ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಅಮೆರಿಕದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ಹಾರ್ಲೆ ಡೇವಿಡ್ಸನ್ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕ್ರೂಸರ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಆರಂಭಿಕ ಆವೃತ್ತಿಯಾದ ಸ್ಟ್ರೀಟ್ 750 ಬೈಕ್ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದೆ.

By Praveen Sannamani

ಅಮೆರಿಕದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ಹಾರ್ಲೆ ಡೇವಿಡ್ಸನ್ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕ್ರೂಸರ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಆರಂಭಿಕ ಆವೃತ್ತಿಯಾದ ಸ್ಟ್ರೀಟ್ 750 ಬೈಕ್ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ.

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಸದ್ಯ ಆಮದು ತೆರಿಗೆ ಹೆಚ್ಚಳದಿಂದ ಐಷಾರಾಮಿ ಬೈಕ್ ಬೆಲೆಗಳು ಗಗನಮುಖಿಯಾಗಿದ್ದು, ಹಾರ್ಲೇ ಡೇವಿಡ್ಸನ್ ಸಂಸ್ಥೆಯು ಮಾತ್ರ ದೇಶಿಯ ಮಾರುಕಟ್ಟೆಯಲ್ಲಿ ಸಿದ್ದಗೊಳ್ಳುತ್ತಿರುವ ಸ್ಟ್ರೀಟ್ 750 ಬೈಕ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ ಮಾಡಿದ್ದು, ಹಾರ್ಲೇ ಡೇವಿಡ್ಸನ್ ಬೈಕ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದು.

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಜೀರೋ ಪರ್ಸೆಂಟ್ ಬಡ್ಡಿ ಆಫರ್

ಹೌದು, ಸ್ಟ್ರೀಟ್ 750 ಮತ್ತು ಸ್ಟೀಟ್ ರಾಡ್ ಮೋಟಾರ್ ಸೈಕಲ್‌ಗಳ ಖರೀದಿ ಮೇಲೆ ಜೀರೋ ಪರ್ಸೆಂಟ್ ಬಡ್ಡಿ ದರ ಆಫರ್ ನೀಡುತ್ತಿದ್ದು, ಗ್ರಾಹಕರು ಮರುಪಾವತಿಸಬೇಕಾದ ಕಂತುಗಳ(ಇಎಂಐ) ಮೇಲೆ ಯಾವುದೇ ಬಡ್ಡಿ ದರಗಳನ್ನು ವಿಧಿಸುವುದಿಲ್ಲ.

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಇದರ ಜೊತೆಗೆ ಬೈಕ್ ಖರೀದಿಗೆ ಮೇಲೆ ಜೀರೋ ಪರ್ಸೆಂಟ್ ಬಡ್ಡಿ ದರ ಆಫರ್ ಅಷ್ಟೇ ಅಲ್ಲದೇ ಸುಮಾರು 50 ಸಾವಿರ ಮೌಲ್ಯದ ಆಕ್ಸೆರಿಸ್ ಖರೀದಿಸುವ ಆಫರ್ ಸಹ ಇದ್ದು, ಈ ಹೊಸ ಅವಕಾಶ ಜುಲೈ ಅಂತ್ಯದ ತನಕ ಮಾತ್ರ ಲಭ್ಯವಿರಲಿವೆಯೆಂತೆ.

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಇನ್ನು ಹೊಸ ಆಫರ್‌ಗಳ ಪ್ರಕಾರ, ಸ್ಟ್ರೀಟ್ 750 ಬೈಕ್‌ಗಳು ಖರೀದಿ ಬಯಸಿದ್ದಲ್ಲಿ ಡೌನ್ ಪೇಮೆಂಟ್ ರೂಪದಲ್ಲಿ ರೂ. 2.03 ಲಕ್ಷ ಪಾವತಿಸಬೇಕಾಗಿದ್ದು, ತದನಂತರ ಮೂರು ವರ್ಷಗಳ ಕಾಲ ಪ್ರತಿ ತಿಂಗಳು ರೂ. 11,100 ಇಎಂಐ ಪಾವತಿಸಬೇಕಾಗುತ್ತದೆ.

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಹಾಗೆಯೇ ಸ್ಪ್ರೀಟ್ ರಾಡ್ ಖರೀದಿ ಮಾಡುವುದಾದರೇ ರೂ.3. 39 ಲಕ್ಷ ಡೌನ್ ಪೇಮೆಂಟ್ ಹಾಗೂ ಬಡ್ಡಿರಹಿತವಾಗಿ ಮೂರು ವರ್ಷಗಳ ಕಾಲ ಇಂತಿಷ್ಟು ಪ್ರಮಾಣದಲ್ಲಿ ಇಎಂಐ ಪಾವತಿಸಬೇಕಾಗುತ್ತದೆ. ಇವೆಲ್ಲಾ ಆಫರ್ ಮೊದಲ ಹೇಳಿದ ಹಾಗೆ ಸಿಮಿತ ಅವಧಿಗೆ ಮಾತ್ರ ಲಭ್ಯವಿರುತ್ತವೆ.

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಭಾರತದಲ್ಲಿ ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಈ ಸ್ಟ್ರೀಟ್ ರಾಡ್ 750 ಬೈಕನ್ನು ನಿರ್ಮಾಣ ಮಾಡಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಸದ್ಯ ವಿವಿಧ ಬಗೆಯ ದುಬಾರಿ ಬೆಲೆ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಆರಂಭಿಕ ಬೈಕ್‌ಗಳ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಆಫರ್ ನೀಡುತ್ತಿದೆ.

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಸದ್ಯ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಮಾರಾಟ ಮಾಡುತ್ತಿರುವ ಸ್ಟ್ರೀಟ್ 750 ಮತ್ತು ಸ್ಟ್ರೀಟ್ ರಾಡ್ 750 ಬೈಕ್‌ಗಳು ವಿವಿಧ ಬ್ಲಾಕ್, ಚಾರ್ಕೋಲ್ ಡೆನಿಮ್ ಮತ್ತು ಆಲಿವ್ ಗೋಲ್ಡ್ ಎಂಬ ಹೊಚ್ಚ ಹೊಸ ಮೂರು ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದ್ದು, ಪ್ರತಿ ತಿಂಗಳು 250 ರಿಂದ 300 ಬೈಕ್ ಮಾರಾಟ ಗುರಿ ಹೊಂದಲಾಗಿದೆ.

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಸೂಪರ್ ಬೈಕ್ ಉತ್ಪಾದನಾ ಸಂಸ್ಥೆಗಳ ನಡುವೆ ತೀವ್ರ ಸ್ಪರ್ಧೆ ಸೃಷ್ಠಿಯಾಗುತ್ತಿದ್ದು, ಈ ಹಿನ್ನೆಲೆ ಹೊಸ ತಲೆಮಾರಿನ ಯುವಜನತೆಯ ಬೇಡಿಕೆಗಳನ್ನು ನಿಭಾಯಿಸಲು ವಿನೂತನ ಪ್ರಯೋಗ ಮಾಡುತ್ತಿರುವ ಹಾರ್ಲೆ ಡೇವಿಡ್ಸನ್ ಇಂಡಿಯಾ ಎಂಡಿ ಪೀಟರ್ ಮ್ಯಾಕೆಂಜಿ ಅವರು ಬೇಡಿಕೆ ಹೆಚ್ಚಳಕ್ಕೆ ಬೇಕಾದ ಕೆಲವು ಅಗತ್ಯ ಮಾರ್ಪಾಡುಗಳನ್ನು ಮಾಡುತ್ತಿದ್ದಾರೆ.

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಇದಲ್ಲದೇ ಭಾರತೀಯ ಗ್ರಾಹಕರಿಗಾಗಿಯೇ ವಿಶೇಷ ಯೋಜನೆ ರೂಪಿಸಿರುವ ಹಾರ್ಲೆ ಡೆೇವಿಡ್ಸನ್ ಸಂಸ್ಥೆಯು ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಸದ್ಯದಲ್ಲೇ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಪ್ರಕ್ರಿಯೆಯೂ ಚಾಲನೆ ನೀಡುತ್ತಿದ್ದು, ವಿಶ್ವದರ್ಜೆಯ ಗುಣಮಟ್ಟದೊಂದಿಗೆ ತನ್ನ ನೆಚ್ಚಿನ ಉತ್ಪನ್ನಗಳನ್ನು ಮರುಮಾರಾಟ ಮಾಡುವ ಯೋಜನೆಗೆ ಸಿದ್ದವಾಗಿದೆ.

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಹೀಗಾಗಿ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಜಾರಿಗೆ ತರುತ್ತಿರುವ ಹೊಸ ಯೋಜನೆಗಳು ಹಲವರ ಕನಸನ್ನು ನನಸು ಮಾಡುವಲ್ಲಿ ಸಹಕಾರಿಯಾಗಲಿದ್ದು, ಈ ಮೂಲಕ ತನ್ನ ಗ್ರಾಹಕ ಸಮುದಾಯವನ್ನು ಹೆಚ್ಚಿಸುವುದರ ಜೊತೆ ಜೊತೆಗೆ ಭಾರೀ ಪ್ರಮಾಣದ ಆದಾಯವನ್ನು ಕೂಡಾ ನೀರಿಕ್ಷೆ ಮಾಡುತ್ತಿದೆ.

More from DriveSpark

Article Published On: Thursday, June 28, 2018, 19:04 [IST]
English summary
Harley-Davidson Street 750, Street Rod Available At Zero Per Cent Interest.
Read more on harley davidson
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+