ಬಿಡುಗಡೆಗೊಂಡ ಡುಕಾಟಿ ಮಾನ್ಸ್ಟರ್ 797+ ಬೈಕ್.. ಬೆಲೆ ಎಷ್ಟು ಗೊತ್ತಾ.??
ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಹೊಸ ಮಾನ್ಸ್ಟರ್ 797+ ಬೈಕ್ ಅನ್ನು ಬಿಡುಡಗಡೆಗೊಳಿಸಿದ್ದು, ಇದು ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಡುಕಾಟಿ ಮಾನ್ಸ್ಟರ್ 797 ಸ್ಟ್ಯಾಂಡರ್ಡ್ ಬೈಕಿನ ಮುಂದುವರಿದ ಭಾಗವಾಗಿದೆ.
ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಹೊಸ ಮಾನ್ಸ್ಟರ್ 797+ ಬೈಕ್ ಅನ್ನು ಬಿಡುಡಗಡೆಗೊಳಿಸಿದ್ದು, ಇದು ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಡುಕಾಟಿ ಮಾನ್ಸ್ಟರ್ 797 ಸ್ಟ್ಯಾಂಡರ್ಡ್ ಬೈಕಿನ ಮುಂದುವರಿದ ಭಾಗವಾಗಿದೆ. ಡುಕಾಟಿ ಮಾನ್ಸ್ಟರ್ 797+ ಬೈಕಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 8.03 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಡುಕಾಟಿ ಮಾನ್ಸ್ಟರ್ 797+ ಬೈಕ್ ಮಾನ್ಸ್ಟರ್ 797 ಬೈಕಿನ ಮುಂದಿವರಿದ ಬೈಕ್ ಆಗಿದ್ದು, ಇದರಲ್ಲಿ ಹೊಸದಾಗಿ ಫ್ರಂಟ್ ಡಿಸೈನ್ ಮತ್ತು ಪ್ಯಾಸ್ಸೆಂಜರ್ ಸೀಟ್ ಕವರ್ ಅನ್ನು ಮರು ವಿನ್ಯಾಸಗೊಳಿಸಲಾಗಿದೆ. ಈ ಎರಡು ಬದಲಾವಣೆಗಳು ಬೈಕಿನ ಬಣ್ಣಕ್ಕೆ ಸರಿ ತೂಗುವಂತೆ ವಿನ್ಯಾಸಗೊಳಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಡುಕಾಟಿ ಮಾನ್ಸ್ಟರ್ 797+ ಬೈಕ್ 803ಸಿಸಿ, ಎಲ್-ಟ್ವಿನ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 72ಬಿಹೆಚ್‍ಪಿ ಮತ್ತು 67ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಹಾಗೆಯೆ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾನ್ಸ್ಟರ್ 797 ಮತ್ತು ಮಾನ್ಸ್ಟರ್ 797+ ಬೈಕ್ ಮಾಡಲ್‍ಗಳಲ್ಲಿ, ಅಪ್‍ಸೈಡ್ ಡೌನ್ ಫ್ರಂಟ್ ಫೋರ್ಕ್ಸ್, ಎಬಿಎಸ್, ಪಿರೆಲ್ಲಿ ಟೈರ್ಸ್, ಫ್ರಂಟ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗು ಮೊನೊಶಾಕ್ ರಿಯರ್ ಸಸ್ಪೆಂಷನ್ ಅನ್ನು ಅಳವಡಿಸಲಾಗಿದೆ.

ಮಾನ್ಸ್ಟರ್ 797+ ಬೈಕ್ ಅನ್ನು ಬಿಡುಗಡೆಗೊಳಿಸುವುದಲ್ಲದೆ ಸಂಸ್ಥೆಯು ತಮ್ಮ ಮಾನ್ಸ್ಟರ್ 821 ಬೈಕ್ ಅನ್ನು ಕೂಡ ಡೆಲಿವರಿಯ ಕಾರ್ಯವನ್ನು ಶುರು ಮಾಡಿರುವುದಾಗಿ ಹೇಳಿದ್ದು, ಡುಕಾಟಿ ಮಾನ್ಸ್ಟರ್ 821 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.51 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

'ನಾವು ಸ್ಪೋರ್ಟಿ ಮತ್ತು ಸಮಕಾಲಿನ ಬೈಕ್‍ಗಳಿಂದ ನಮ್ಮ ಗ್ರಾಹಕರಿಗೆ ದಶಕಗಳಿಂದ ಪ್ರತೀ ಬಾರಿ ಹೊಸ ಅನುಭವವನ್ನು ನೀಡುತ್ತಿದ್ದೇವೆ. ಹಾಗು ಮಾಸ್ಟರ್ ಲೈನ್‍ಅಪ್ ಬೈಕ್‍ಗಳು ಡುಕಾಟಿ ಸಂಸ್ಥೆಯ ಹೆಚ್ಚು ಮಾರಾಟವಾಗುತ್ತಿರುವ ಬೈಕ್ ಆಗಿದ್ದು ಇನ್ನಿತರೆ ಮಾನ್ಸ್ಟರ್ ಬೈಕ್‍ಗಳಿಗೆ ಆಸಕ್ತಿ ತೋರಿಸಿದ ಹಾಗೆಯೆ 797+ ಮತ್ತು 821 ಬೈಕ್‍ಗಳಿಗು ಕೂಡ ಗ್ರಾಹಕರು ಆಸಕಿ ನೀಡುತ್ತರೆ ಎಂಬ ಭರವಸೆ ಇದೆ' ಎಂದು ಡುಕಾಟಿ ಇಂಡಿಯಾ ವ್ಯವಸ್ಥಾಪಕ ನಿರ್ಧೇಶಕರಾದ ಸೆರ್ಗಿ ಕ್ಯಾನೊವಾಸ್ ಗ್ಯಾರಿಗ್ಗಾ ಹೇಳಿಕೊಂಡಿದ್ದಾರೆ.

ಡುಕಾಟಿ ತನ್ನ ಲೈನ್ಅಪ್‍ನಲ್ಲಿನ ಎಲ್ಲಾ ಬೈಕ್‍ಗಳನ್ನು ಕಂಪ್ಲೀಟ್ಲಿ ನೇಕ್ಡ್ ಡೌನ್ ಮಾರ್ಗವಾಗಿ ಭಾರತಕ್ಕೆ ಆಮದು ಮಾಡುಕೊಳ್ಳುತ್ತಿದ್ದು, ಮಾನ್ಸ್ಟರ್ ಬೈಕ್‍ಗಳು 797, 797+, 821 ಹಾಗು 1100 ಎಂಬ ವರ್ಷನ್‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಡುಕಾಟಿ ಮಾನ್ಸ್ಟರ್ 797+ ಮತ್ತು 821 ಬೈಕ್‍ಗಳು ಈಗಾಗಲೆ ಭಾರತದಲ್ಲಿನ ಡೀಲರ್‍ಗಳ ಬಳಿ ಖರೀದಿಗೆ ಲಭ್ಯವಿದೆ ಎನ್ನಲಾಗಿದೆ.

ಮಾನ್ಸ್ಟರ್ ಮಾಡಲ್‍ಗಳ 25ನೆಯ ವಾರ್ಷಿಕೋತ್ಸವವನ್ನು ಸಂಭ್ರಮಿಸಲು ಸಂಸ್ಥೆಯು ತಮ್ಮ ಮಾನ್ಸ್ಟರ್ 797+ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿ ಕವಾಸಕಿ ಜೆಡ್900 ಮತ್ತು ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಬೈಕ್‍ಗಳಿಗೆ ಪೈಪೋಟಿ ನೀಡಲಿವೆ.


Click it and Unblock the Notifications