ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್..

ದೇಶಿಯ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ತಮ್ಮ ಜನಪ್ರಿಯ ಪಲ್ಸರ್ ಎನ್‍ಎಸ್ 160 ಬೈಕ್‍‍ಗೆ ಸಿಂಗಲ್ ಚಾನಲ್ ಎಬಿಎಸ್ ಬ್ರೇಕಿಂಗ್ ಅನ್ನು ಅಳವಡಿಸುವ ಯೋಜನೆಯಲಿದ್ದು, ಇದೇ ಅಕ್ಟೋಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದ

By Rahul Ts

ದೇಶಿಯ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ತಮ್ಮ ಜನಪ್ರಿಯ ಪಲ್ಸರ್ ಎನ್‍ಎಸ್ 160 ಬೈಕ್‍‍ಗೆ ಸಿಂಗಲ್ ಚಾನಲ್ ಎಬಿಎಸ್ ಬ್ರೇಕಿಂಗ್ ಅನ್ನು ಅಳವಡಿಸುವ ಯೋಜನೆಯಲಿದ್ದು, ಇದೇ ಅಕ್ಟೋಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್..

ಸಿಂಗಲ್ ಚಾನಲ್ ಎಬಿಎಸ್ ಅನ್ನು ಹೊರತು ಪಡಿಸಿ ತಾಂತ್ರಿಕತೆಯಲ್ಲಿ ಬದಲಾವಣೆಗಳನ್ನು ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್ ಪಡೆದಿರುವುದಿಲ್ಲ ಎನ್ನಲಾಗಿದ್ದು, ಸಂಸ್ಥೆಯು ಹೊಸದಾಗಿ ಡೇ ಟೈಮ್ ರನ್ನಿಂಗ್ ಎಲ್ಇಡಿ ಲೈಟ್ಸ್, ಗ್ರಾಫಿಕ್ಸ್ ಮತ್ತು ಹೊಸ ಪೆಯಿಂಟ್ ಸ್ಕೀಮ್ ಅನ್ನು ಪಡೆಯಲಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್..

ಪ್ರಸ್ಥುತ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 82,000 ಸಾವಿರಕ್ಕೆ ಮಾರಾಟವಾಗುತ್ತಿರುವ ಬಜಾಜ್ ಪಲ್ಸರ್ ಎನ್ಎಸ್160 ಬೈಕ್‍‍ಗಳು ಸಿಂಗಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಿದ ನಂತರ ಬೆಲೆಯಲ್ಲಿ ಸುಮಾರು ರೂ. 10,000 ಹೆಚ್ಚಿರಲಿದೆ ಎಂದು ಹೇಳಲಾಗುತ್ತಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್..

ಬಜಾಜ್ ಪಲ್ಸರ್ ಎನ್ಎಸ್160 ಎಬಿಎಸ್ ಬೈಕ್ 160ಸಿಸಿ, 4 ಸ್ಟ್ರೋಕ್ ಆಯಿಲ್ ಕೂಲ್ಡ್ ಎಂಜಿನ್‍‍ನೊಂದಿಗೆ ಬಜಾಜ್ ಸಂಸ್ಥೆಯ ಟ್ರಿಪಲ್ ಸ್ಪಾರ್ಕ್ ಪ್ಲಗ್ ಇಗ್ನಿಷನ್ ಟೆಕ್ನಾಲಜಿಯನ್ನು ಪಡೆದಿದೆ. ಇನ್ನು ಎಂಜಿನ್ 15.5 ಬಿಹೆಚ್‍‍ಪಿ ಮತ್ತು 14.6ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್..

ಎಂಜಿನ್ ಅನ್ನು 5ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮೊದಲೇ ಒಟ್ಟಾರೆಯಾಗಿ 142ಕಿಲೋಗ್ರಾಂ ತೂಕವನ್ನು ಪಡೆದಿದ್ದ ಪಲ್ಸರ್ ಎನ್ಎಸ್ 160 ಬೈಕ್, ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಿದ ನಂತರ ಇನ್ನು 2 ಅಥವಾ 3 ಕೆಜಿ ಹೆಚ್ಚಿರಲಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್..

ಕೇಂದ್ರ ಸರ್ಕಾರದ ಆದೇಶದಂತೆ ಏಪ್ರಿಲ್ 2019ರ ನಂತರ ಜಾರಿಯಾಗಲಿರುವ 125ಸಿಸಿ ಮೇಲ್ಪಟ್ಟ ಬೈಕ್‍‍ಗಳಲ್ಲಿ ಸಿಂಗಲ್ ಚಾನಲ್ ಎಬಿಎಸ್ ಅನ್ನು ನೀಡಲೇಬೇಕೆಂದು ಆದೇಶಿಸಿದ್ದು, ಮೋಟರ್‍‍ಸೈಕಲ್ ಸಂಸ್ಥೆಗಳು 150-160ಸಿಸಿ ಎಂಜಿನ್ ಸೆಗ್ಮೆಂಟ್‍‍ನಲ್ಲಿನ ಬೈಕ್‍‍ಗಳಿಗೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಅಳವಡಿಸುವ ಕಾರ್ಯದಲ್ಲಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್..

ಬೈಕ್‌ಗಳು ಮತ್ತು ಸ್ಕೂಟರ್‌ಗಳಲ್ಲಿ ಎಬಿಎಸ್ (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನವನ್ನು ಕಡ್ಡಾಯಗೊಳಿಸುವ ಮೂಲಕ ಅಪಘಾತಗಳ ಸಂಖ್ಯೆ ತಗ್ಗಿಸುವ ಉದ್ದೇಶ ಹೊಂದಿದ್ದು, ಇದು ಬೈಕ್ ಸವಾರರಿಗೂ ಕೂಡಾ ಸಹಕಾರಿಯಾಗಿರಲಿದೆ ಎನ್ನಲಾಗಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್..

ಎಬಿಎಸ್‌ನಿಂದ ಏನು ಲಾಭ?

ಹೌದು. ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಬಹುದಾದ ಸಹಜ ಪ್ರಶ್ನೆ. ಒಂದು ವೇಳೆ ಬೈಕ್‌ಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿದ ಸಾಧಿಸಬಹುದಾಗಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್..

ಎಬಿಎಸ್ ತಂತ್ರಜ್ಞಾನವು ಸವಾರಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡಲಿದ್ದು, ಹೊಸ ನಿಮಯದಿಂದ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕೂಡಾ ತಡೆಯಬಹುದಾಗಿದೆ.

ಹೊಸ ಸೇಫ್ಟಿ ಫೀಚರ್ಸ್ ಪಡೆಯಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್..

ಹೊಸ ಸುರಕ್ಷಾ ವೈಶಿಷ್ಟ್ಯತೆಯನ್ನು ಹೊತ್ತು ಮಾರುಕಟ್ಟೆಗೆ ಕಾಲಿಡಲಿರುವ ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್‍‍ಗಳು ಮಾರುಕಟ್ಟೆಯಲ್ಲಿನ ಸುಜುಕಿ ಜಿಕ್ಸರ್ 160, ಯಮಹಾ ಎಫ್‍ಜೆಡ್-ಎಸ್, ಟಿವಿಎಸ್ ಅಪಾಚೆ ಆರ್‍‍‍ಟಿಆರ್160 ಮತ್ತು ಹೋಂಡಾ ಹಾರ್ನೆಟ್ ಸಿಬಿ160ಆರ್ ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Monday, July 30, 2018, 14:41 [IST]
English summary
Bajaj Pulsar NS 160 with ABS.
Read more on bajaj auto pulsar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+