ಪರ್ಫಾರ್‍ಮೆನ್ಸ್ ರೈಡರ್‍‍ಗಳಿಗಾಗಿ ಬಿಡುಗಡೆಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100..

ಪರ್ಫಾರ್ಮೆನ್ಸ್ ಬೈಕ್‍‍ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಡುಕಾಡಿ ಇಂಡಿಯಾ ಸಂಸ್ಥೆಯು ತಮ್ಮ ಹೊಸ ಸ್ಕ್ರ್ಯಾಂಬ್ಲರ್ 1100 ಬೈಕ್ ಅನ್ನು ಇಂದು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

By Rahul Ts

ಪರ್ಫಾರ್ಮೆನ್ಸ್ ಬೈಕ್‍‍ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಡುಕಾಡಿ ಇಂಡಿಯಾ ಸಂಸ್ಥೆಯು ತಮ್ಮ ಹೊಸ ಸ್ಕ್ರ್ಯಾಂಬ್ಲರ್ 1100 ಬೈಕ್ ಅನ್ನು ಇಂದು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಯುವ ಸಮುದಾಯವನ್ನು ಸೆಳೆಯುವ ಉದ್ದೇಶದಿಂದ ಬಿಡುಗಡೆಗೊಂಡ ಈ ಬೈಕಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.10.91 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಪರ್ಫಾರ್‍ಮೆನ್ಸ್ ರೈಡರ್‍‍ಗಳಿಗಾಗಿ ಬಿಡುಗಡೆಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100..

ಬಿಡುಗಡೆಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ - ಸ್ಕ್ರ್ಯಾಂಬ್ಲರ್ 1100, ಸ್ಕ್ರ್ಯಾಂಬ್ಲರ್ 1100 ಸ್ಪೆಷಲ್ ಮತ್ತು ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಎಂಬ ಮೂರು ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿದೆ. ಸ್ಕ್ರ್ಯಾಂಬ್ಲರ್ 1100 ಸ್ಪೆಷಲ್ ಬೈಕಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 11.12 ಲಕ್ಷಕ್ಕೆ ಮತ್ತು ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಬೈಕಿನ ಬೆಲೆಯನ್ನು ರೂ. 11.42 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಪರ್ಫಾರ್‍ಮೆನ್ಸ್ ರೈಡರ್‍‍ಗಳಿಗಾಗಿ ಬಿಡುಗಡೆಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100..

ಡ್ಯುಯಲ್ ಸೀಟ್ ಆಕಾರದಲ್ಲಿ ಲಗ್ಗೆಯಿಟ್ಟ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್‍‍ಗಳು 1330ಎಮ್ಎಮ್ ಎತ್ತರ, 895 ಎಮ್ಎಮ್ ಅಗಲ ಮತ್ತು 2190ಎಮ್ಎಮ್ ಉದ್ದದ ಸುತ್ತಳತೆಯನ್ನು ಪಡೆದುಕೊಂಡಿದೆ. ಸುಮಾರು 206 ಕಿಲೋಗ್ರಾಂ ನ ತೂಕವನ್ನು ಪಡೆದಿರುವ ಈ ಬೈಕ್ 15 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಮತ್ತು 1,514ಎಮ್ಎಮ್‍ನ ವ್ಹೀಲ್ ಬೇಸ್ ಅನ್ನು ಪಡೆದುಕೊಂಡಿದೆ.

ಪರ್ಫಾರ್‍ಮೆನ್ಸ್ ರೈಡರ್‍‍ಗಳಿಗಾಗಿ ಬಿಡುಗಡೆಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100..

ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್‍‍ನ ವಿನ್ಯಾಸದ ಬಗ್ಗೆ ಹೇಳುವುದಾದರೆ ಸ್ಟೀಲ್ ಟ್ಯಾಂಕ್‍‍ನೊಂದಿಗೆ ಅಲ್ಯೂಮೀನಿಯಮ್ ಸೈಡ್ ಪ್ಯಾನಲ್ಸ್, ಮಶಿನ್ ಫಿನಿಷ್ಡ್ ಅಲ್ಯೂಮೀನಿಯಮ್ ಬೆಲ್ಟ್ ಕವರ್ಸ್ ಮತ್ತು ಯುಎಸ್‍‍ಬಿ ಸಾಕೆಟ್‍‍ನೊಂದಿಗೆ ಅಂಡರ್ ಸೀಟ್ ಸ್ಟೋರೇಜ್ ಅನ್ನು ನೀಡಲಾಗಿದೆ.

ಪರ್ಫಾರ್‍ಮೆನ್ಸ್ ರೈಡರ್‍‍ಗಳಿಗಾಗಿ ಬಿಡುಗಡೆಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100..

ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್‍‍ಗಳಲ್ಲಿ ರೈಡರ್‍‍ಗಳಿಗಾಗಿ ವಿಶೇಷವಾದ ರೈಡಿಂಗ್ ಮೋಡ್ಸ್, ಪವರ್ ಮೋಡ್ಸ್, ಎಲ್ಇಡಿ ಹೆಡ್‍‍ಲ್ಯಾಂಪ್, ಎಲ್ಇಡಿ ಟೈಲ್‍‍ಲೈಟ್, ಗೇರ್ ಮತ್ತು ಫ್ಯುಯಲ್ ಲೆವೆಲ್ ಅನ್ನು ತೋರಿಸುವ ಎಲ್‍‍ಸಿಡಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಎಂಬ ವೈಶಿಷ್ಟ್ಯತೆಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಪರ್ಫಾರ್‍ಮೆನ್ಸ್ ರೈಡರ್‍‍ಗಳಿಗಾಗಿ ಬಿಡುಗಡೆಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100..

ಎಂಜಿನ್ ಸಾಮರ್ಥ್ಯ

ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್‍‍ನಲ್ಲಿನ 1,079ಸಿಸಿ ಎಲ್-ಟ್ವಿನ್, ಎಲೆಕ್ಟ್ರಾನಿಕ್ ಪವರ್ ಇಂಜೆಕ್ಷನ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 86ಬಿಹೆಚ್‍‍ಪಿ ಮತ್ತು 88ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಪರ್ಫಾರ್‍ಮೆನ್ಸ್ ರೈಡರ್‍‍ಗಳಿಗಾಗಿ ಬಿಡುಗಡೆಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100..

ಪ್ರಯಾಣಿಕರ ಸುರಕ್ಷತೆಗಾಗಿ ಈ ಬೈಕ್‍‍ಗಳ ಮುಂಭಾಗದಲ್ಲಿ 320ಎಮ್ಎಮ್ ಸೆಮಿ ಫ್ಲೋಟಿಂಗ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 245ಎಮ್ಎಮ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದಲ್ಲದೇ ಬಾಷ್‍‍ನಿಂದ ಪಡೆದ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಪರ್ಫಾರ್‍ಮೆನ್ಸ್ ರೈಡರ್‍‍ಗಳಿಗಾಗಿ ಬಿಡುಗಡೆಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100..

ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕಿನ ಮತ್ತೊಂದು ವಿಶೇಷವೆಂದರೇ ಇದರಲ್ಲಿ, ಇನರ್ಶಿಯಲ್ ಮೆಷರ್ಮೆಂಟ್ ಯೂನಿಟ್, ರೈಡ್-ಬೈ-ವೈರ್ ಮತ್ತು ಆಕ್ಟಿವ್, ಟೂರಿಂಗ್ ಹಾಗು ಸಿಟಿ ಎಂಬ ಒಟ್ಟು ಐದು 5 ಲೆವೆಲ್ ಟ್ಯಾಕ್ಷನ್ ಕಂಟ್ರೋಲ್‍‍ಗಳಿವೆ.

ಪರ್ಫಾರ್‍ಮೆನ್ಸ್ ರೈಡರ್‍‍ಗಳಿಗಾಗಿ ಬಿಡುಗಡೆಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100..

ಬೈಕ್‍‍ನೊಂದಿಗೆ ಗ್ರಾಹಕರು ಇನ್ನಿತರೆ ಆಕ್ಸೆಸರಿಗಳಿಗಾಗಿ ಅಧಿಕೃತ ವೆಬ್‍‍ಸೈಟ್‍‍ನಲ್ಲಿ ಕಾಣಬಹುದಾಗಿದ್ದು, 62 ಎಲ್ಲೊ ಆಂಡ್ ಶೈನಿಂಗ್ ಬ್ಲಾಕ್‍‍ನೊಂದಿಗೆ ಸ್ಪೋರ್ಟ್ ಮತ್ತು ಸ್ಪೆಷಲ್ ವೇರಿಯಂಟ್‍‍‍ಗಳು ವೈಪರ್ ಬ್ಲಾಕ್ ಹಾಗು ಕಾಸ್ಟಮ್ ಗ್ರೇ ಎಂಬ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

More from DriveSpark

Article Published On: Monday, August 27, 2018, 14:52 [IST]
English summary
Ducati Scrambler 1100 Launched In India.
Read more on ducati new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+