ಅನಾವರಣಗೊಂಡ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್

ಕೆಟಿಎಂ ಸಂಸ್ಥೆಯು ತಮ್ಮ ಜನಪ್ರಿಯ ಕೆಟಿಎಂ 790 ಬೈಕಿನ ಅಡೆವೆಂಚರ್ ಆರ್ ಮತ್ತು 790 ಅಡ್ವೆಂಚರ್ ಎಂಬ ಎರಾದು ಮಾದರಿಗಳನ್ನು ಇಟಾಲಿಯ ಮಿಲಾನ್‍‍ನಲ್ಲಿ ನಡೆಯುತ್ತಿರುವ ಇಐಸಿಎಂಎ ಮೋಟಾರ್‍‍‍ಸೈಕಲ್ ಶೋನಲ್ಲಿ ಅನಾವರಣಗೊಳಿಸಿದೆ.

ಅನಾವರಣಗೊಂಡ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್

ನೋಡಲು 1290 ಅಡ್ವೆಂಚರ್ ಬೈಕ್‍‍ಗಳಂತೆಯೆ ಕಾಣುವ ಈ ಬೈಕ್ ಆಫ್-ರೋಡಿಂಗ್ ಕೌಶಲ್ಯಕ್ಕೆ ತಕ್ಕ ಹಾಗೆ ವಿನ್ಯಾಸಗೊಳಿಸಲಾಗಿದೆ. ಇದೊಂದು ಟ್ವಿನ್ ಸಿಲೆಂಡರ್ ಮೋಟಾರ್‍‍ಸೈಕಲ್ ಆಗಿದ್ದು ಅಡ್ವೆಂಚರ್ ರೈಡಿಂಗ್ ಪ್ರಿಯರಿಗೆ ಉತ್ತಮ ಅನುಭವವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅನಾವರಣಗೊಂಡ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್

ಹೊಸ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್ ಮುಂಭಾಗದಲ್ಲಿ 48ಎಂಎಂ ಯುಎಸ್‍‍ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಪ್ರೀಲೋಡ್-ಅಡ್ಜಸ್ಟಬಲ್ ಮೋನೋಶಾಕ್ ಅನ್ನು ಒದಗಿಸಲಾಗಿದೆ. ಹೊಸ 790 ಅಡ್ವೆಂಚರ್ ಆರ್ ಬೈಕ್ 240ಎಂಎಂ ಫ್ರಂಟ್ ಮತ್ತು ರಿಯರ್ ಸಸ್ಪೆಂಷನ್ ಅನ್ನು ಪಡೆದುಕೊಂಡಿದೆ.

ಅನಾವರಣಗೊಂಡ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್‍ ಮುಂಭಾಗದಲ್ಲಿ ಟ್ವಿನ್ 320ಎಂಎಂ ಕ್ಯಾಲಿಪರ್ ಮತ್ತು ಹಿಂಭಾಗದಲ್ಲಿ 260ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗುದರ ಜೊತೆಗೆ ಬಾಶ್‍‍ನಿಂದ ಪಡೆದ ಸ್ವಿಚಬಲ್ ಎಬಿಎಸ್ ಟೆಕ್ನಾಲಜಿಯನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.

ಅನಾವರಣಗೊಂಡ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್

ಹೊಸ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್ 263ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಮತ್ತು 880ಎಂಎಂನ ಉದ್ದವನ್ನು ಪಡೆದುಕೊಂಡಿದ್ದು, ಕೆಟಿಎಂ 790 ಬೈಕ್ 233ಎಂಎಂ ಗ್ರೊಂಡ್ ಕ್ಲಿಯರೆನ್ಸ್ ಮತ್ತು 850ಎಂಎಂನ ಸೀಟ್ ಹೈಟ್ ಅನ್ನು ಪಡೆದುಕೊಂಡಿದೆ.

ಅನಾವರಣಗೊಂಡ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್

ಕೆಟಿಎಂ 790 ಅಡ್ವೆಂಚರ್ ಮತ್ತು ಅಡ್ವೆಂಚರ್ ಆರ್ ಬೈಕ್‍ಗಳು 799ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 93ಬಿಹೆಚ್‍‍ಪಿ ಮತ್ತು 85ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿದಲಾಗಿದೆ.

ಅನಾವರಣಗೊಂಡ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್

ಕೆಟಿಎಂ 790 ಅಡ್ವೆಂಚರ್ ಮತ್ತು ಅಡ್ವೆಂಚರ್ ಆರ್ ಎರದು ಬೈಕ್‍‍ಗಳು 20 ಲೀಟರ್ ಫ್ಯುಯಲ್ ಟ್ಯಾಂಕ್ ಕೆಪಾಸಿಟಿಯನ್ನು ಹೊಂದಿದ್ದು, ಸುಮಾರು 400 ಕಿಲೋಮೀಟರ್‍‍ನಷ್ಟು ಚಲಿಸಬಲ್ಲ ಸಾಮರ್ಥ್ಯವನ್ನು ಈ ಬೈಕ್‍‍ಗಳು ಹೊಂದಿದೆ. ಇದರಲ್ಲಿನ ಪ್ರೇಮ್ ಅನ್ನು ಕ್ರೋಮ್ ಮೊಲಿಬ್ಡೆನಂ ಅಲಾಯ್‍‍ನಿಂದ ತಯಾರಿಸಲಾಗಿದೆ ಎನ್ನಲಾಗಿದೆ.

ಅನಾವರಣಗೊಂಡ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಅನಾವರಣಗೊಂಡ ಹೊಸ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್ ಉತ್ತಮ ಆಫ್-ರೋಡಿಂಗ್ ಬೈಕ್ ಆಗಿರಲಿದ್ದು, ಕೆಟಿಎಂ 790 ಬೈಕಿನ ಬಿಡುಗಡೆಯ ಅವಧಿಯಲ್ಲೆ ಸಂಸ್ಥೆಯು ಈ ಬೈಕಿನ ಅಡ್ವೆಂಚರ್ ಮಾದರಿಗಳು ಅನಾವರಗೊಳ್ಳಲಿದೆ ಎಂದು ಸಹ ತಿಳಿಸಿದರು. ಈ ಬೈಕ್ ಒಮ್ಮೆ ಮಾರುಕಟ್ಟೆಯಲ್ಲಿ ಲಗ್ಗೆಯಿಟ್ಟರೆ ಟ್ರಯಂಫ್ ಟೈಗರ್ 800 ಮತ್ತ್ ಬಿಎಂಡಬ್ಲ್ಯೂ ಎಫ್ 750 ಜಿಎಸ್ ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

Article Published On: Wednesday, November 7, 2018, 10:24 [IST]
English summary
EICMA 2018: KTM 790 Adventure R Unveiled.
Read more on ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+