವಂತೆ ಪೊಲೀಸ್ ಪ್ರಕಟಣೆ ಹೊರಡಿಸಲಾಗಿದ್ದು, ಪೆಟ್ರೋಲ್ ಬಂಕ್ ಮಾಲೀಕರು ಕೂಡಾ ಬೈಕ್ ಸವಾರರಿಗೆ ಕಡ್ಡಾಯ ಹೆಲ್ಮೆಟ್ ಬಳಕೆ ಮಾಡಿದಲ್ಲಿ ಮಾತ್ರ ಪೆಟ್ರೋಲ್ ಎನ್ನುವಂತಹ ಫಲಕಗಳನ್ನು ಹಾಕುತ್ತಿದ್ದಾರೆ. ಇದರಿಂದ ಬೈಕ್ ಸವಾರರು ಒಂದು ವೇಳೆ ಹೆಲ್ಮೆಟ್ ಹಾಕದೆ ಪೊಲೀಸರಿಂದ ತಪ್ಪಿಸಿಕೊಂಡರೂ ಸಹ ಪೆಟ್ರೋಲ್ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ಎದುರಿಸಬೇಕಾಗುತ್ತೆ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರ್ ಕಾಯ್ದೆ ಅನುಷ್ಠಾನದ ನಂತರ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ ವಾಹನ ಸವಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಲಾಗುತ್ತಿದ್ದು, ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳಿಂದ ಕೋಟ್ಯಾಂತರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಮೋಟಾರ್ ವೆಹಿಕಲ್ ಕಾಯ್ದೆಗೆ ಕೆಲವು ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರವು ಪ್ರಸ್ತುತ ಇರುವ ದಂಡಗಳ ಮೊತ್ತದಲ್ಲಿ ಭಾರೀ ಪ್ರಮಾಣದ ಹೆಚ್ಚಳ ಮಾಡಲಾಗಿದ್ದು, ಇದರಲ್ಲಿ ಕೆಲವು ಪ್ರಕರಣಗಳ ಮೇಲೆ ಗರಿಷ್ಠ ಪ್ರಮಾಣದ ದಂಡಗಳನ್ನು ವಿಧಿಸಲಾಗಿದೆ.

More from DriveSpark

Article Published On: Tuesday, August 28, 2018, 18:25 [IST]
English summary
Feher ACH-1 Helmet — The World’s First Self-Contained Air-Conditioned Helmet.
Read more on helmet technology
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+