ಆಕರ್ಷಕ ಬಣ್ಣ ಪಡೆದ ಬಿಎಮ್‍ಡಬ್ಲ್ಯೂ ಜಿ 310ಆರ್ ಬೈಕ್..
ಬಿಎಮ್‍ಡಬ್ಲ್ಯೂ ಮೋಟರ್ರಾಡ್ ಈಗಾಗಲೆ ತನ್ನ ಜಿ 310ಆರ್ ಮತ್ತು ಜಿ 310ಜಿಎಸ್ ಬೈಕ್‍ಗಳನ್ನು ಇದೇ ತಿಂಗಳ 18ರಂದು ಬಿಡುಗಡೆಗೊಳಿಸಲಿದ್ದು, ಇದೀಗ ಜರ್ಮನ್ ಮೋಟಾರ್‍ಸೈಕಲ್ ಸಂಸ್ಥೆಯು ತಮ್ಮ ಜಿ 310ಆರ್ ಬೈಕ್‍ಗೆ ಹೊಸ ಬಣ್ಣವನ್ನು ನೀಡಿದೆ.
ಬಿಎಮ್‍ಡಬ್ಲ್ಯೂ ಮೋಟರ್ರಾಡ್ ಈಗಾಗಲೆ ತನ್ನ ಜಿ 310ಆರ್ ಮತ್ತು ಜಿ 310ಜಿಎಸ್ ಬೈಕ್‍ಗಳನ್ನು ಇದೇ ತಿಂಗಳ 18ರಂದು ಬಿಡುಗಡೆಗೊಳಿಸಲಿದ್ದು, ಇದೀಗ ಜರ್ಮನ್ ಮೋಟಾರ್‍ಸೈಕಲ್ ಸಂಸ್ಥೆಯು ತಮ್ಮ ಜಿ 310ಆರ್ ಬೈಕ್‍ಗೆ ಹೊಸ ಬಣ್ಣವನ್ನು ನೀಡಿದೆ. ಹೊಸ ಪೆಯಿಂಟ್ ಸ್ಕೀಮ್ ಅನ್ನು ಹೊರತು ಪಡಿಸಿ ಇನ್ನಿತರೆ ವೈಶಿಷ್ಟ್ಯತೆಗಳು ಬೇರಾವ ಬದಲಾವಣೆಗಳನ್ನು ಪಡೆದಿರುವುದಿಲ್ಲ.

ಹೊಸದಾಗಿ ಬಿಡುಗಡೆಗೊಳ್ಳುವ ಬಿಎಮ್‍ಡಬ್ಲ್ಯೂ ಜಿ 310ಆರ್ ಬೈ ವಿನೂತನ ರೇಸಿಂಗ್ ರೆಡ್ ಬಣ್ಣವನ್ನು ಪಡೆಯಲಿದ್ದು, ಇದು ಟಿವಿಎಸ್ ಅಪಾಚೆ ಆರ್‍ಆರ್310 ಬೈಕ್ ಅನ್ನು ಹೋಲುತ್ತದೆ. ಕೆಂಪು ಬಣ್ಣದ ಪೆಯಿಂಟ್ ಸ್ಕೀಮ್ ಅಲ್ಲದೆ ಈ ಬೈಕ್ ಇನ್ನೂ ಬಿಳಿ ಬಣ್ಣದಿಂದ ಹೆಚ್‍ಪಿ ಲ್ಯಾಟರ್ ಅನ್ನು ಪಡೆದ ಹೆಚ್‍ಪಿ ಮೋಟಾರ್ಸ್ಪೋರ್ಟ್ ಬಣ್ಣದ ಆಯ್ಕೆಯಲ್ಲಿಯೂ ಲಭ್ಯವಿದೆ.

ಬಿಎಮ್‍ಡಬ್ಲ್ಯೂ ಸಂಸ್ಥೆಯು ಸ್ಟ್ರಾಟೊ ಬ್ಲೂ ಮೆಟಾಲಿಕ್ ಬಣ್ಣವನ್ನು ತಮ್ಮ ಕಲೆಕ್ಷನ್‍ಣಿಂದ ತೊಲಗಿಸಿ ಆ ಜಾಗದಲ್ಲಿ ಕಾಸ್ಮಿಕ್ ಬ್ಲಾಕ್ ಬಣ್ಣವನ್ನು ಸ್ಥಳಾಂತರಿಸಿದೆ.

ಬಿಎಮ್‍ಡಬ್ಲ್ಯೂ ಮೋಟರ್ರಾಡ್ ಸಂಸ್ಥೆಯು ತಮ್ಮ ಜಿ 310ಆರ್ ಮತ್ತು ಜಿ 310ಜಿಎಸ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದ್ದು, ಈ ಬೈಕ್‍ಗಳನ್ನು ಹೊಸ ಬಣ್ಣದಲ್ಲಿ ಪರಿಚಯಿಸಲಿದೆ ಎಂಬ ಸುದ್ದಿ ತಿಳಿದುಬಂದಿದೆ.

ಮಾರುಕಟ್ಟೆಗೆ ಲಗ್ಗೆಯಿಡಲಿರುವ ಬಿಎಮ್‍ಡಬ್ಲ್ಯೂ ಜಿ 310ಆರ್ ಮತ್ತು ಜಿ 310ಜಿಎಸ್ ಹೊಸ ಬಣ್ಣವನ್ನು ಹೊರತು ಪಡಿಸಿ ವಿನ್ಯಾಸ, ವೈಶಿಷ್ಟ್ಯತೆ ಮತ್ತು ತಾಂತ್ರಿಕತೆಯಲ್ಲಿ ಬೇರಾವ ಬದಲಾವಣೆಗಳಾನ್ನು ಪಡೆದಿರುವುದಿಲ್ಲ.

ಬಿಎಮ್‍ಡಬ್ಲ್ಯೂ ಜಿ 310 ಆರ್ ಮೋಟರ್‍ಸೈಕಲ್ ಬಿಎಮ್‍ಡಬ್ಲ್ಯೂ ಸಂಸ್ಥೆಯ ಸ್ಥಿರವಾದ ಕೈಗೆಟುಕುವ ಬೈಕ್ ಆಗಿದೆ. ಜಿ 310ಆರ್ ಬೈಕ್ ಅನ್ನು ಬಿಎಮ್‍ಡಬ್ಲ್ಯೂ ಮೋಟರ್ರಾಡ್ ಸಂಸ್ಥೆಯು ಬೆಂಗಳೂರಿನ ಸಮೀಪದಲ್ಲಿರುವ ಹೊಸೂರಿನ ಟಿವಿಎಸ್ ಮೋಟಾರ್ ಕಂಪೆನಿಯ ಪ್ಲಾಂಟ್‍ನಲ್ಲಿ ಉತ್ಪಾದಿಸಲಾಗುತ್ತಿದೆ.

ಬಿಎಮ್‍ಡಬ್ಲ್ಯೂ ಮೋಟರ್ರಾಡ್ ಸಂಸ್ಥೆಯು ಜಿ 310 ಆರ್ ಬೈಕ್ ಮರ್ರು ಜಿ 310ಜಿಎಸ್ ಬೈಕ್‍ಗಳ ಬಿಡುಗಡೆಗು ಮುನ್ನವೆ ತಮ್ಮ ಡೀಲರ್‍ಶಿಪ್‍ಗಳನ್ನು ಬಲಗೊಳಿಸುವ ಯೋಜನೆಯಲಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯು ಈ ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಲು ತಡಮಾಡಿದೆ ಎನ್ನಲಾಗಿದೆ.

ಎಂಜಿನ್ ಸಾಮರ್ಥ್ಯ
ಬಿಎಮ್‍ಡಬ್ಲ್ಯೂ ಜಿ 310ಜಿಎಸ್ ಬೈಕ್ 313ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 33.5 ಬಿಹೆಚ್‍ಪಿ ಮತ್ತು 28ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಹೊಸ ಬಿಎಮ್‍ಡಬ್ಲ್ಯೂ ಜಿ 310 ಆರ್ ಬೈಕ್ ಸಂಸ್ಥೆಯ ಎಂಟ್ರೊ ಲೆವೆಲ್ ಬೈಕ್ ಆಗಿರಲಿದ್ದು, ಇದರ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 3.50 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆಯಲಿದ್ದು, ಮಾರುಕಟ್ಟೆಯಲ್ಲಿ ಕೆಟಿಎಮ್ ಡ್ಯುಕ್ 390 ಬತ್ತು ಬಜಾಜ್ ಡಾಮಿನಾರ್ 400 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








