ತಮಿಳುನಾಡಿನಲ್ಲು ಇನ್ಮುಂದೆ ಹಿಂಬದಿಯ ಸವಾರರಿಗೆ ಹೆಲ್ಮೆಟ್ ಕಡ್ಡಾಯ..

ದೇಶಾದ್ಯಂತ ರಸ್ತೆ ನಿಯಮಗಳನ್ನು ಪಾಲಿಸದೆ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಕೆಲವು ರಾಜ್ಯಗಳಲ್ಲಿನ ಹೈ-ಕೋರ್ಟ್ ದ್ವಿಚಕ್ರ ವಾಹನಗಳಲ್ಲಿನ ಹಿಂಬದಿಯ ಸವಾರರಿಗೂ ಕೂಡಾ ಹೆಲ್ಮೆಟ್ ಅನ್ನು ಖಡ್ಡಾಯ ಮಾಡಲಾಗಿದೆ. ಈ ಕಾನೂನು ಇದ

By Rahul Ts

ದೇಶಾದ್ಯಂತ ರಸ್ತೆ ನಿಯಮಗಳನ್ನು ಪಾಲಿಸದೆ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಕೆಲವು ರಾಜ್ಯಗಳಲ್ಲಿನ ಹೈ-ಕೋರ್ಟ್ ದ್ವಿಚಕ್ರ ವಾಹನಗಳಲ್ಲಿನ ಹಿಂಬದಿಯ ಸವಾರರಿಗೂ ಕೂಡಾ ಹೆಲ್ಮೆಟ್ ಅನ್ನು ಖಡ್ಡಾಯ ಮಾಡಲಾಗಿದೆ. ಈ ಕಾನೂನು ಇದೀಗ ತಮಿಳುನಾಡಿನಲ್ಲಿಯು ಶುರು ಮಾಡಲಾಗಿದೆ.

ತಮಿಳು ನಾಡಿನಲ್ಲು ಇನ್ಮುಂದೆ ಹಿಂಬದಿಯ ಸವಾರರಿಗೆ ಹೆಲ್ಮೆಟ್ ಕಡ್ಡಾಯ..

ಹೌದು, ತಮಿಳುನಾಡಿನ ಸರ್ಕಾರವು ಇದೇ ಸೋಮವಾರದಿಂದ (27 ಆಗಸ್ಟ್ 2018) ದ್ವಿಚಕ್ರ ವಾಹನಗಳ ಹಿಂಬದಿಯ ಸವಾರಿರಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಘೋಷಿಸಿದೆ. ಕೇವಲ ಹಿಂಬದಿಯ ಸವರಾರ ಹೆಲ್ಮೆಟ್ ವಿಚಾರವಲ್ಲದೇ ಕಾರಿನಲ್ಲಿ ಪ್ರಾಯಾಣಿಸುವ ವೇಳೆ ಸೀಟ್ ಬೆಲ್ಟ್ ಧರಿಸುವುದು ಕೂಡಾ ಕಡ್ಡಾಯ ಎಂದು ಹೇಳಲಾಗಿದೆ.

ತಮಿಳು ನಾಡಿನಲ್ಲು ಇನ್ಮುಂದೆ ಹಿಂಬದಿಯ ಸವಾರರಿಗೆ ಹೆಲ್ಮೆಟ್ ಕಡ್ಡಾಯ..

ತಮಿಳುನಾಡಿನ ಅಂಕಿ ಅಂಶಗಳ ಪ್ರಕಾರ ಕಳೆದ ಜುಲೈ ತಿಂಗಳಿನಲ್ಲಿ ಸುಮಾರು 7,256ಕ್ಕು ಹೆಚ್ಚು ಮಂದಿ ರಸ್ತೆ ಅಪಘಾತದಿಂಡ ಮೃತಪಟ್ಟಿದ್ದು, ಅದರಲ್ಲಿ ಸುಮಾರು 2,476 ಮಂದಿ ದ್ವಿಚಕ್ರ ವಾಹನ ಸವಾರರೆ ಆಗಿದ್ದಾರೆ. ಅಂದರೇ 100ರಲ್ಲಿ ಶೇಕಡ 40ರಷ್ಟು ಅಪಘಾತಗಳು ದ್ವಿಚಕ್ರ ವಾಹನ ಸವಾರರದ್ದೆ ಆಗಿದೆ.

ತಮಿಳು ನಾಡಿನಲ್ಲು ಇನ್ಮುಂದೆ ಹಿಂಬದಿಯ ಸವಾರರಿಗೆ ಹೆಲ್ಮೆಟ್ ಕಡ್ಡಾಯ..

ತಮಿಳುನಾಡಿನಲ್ಲಿ ಈ ವರ್ಷ ಸುಮಾರು 2.14 ಕೋಟಿ ದ್ವಿಚಕ್ರ ವಾಹನಗಳು ರಿಜಿಸ್ಟರ್ ಆಗಿವೆ. ಅಂದರೆ ಅಲ್ಲಿನ ಪ್ರಸ್ತುತ ಶೇಕಡ 84ರಷ್ಟು ದ್ವಿಚಕ್ರ ವಾಹನಗಳು ರಿಜಿಸ್ಟರ್ ಆಗಿದೆ. ಅಧಿಕೃತವಾಗಿ ಪ್ರಕಟಣೆಗೊಂಡ ಕಾನೂನಿನಲ್ಲಿ ಸೆಕ್ಷನ್ 129, ಮೋಟರ್ ವೆಹಿಕಲ್ ಆಕ್ಟ್ 1988 ಖಾಯ್ದೆಯ ಅಡಿಯಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿಯ ಸವಾರರು ತಪ್ಪದೇ ಹೆಲ್ಮೆಟ್ ಅನ್ನು ಧರಿಸಲೇಬೇಕೆಂದು ಮದ್ರಾಸ್ ಹೈ ಕೋರ್ಟ್ ತೀರ್ಪನ್ನು ನೀಡಿದೆ.

ತಮಿಳು ನಾಡಿನಲ್ಲು ಇನ್ಮುಂದೆ ಹಿಂಬದಿಯ ಸವಾರರಿಗೆ ಹೆಲ್ಮೆಟ್ ಕಡ್ಡಾಯ..

ಅಂತಹ ಉಲ್ಲಂಘನೆಗಾರರ ವಿರುದ್ಧ ಕಠಿಣ ಕ್ರಮವನ್ನು ಅನುಷ್ಠಾನಗೊಳಿಸುವ ಕಡೆಗೆ ಕಾರ್ಯಕರ್ತ ಕೆ.ಕೆ. ರಾಜೇಂದ್ರನ್ ಕೂಡ ಪಿಲ್ ದಾಖಲಿಸಿದ್ದಾರೆ. ಹೆಲ್ಮೆಟ್-ಕಡಿಮೆ ಸವಾರಿಯ ಕಾರಣದಿಂದಾಗಿ 2017 ರಲ್ಲಿ ಸುಮಾರು 3,000 ಸಾವುಗಳು ಸಂಭವಿಸಿವೆ ಎಂದು ಅವರು ಹೇಳಿದರು.

ತಮಿಳು ನಾಡಿನಲ್ಲು ಇನ್ಮುಂದೆ ಹಿಂಬದಿಯ ಸವಾರರಿಗೆ ಹೆಲ್ಮೆಟ್ ಕಡ್ಡಾಯ..

ರಾಜ್ಯ ಪೋಲಿಸ್ ಹೆಲ್ಮೆಟ್ ಧರಿಸಿದ ಪಿಲಿಯನ್ ರೈಡರ್ಸ್ ಕಡೆಗೆ ನಿರ್ಲಕ್ಷ್ಯವಾಗಿದೆ. ಎಂದು ನ್ಯಾಯಾಧೀಶರ ವಿಭಾಗ ಪೀಠ, ಎಸ್. ಮಣಿಕುಮಾರ್ ಮತ್ತು ಸುಬ್ರಮಣ್ಯಂ ಪ್ರಸಾದ್ ಅವರು ಈ ತಿಂಗಳು ಮುಂಚಿತವಾಗಿ ಹೇಳಿಕೆ ನೀಡಿದ್ದರು. ಅದಾಗ್ಯೂ, ಆಗಸ್ಟ್ 16 ರಿಂದ ಈ ಹೇಳಿಕೆಯನ್ನು ಸಂಚಾರ ಪೊಲೀಸ್ ಹೇಳಿದ ನಂತರ 10,000 ಕ್ಕಿಂತಲೂ ಹೆಚ್ಚು ಮಂದಿಯನ್ನು ಈ ಕನೂನಿನಲ್ಲಿ ಬುಕ್ ಮಾಡಲಾಗಿದೆ.

ತಮಿಳು ನಾಡಿನಲ್ಲು ಇನ್ಮುಂದೆ ಹಿಂಬದಿಯ ಸವಾರರಿಗೆ ಹೆಲ್ಮೆಟ್ ಕಡ್ಡಾಯ..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ತಮಿಳುನಾಡು ಸರ್ಕಾರ ಹಿಂಬದಿಯ ಸವಾರರು ಹೆಲ್ಮೆಟ್ ಧರಿಸಲೇ ಬೇಕೆಂದು ತೀವ್ರ ಹೇಳಿಕೆಯನ್ನು ನೀಡಿದ್ದು, ರಾಜ್ಯ ಪಾಲಿಸಿಯನ್ನು ಅನುಸರಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸಹ ಕೇಳಲಾಗಿದೆ. ಹಿಂಬದಿಯ ಸವಾರರು ಹೆಲ್ಮೆಟ್ ಧರಿಸದಿರುವವರ ಮೇಲೆ ಹೆಚ್ಚಿನ ಕೇಸ್ ಹಾಕಿ ಎಂದು ತಮಿಳು ನಾಡಿನ ಜೆನರಲ್ ಆಫ್ ಪೊಲೀಸ್ ನಿರ್ಧೇಶಕರಾದ ಟಿಕೆ ರಾಜೆಂದ್ರನ್ ಹೇಳಿದ್ದಾರೆ.

Most Read Articles

Kannada
English summary
Helmet For Pillion Riders Mandatory In Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X