ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಡುಕಾಟಿ 959 ಪ್ಯಾನಿಗಲ್ ಕೊರ್ಸ್ ಬೈಕ್

ಇಟಲಿ ಮೂಲದ ಸೂಪರ್‍‍‍ಬೈಕ್ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಹೊಸ 959 ಪ್ಯಾನಿಗಲ್ ಕೊರ್ಸ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಹೊಸದಾಗಿ ಬಿಡಿಗಡೆಗೊಂಡ ಈ ಬೈಕಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 15.20 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಡುಕಾಟಿ 959 ಪ್ಯಾನಿಗಲ್ ಕೊರ್ಸ್ ಬೈಕ್

ಡುಕಾಟಿ 959 ಪ್ಯಾನಿಗಲ್ ಕೊರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಸ್ಪೆಷಲ್ ಮಾಡಲ್ ಮಾದರಿಗಳಲ್ಲಿ ಬಿಡಗಡೆಗೊಂಡಿದ್ದು, ಡುಕಾಟಿ ಸಂಸ್ಥೆಯ ಮೋಟೋಜಿಪಿ ಬಣ್ಣಗಳಿಂದ ಪ್ರೇರೇಪಿಸಲಾಗಿದೆ. ಹೊಸ ಬಣ್ಣದ ಆಯ್ಕೆಯೊಂದಿಗೆ ಈ ಬೈಕ್ ಆಕ್ರಮಣಕಾರಿ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಡುಕಾಟಿ 959 ಪ್ಯಾನಿಗಲ್ ಕೊರ್ಸ್ ಬೈಕ್

ಬಿಡುಗಡೆಗೊಂಡ ಡುಕಾಟಿ 959 ಪ್ಯಾನಿಗಲ್ ಕೊರ್ಸ್ ಬೈಕ್ 955ಸಿಸಿ ಸೂಪರ್‍‍ಕ್ವಾಡ್ರೊ ಎಂಜಿನ್ ಸಹಾಯದೊಂದಿಗೆ 157ಬಿಹೆಚ್‍ಪಿ ಮತ್ತು 107.4ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಟಾಪ್-ಆಫ್-ದಿ-ಲೈನ್ ಎಬ ಟೆಕ್ನಿಕಲ್ ಪ್ಯಾಕೇಜ್ ಅನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಡುಕಾಟಿ 959 ಪ್ಯಾನಿಗಲ್ ಕೊರ್ಸ್ ಬೈಕ್

ಡುಕಾಟಿಕ್ 959 ಪ್ಯಾನಿಗಲ್ ಕೊರ್ಸ್ ಸೂಪರ್ ಬೈಕ್‍‍ನಲ್ಲಿ ಬಾಷ್‍‍ನಿಂದ ಪಡೆದ ಡ್ಯುಯಲ್ ಚಾನಲ್ ಎಬಿಎಸ್, ಡುಕಾಟಿ ಟ್ರ್ಯಾಕ್ಷನ್ ಕಂಟ್ರೋಲ್, ಡುಕಾಟಿ ಕ್ವಿಕ್ ಶಿಫ್ಟ್, ಎಂಜಿನ್ ಬ್ರೇಕ್ ಕಂಟ್ರೋಲ್ ಮತ್ತು ರೈಡ್ ಬೈ ವೈರ್ ಎಂಬ ಆಧೂನಿಕ ಎಲೆಕ್ಟ್ರಾನಿಕ್ ಪ್ಯಾಕೇಜ್‍‍ಗಳನ್ನು ಅಳವಡಿಸಲಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಡುಕಾಟಿ 959 ಪ್ಯಾನಿಗಲ್ ಕೊರ್ಸ್ ಬೈಕ್

ಹೊಸದಾಗಿ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಲ್ ಕೊರ್ಸ್ ರೇಸ್, ಸ್ಪೋರ್ಟ್ ಮತ್ತು ವೆಟ್ ಎಂಬ ಮೂರು ವಿಶೇಷವಾದ ಡ್ರೈವಿಂಗ್ ಮೋಡ್‍‍ಗಳನ್ನು ಅಳವಡಿಸಲಾಗಿದ್ದು, ಪ್ರತಿ ಒಂದು ರೈಡಿಂಗ್ ಮೋಡ್ ಅನ್ನು ಚಾಲಕನು ನೀಡಿರುವ ಎಲೆಕ್ಟ್ರಾನಿಕ್ ಸೆಟ್ಟಿಂಗ್‍‍ಗಳಿಂದ ಬಳಸಿಕೊಳ್ಳಬಹುದಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಡುಕಾಟಿ 959 ಪ್ಯಾನಿಗಲ್ ಕೊರ್ಸ್ ಬೈಕ್

ಆದರೆ ಭಾರತಕ್ಕೆ ಬರಲಿರುವ ಡಿಕಾಟಿ ಪ್ಯಾನಿಗಲ್ 959 ಕೊರ್ಸ್ ಬೈಕ್ ಮಾಡಲ್ ಒಹ್ಲಿನ್ಸ್ ಸಸ್ಪಂಷನ್, ಲೀಥಿಯಂ ಬ್ಯಾಟರಿ, ಒಹ್ಲಿನ್ಸ್ ಸ್ಟೀರಿಂಗ್ ಡ್ಯಾಂಪರ್ ಮತ್ತು ಅಕ್ರಪೊವಿಕ್ ಡುಕಾಟಿ ಪರ್ಫಾರ್ಮೆನ್ಸ್ ಟೈಟಾನಿಯಮ್ ಸೈಲೆಂಸರ್‍‍ಗಳನ್ನು ಪಡೆದುಕೊಂಡಿರುವುದಿಲ್ಲ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಡುಕಾಟಿ 959 ಪ್ಯಾನಿಗಲ್ ಕೊರ್ಸ್ ಬೈಕ್

ಡುಕಾಟಿ 959 ಪ್ಯಾನಿಗಲ್ ಕೊರ್ಸ್ ಬೈಕ್ ಅನು ಖರೀದಿಸಲು ಬಯಸುವ ಗ್ರಾಹಕರು ದೆಹಲಿ, ಪುಣೆ, ಅಹ್ಮದಾಬಾದ್, ಬೆಂಗಳೂರು, ಕೊಚಿ, ಕೊಲ್ಕತ್ತಾ ಮತ್ತು ಚೆನ್ನೈ ನಗರಗಳಲ್ಲಿನ ಅಧಿಕೃತ ಡೀಲರ್‍‍‍ಗಳ ಬಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಡುಕಾಟಿ 959 ಪ್ಯಾನಿಗಲ್ ಕೊರ್ಸ್ ಬೈಕ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಡುಕಾಟಿ ಸಂಸ್ಥೆಯು ತಮ್ಮ ಹೊಸ ಸ್ಪೆಷಲ್ ಎಡಿಷನ್ 959 ಪ್ಯಾನಿಗಲ್ ಕೊರ್ಸ್ ಸೂಪರ್‍‍ಬೈಕ್ ಅನ್ನು ಬಿಡುಗಡೆಗೊಳಿಸಿರುವ ಈ ಬೈಕ್ ಡುಕಾತಿ ಮೋಟೋಜಿಪಿ ಟೀಮ್‍‍ನಿಂದ ಪ್ರೇರೇಪಿಸಲ್ಪಟ್ಟಿದೆ. ಸ್ಟ್ಯಾಂಡರ್ಡ್ ಮಾಡಲ್‍‍ನೆಂತೆಯೆ ಎಂಜಿನ್ ಪಡೆದಿರುವ ಈ ಬೈಕ್, ಆದರೆ ಭಾರತ-ಸ್ಪೆಕ್ ಮಾದರಿಯು ಕೆಲವು ಉನ್ನತ-ಮಟ್ಟದ ಸಾಧನಗಳನ್ನು ಬೆಲೆಗೆ ತಕ್ಕಂತೆ ಇರಿಸಿಕೊಳ್ಳಲು ಸಾಧ್ಯವಿಲ್ಲ.

More from DriveSpark

Article Published On: Wednesday, September 26, 2018, 10:56 [IST]
English summary
Ducati 959 Panigale Corse Launched In India; Priced At Rs 15.20 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+