ಡುಕಾಟಿ ಮಲ್ಟಿಸ್ಟ್ರಾಡಾ 1260 ಪೈಕ್ಸ್ ಪೀಕ್ ಭಾರತದಲ್ಲಿ ಬಿಡುಗಡೆ
ಭಾರತದಲ್ಲಿ ಕಳೆದ ವಾರವಷ್ಟೇ ಮಲ್ಟಿಸ್ಟ್ರಾಡಾ 1260 ಸ್ಟ್ಯಾಂಡರ್ಡ್ ಆವೃತ್ತಿಗಳನ್ನು ಇಟಲಿ ಮೂಲದ ಜನಪ್ರಿಯ ವಾಹನ ಉತ್ಪಾದನಾ ಸಂಸ್ಥೆಯಾದ ಡುಕಾಟಿಯು ಇದೀಗ ಮಲ್ಟಿಸ್ಟ್ರಾಡಾ 1260 ಪೈಕ್ಸ್ ಪೀಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಭಾರತದಲ್ಲಿ ಕಳೆದ ವಾರವಷ್ಟೇ ಮಲ್ಟಿಸ್ಟ್ರಾಡಾ 1260 ಸ್ಟ್ಯಾಂಡರ್ಡ್ ಆವೃತ್ತಿಗಳನ್ನು ಇಟಲಿ ಮೂಲದ ಜನಪ್ರಿಯ ವಾಹನ ಉತ್ಪಾದನಾ ಸಂಸ್ಥೆಯಾದ ಡುಕಾಟಿಯು ಇದೀಗ ಮಲ್ಟಿಸ್ಟ್ರಾಡಾ 1260 ಪೈಕ್ಸ್ ಪೀಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಆದ್ರೆ ಹೊಚ್ಚ ಹೊಸ ಮಲ್ಟಿಸ್ಟ್ರಾಡಾ 1260 ಪೈಕ್ಸ್ ಪೀಕ್ ಬೈಕ್‌ಗಳು ಭಾರತದಲ್ಲಿ ಎಷ್ಟು ಯುನಿಟ್‌ಗಳು ಮಾರಾಟಕ್ಕಿವೆ ಎಂಬ ಮಾಹಿತಿಯನ್ನು ಬಿಟ್ಟಿಕೊಟ್ಟಿಲ್ಲವಾದರೂ ವರದಿಗಳ ಪ್ರಕಾರ ಮುಂಬರುವ ಜುಲೈ ಮಧ್ಯಂತರದಿಂದ ಹೊಸ ಬೈಕ್ ವಿತರಣೆ ಆರಂಭವಾಗಲಿದೆ.

ಸದ್ಯ ಮಲ್ಟಿಸ್ಟ್ರಾಡಾ 1260 ಪೈಕ್ಸ್ ಪೀಕ್ ಬೈಕ್‌ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಮಲ್ಟಿಸ್ಟ್ರಾಡಾ 1260 ಸ್ಟ್ಯಾಂಡರ್ಡ್ ಆವೃತ್ತಿಗಳಂತೆ ಇದು ಒಂದೇ ರೀತಿಯಾದ ಎಂಜಿನ್ ಸೌಲಭ್ಯ ಹೊಂದಿದೆ.

ಎಂಜಿನ್ ಸಾಮರ್ಥ್ಯ
1,262ಸಿಸಿ ಎಲ್ ಟ್ವಿನ್ ಡಿವಿಟಿ ಟೆಸ್ಟಾಸ್ಟ್ರೆಟಾ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 158-ಬಿಎಚ್‌ಪಿ ಮತ್ತು 129.5-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಇನ್ನೊಂದು ವಿಶೇಷ ಅಂದ್ರೆ, ಮಲ್ಟಿಸ್ಟ್ರಾಡಾ 1260 ಪೈಕ್ಸ್ ಪೀಕ್ ಬೈಕ್‌ಗಳಲ್ಲಿ ಬಳಸಲಾಗಿರುವ ಡಿವಿಟಿ(ಡೆಸ್ಮೊಡ್ರೊಮಿಕ್ ವೆರಿವೆಬಲ್ ಟಿಮಿಂಗ್) ತಂತ್ರಜ್ಞಾನವು ಅತ್ಯುತ್ತಮ ಲೊ ಎಂಡ್ ಟಾರ್ಕ್ ಉತ್ಪಾದನೆ ಸಹಕಾರಿಯಾಗಿದೆ.

ಇನ್ನೊಂದು ಪ್ರಮುಖ ವೈಶಿಷ್ಯತೆಯೆಂದರೇ, ಓಹೊ ಲೈನ್ಸ್ ಸಸ್ಪೆಷನ್ ಮತ್ತು ಟೆರ್ಮಿಗೊನ್ನಿ ಎಕ್ಸಾಸ್ಟ್ ಪಡೆದಿದ್ದು, ಸುರಕ್ಷತೆಗಾಗಿ ಎಬಿಎಸ್, ಬಿ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್, ಕಾರ್ಬನ್ ಫೈಬರ್ ಪ್ರೇರಿತ ಬಿಡಿಭಾಗಗಳು ಇದರಲ್ಲಿವೆ.

ಜೊತೆಗೆ ಮಲ್ಟಿಸ್ಟ್ರಾಡಾ 1260 ಸ್ಟ್ಯಾಂಡರ್ಡ್ ಮಾದರಿಯಲ್ಲೇ ಈ ಬೈಕಿನಲ್ಲೂ ಎಲ್‍ಸಿಡಿ ಇನ್ಸ್ಟ್ರೂಮೆಂಟ್ ಪ್ಯಾನಲ್ ಮತ್ತು 1260 ಎಸ್ ವೇರಿಯಂಟ್ ಬೈಕ್‍ಗಳಂತೆ 5 ಇಂಚಿನ ಟಿಎಫ್‍ಟಿ ಇನ್ಸ್ಟ್ರೂಮೆಂಟ್ ಪ್ಯಾನಲ್ ಅನ್ನು ಅಳವಡಿಸಲಾಗಿದೆ.

ಡುಕಾಟಿ ಮಲ್ಟಿಸ್ಟ್ರಾಡಾ 1260 ಬೈಕ್‍ಗಳಲ್ಲಿನ ಡುಕಾಟಿ ಮಲ್ಟಿಮೀಡಿಯಾ ಸಹಾಯದಿಂದ ಸ್ಮಾರ್ಟ್‍ಫೋನ್ ಅನ್ನು ಡಿಸ್ಪ್ಲೇಯೊಂದಿಗೆ ಕನೆಕ್ಟ್ ಮಾಡಬಹುದಾಗಿದ್ದು, ಕರೆಗಳು, ಸಂದೇಶಗಳು ಮತ್ತು ಮ್ಯೂಸಿಕ್ ಅನ್ನು ಟಿಎಫ್‍ಆರ್ ಡ್ಯಾಶ್‍ಬೋರ್ಡ್ ಸಹಾಯದಿಂದಲೇ ನಿಯಂತ್ರಿಸಬಹುದಾಗಿದೆ.

ಇದಲ್ಲದೆ ಈ ಬೈಕ್‍ಗಳು 4 ರೈಡಿಂಗ್ ಮೋಡ್‍ಗಳನ್ನು ಹೊಂದಿದ್ದು, ಸ್ಪೋರ್ಟ್ ಮೋಡ್ ಕೆಂಪು ಬಣ್ಣದಲ್ಲಿ, ಟೂರಿಂಗ್ ಮೋಡ್ ಬೆಳಗಿನ ರಾತ್ರಿಯ ಸಮಯದಲ್ಲಿ ವೈಟ್ ಮತ್ತು ಮುಂಜಾವಿನ ಸಮಯದಲ್ಲಿ ಕಪ್ಪು ಬಣ್ಣ, ಅರ್ಬನ್ ಮೋಡ್ ಅನ್ನು ಗ್ರೇ ಮತ್ತು ಎನ್‍ಡ್ಯೂರೊ ಮೋಡ್ ಬ್ರೌನ್ ಬಣ್ಣದಲ್ಲಿ ತೋರಿಸುತ್ತದೆ.

ಇನ್ನು ಮಲ್ಟಿಸ್ಟ್ರಾಡಾ 1260 ಪೈಕ್ಸ್ ಪೀಕ್ ಬೈಕ್‌ಗಳಲ್ಲಿ ಲೈಟ್ ಅಲಾಯ್ ವೈ ಸ್ಪೋಕ್ ವ್ಹೀಲ್ಸ್, ಪಿರೆಲ್ಲಿ ಸ್ಕಾರ್ಪಿಯಾನ್ ಟ್ರೈನ್ 2 ಟೈರ್ಸ್, ಹೊಸ ನಂಬರ್ ಪ್ಲೇಟ್ ವಿನ್ಯಾಸ ಮತ್ತು ಎಲ್ಇಡಿ ರಿಯರ್ ಟರ್ನ್ ಸಿಗ್ನಲ್‍ಗಳನ್ನು ಪಡೆದುಕೊಂಡಿದೆ.

ಒಟ್ಟಿನಲ್ಲಿ ಈ ಹಿಂದೆ ಬಿಡುಗಡೆಯಾದ ಮಲ್ಟಿಸ್ಟ್ರಾಡಾ 1260 ಮತ್ತು 1260ಎಸ್ ಅಡ್ವೆಂಚರ್ ಬೈಕ್‍ಗಳ ಮಾದರಿಯಲ್ಲೇ ಈ ಬೈಕ್ ಸಹ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, 229 ಕೆಜಿ ತೂಕದೊಂದಿಗೆ ತುಸು ಭಾರ ಎನ್ನಿಸಲಿದೆ. ಆದರೂ ಚಾಲನಾ ಶೈಲಿ ವಿಚಾರದಲ್ಲಿ ಉತ್ತಮವಾಗಿದ್ದು, ಬಿಎಂಡಬ್ಲ್ಯು ಎಸ್1000 ಎಕ್ಸ್ಆರ್ ಪ್ರೊ ಬೈಕಿಗೆ ತ್ರೀವ ಪೈಪೋಟಿ ನೀಡುವ ತವಕದಲ್ಲಿದೆ.


Click it and Unblock the Notifications








