ಡುಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಬಿಡುಗಡೆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಟೂರಿಂಗ್ ಹಾಗು ಅಡ್ವೆಂಚರ್ ಬೈಕ್‍‍ಗಳಲ್ಲಿ ಪರ್ಫಾರ್ಮೆನ್ಸ್ ಅನ್ನು ಅಭಿವೃದ್ಧಿಗೊಳಿಸುವ ಯೋಜನೆಯಲಿದೆ.

By Rahul Ts

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಟೂರಿಂಗ್ ಹಾಗು ಅಡ್ವೆಂಚರ್ ಬೈಕ್‍‍ಗಳಲ್ಲಿ ಪರ್ಫಾರ್ಮೆನ್ಸ್ ಅನ್ನು ಅಭಿವೃದ್ಧಿಗೊಳಿಸುವ ಯೋಜನೆಯಲಿದ್ದು, ಸಂಸ್ಥೆಯು ಜೂನ್ 19‍ರಂದು ತಮ್ಮ 2018ರ ಮಲ್ಟಿಸ್ಟ್ರಾಡ 1260 ಮತ್ತು ಮಲ್ಟಿಸ್ಟ್ರಾಡ 1260 ಎಸ್ ಬೈಕ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಡುಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಬಿಡುಗಡೆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಬಿಡುಗಡೆಗೊಳ್ಳಲಿರುವ ಈ ಬೈಕ್‍‍ಗಳಲ್ಲಿ ಸಂಸ್ಥೆಯ 1,262ಸಿಸಿ ಟೆಸ್ಟಸ್ಟ್ರೆಟ ಡಿವಿಟಿ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಇವು 158ಬಿಹೆಚ್‍‍ಪಿ ಮತ್ತು 129.5 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಅಂದರೆ ಪ್ರಸ್ಥುತ ಲಭ್ಯವಿರುವ ಡುಕಾಟಿ ಮಲ್ಟಿಸ್ಟ್ರಾಡ 1200 ಸರಣಿಯ ಬೈಕ್‍‍ಗಳಿಗಿಂತ 8 ಬಿಹೆಚ್‍ಪಿ ಮತ್ತು 1.5 ಎನ್ಎಮ್ ಟಾರ್ಕ್ ಅನ್ನು ಹೆಚ್ಚಗಿ ಉತ್ಪಾದಿಸಬಲ್ಲದು.

ಡುಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಬಿಡುಗಡೆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಡುಕಾಟಿ ಮಲ್ಟಿಸ್ಟ್ರಾಡ ಬೈಕ್‍‍ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡುಕಾಟಿ ಟ್ರ್ಯಾಕ್ಷನ್ ಕಂಟ್ರೋಲ್, ಕಾರ್ನೆರಿಂಗ್ ಎಬಿಎಸ್, ಡುಕಾಟಿ ವ್ಹೀಲಿ ಕಂಟ್ರೋಲ್, ಡುಕಾಟಿ ಕ್ರೂಸ್ ಕಂಟ್ರೋಲ್, ವೆಹಿಕಲ್ ಹೋಲ್ಡ್ ಕಂಟ್ರೋಲ್ ಹಾಗು ಇನ್ನಿತರೆ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದೆ.

ಡುಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಬಿಡುಗಡೆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಇದಲ್ಲದೆ ಈ ಮಲ್ಟಿಸ್ಟ್ರಾಡ 1260 ಎಸ್ ಬೈಕ್‍‍ನಲ್ಲಿ ಕ್ವಿಕ್‍ಶಿಫ್ಟರ್, ಸ್ಪೋರ್ಟಿಯರ್ ಸಸ್ಪೆಂಷನ್, ವಿದ್ಯುತ್‍‍ನಿಂದ ನಿಯಂತ್ರಿಸಬಹುದಾದ ಸ್ಕೈ‍ಹೂಕ್ ಸಸ್ಪೆಂಷನ್ ಸಿಸ್ಟಮ್, ಡುಕಾಟಿ ಮಲ್ಟಿಮೀಡಿಯ ಸಿಸ್ಟಮ್, ಕಾರ್ನೆರಿಂಗ್ ಲೈಟ್ಸ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಡುಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಬಿಡುಗಡೆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

2018ರ ಡುಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಈಗಾಗಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಲ್ಟಿಸ್ಟ್ರಾಡ 1260, ಮಲ್ಟಿಸ್ಟ್ರಾಡ 1260 ಎಸ್, ಮಲ್ಟಿಸ್ಟ್ರಾಡ ಎಸ್ ಡಿ-ಏರ್ ಹಾಗು ಮಲ್ಟಿಸ್ಟ್ರಾಡ 1260 ಪೈಕ್ಸ್ ಪೀಕ್ ಎಂಬ ನಾಲ್ಕು ವೇರಿಯಂಟ್‍‍ಗಳಲ್ಲಿ ಮಾರಾಟಗೊಳ್ಳುತ್ತಿದೆ.

ಡುಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಬಿಡುಗಡೆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಮಲ್ಟಿಸ್ಟ್ರಾಡ ಎಸ್ ಡಿ-ಏರ್ ಬೈಕ್ ಮೋಟಾರ್‍‍ಸೈಕಲ್ ಹಾಗು ಡೈನಿಸ್ ಡಿ-ಏರ್‍‍‍ಬ್ಯಾಗ್ ರೈಡಿಂಗ್ ಜಾಕೆಟ್ ನಡುವೆ ತಡೆರಹಿತ ಏಕೀಕರಣವನ್ನು ಹೊಂದಿದ್ದು, ವಿಶೇಷವೇನೆಂದರೆ ಈ ಬೈಕ್ ಡೈನೀಸ್ ಏರ್‍ ಜ್ಯಾಕೆಟ್ ಸಹಾಯದಿಂದ 45 ಮಿಲಿ ಸೆಕೆಂಡಿನಲ್ಲಿ ಅಪಘಾತವನ್ನು ತಡೆಯುವ ಸಾಮರ್ಥ್ಯವನ್ನು ಪಡೆದಿದೆ. ಆದರೆ ಈ ಏರ್‍‍ಬ್ಯಾಗ್ ಜಾಕೆಟ್‍ ಅನ್ನು ಭಾರತಕ್ಕೆ ಪರಿಚಯಿಸುವ ಮಾಹಿತಿ ಇನ್ನು ಸಿಗಲಿಲ್ಲ.

ಡುಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಬಿಡುಗಡೆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಇನ್ನು ಮಲ್ಟಿಸ್ಟ್ರಾಡ 1260 ಪೈಕ್ಸ್ ಪೀಕ್ 1260ಎಸ್ ಬೈಕಿನ ಒಂದು ಸ್ಪೋರ್ಟಿಯರ್ ವೇರಿಯಂಟ್ ಆಗಿದ್ದು, ಇದರಲ್ಲಿ ವಿಶೇಷವಾಗಿ ಫೋರ್ಜ್ಡ್ ಅಲ್ಯೂಮಿನಿಯಮ್ ವ್ಹೀಲ್ಸ್, ಒಹ್ಲಿನ್ಸ್ ಸಸ್ಪೆಂಷನ್ ಸಿಸ್ಟಮ್, ಕಾರ್ಬನ್ ಫೈಬರ್ ಎಕ್ಸಾಸ್ಟ್ ಸಿಸ್ಟಮ್, ಕಾರ್ಬನ್ ಫೈಬರ್ ಸ್ಕ್ರೀನ್, ರೇಸ್ ಥೀಮ್ಡ್ ಪೇಯಿಂಟ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಡುಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಬಿಡುಗಡೆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಮಲ್ಟಿಸ್ಟ್ರಾಡ ಬೈಕ್‍‍ಗಳು ಥಾಯ್‍‍ಲ್ಯಾಂಡ್‍‍ನಲ್ಲಿ ತಯಾರಿಸಲಾಗುತಿದ್ದು, ಭಾರತಕ್ಕೆ ಕಂಪ್ಲೀಟ್ಲಿ ಬ್ಯುಲ್ಟ್ ಯೂನಿಟ್ ಮುಖಾಂತರ ಬರಲಿದೆ. ಇನ್ನು ಮಲ್ಟಿಸ್ಟ್ರಾಡ 1260 ಬೈಕ್ ರೂ. 16 ಲಕ್ಷ ಮತ್ತು ಮಲ್ಟಿಸ್ಟ್ರಾಡ 1260 ಎಸ್ ಬೈಕ್ ರೂ. 19 ಲಕ್ಷದ ಪ್ರಾರಂಭಿಕ ಬೆಲಯನ್ನು ಪಡೆದಿರಲಿದೆ.

ಡುಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಬಿಡುಗಡೆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಹೊಸದಾಗಿ ಬಿಡುಗಡೆಗೊಳ್ಳಲಿರುವ ಡುಕಾಟಿ ಮಲ್ಟ್ರಿಸ್ಟ್ರಾಡ 1260 ಮತ್ತು ಮಲ್ಟ್ರಿಸ್ಟ್ರಾಡ 1260 ಟೂರಿಂಗ್ ಮೋಟಾರ್‍‍ಸೈಕಲ್‍‍ಗಳು ಟ್ರಯಂಫ್ ಟೈಗರ್ 1200 ಹಾಗು ಬಿಎಮ್‍ಡಬ್ಲ್ಯೂ ಆರ್ 1200 ಜಿಎಸ್ ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Thursday, June 14, 2018, 17:47 [IST]
English summary
Ducati Multistrada 1260 Launch Details Revealed.
Read more on ducati new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+