ಮಾರುಕಟ್ಟೆಗೆ ಲಗ್ಗೆಯಿಟ್ಟ ಹೀರೋ ಸಂಸ್ಥೆಯ ಹೊಚ್ಚ ಹೊಸ ಡೆಸ್ಟಿನಿ 125 ಸ್ಕೂಟರ್..!
ಹೀರೋ ಸಂಸ್ಥೆಯು ತನ್ನ ಈ ಹಿಂದಿನ ಜನಪ್ರಿಯ ಡ್ಯುಯೆಟ್ ಸ್ಕೂಟರ್ ಮಾದರಿಯ ಮುಂದುವರಿದ ಭಾಗವಾಗಿ ಡೆಸ್ಟಿನಿ 125 ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, 125ಸಿಸಿ ಸ್ಕೂಟರ್ ವಿಭಾಗದಲ್ಲೇ ಈ ಹೊಸ ಸ್ಕೂಟರ್ ವಿಶೇಷ ಸೌಲಭ್ಯಗಳನ್ನು ಹೊತ್ತು ಬಂದಿದೆ.

ಹೀರೋ ಡ್ಯುಯೆಟ್ 110 ಸ್ಕೂಟರ್‌ಗಳಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳೊಂದಿಗೆ ಪ್ರೀಮಿಯಂ ವಿನ್ಯಾಸಗಳನ್ನು ಹೊಂದಿರುವ ಡೆಸ್ಟಿನಿ 125 ಸ್ಕೂಟರ್ ಮಾದರಿಯು 125ಸಿಸಿ ಎಂಜಿನ್ ಮಾದರಿಗಳಲ್ಲೇ ವಿಶೇಷ ಎನ್ನಿಸಲಿದ್ದು, ಪ್ರೀಮಿಯಂ ಸ್ಕೂಟರ್ ಪ್ರಿಯರನ್ನು ಗಮನ ಸೆಳೆಯಲಿವೆ.

ಹೀರೋ ಡ್ಯುಯೆಟ್ 110 ಸ್ಕೂಟರ್‌ಗಳಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳೊಂದಿಗೆ ಪ್ರೀಮಿಯಂ ವಿನ್ಯಾಸಗಳನ್ನು ಹೊಂದಿರುವ ಡೆಸ್ಟಿನಿ 125 ಸ್ಕೂಟರ್ ಮಾದರಿಯು 125ಸಿಸಿ ಎಂಜಿನ್ ಮಾದರಿಗಳಲ್ಲೇ ವಿಶೇಷ ಎನ್ನಿಸಲಿದ್ದು, ಪ್ರೀಮಿಯಂ ಸ್ಕೂಟರ್ ಪ್ರಿಯರನ್ನು ಗಮನ ಸೆಳೆಯಲಿವೆ.
ಬೆಲೆಗಳು(ಎಕ್ಸ್‌ಶೋರೂಂ ಪ್ರಕಾರ)
ಎಲ್ಎಕ್ಸ್ ವೆರಿಯೆಂಟ್- ರೂ. 54,650
ವಿಎಕ್ಸ್ ವೆರಿಯೆಂಟ್- ರೂ. 57,500

ಹೀರೋ ಸಂಸ್ಥೆಯು ಈ ಹಿಂದೆ 110ಸಿಸಿ ಸಾಮರ್ಥ್ಯದ ಡ್ಯುಯೆಟ್ ಸ್ಕೂಟರ್‌ಗಳನ್ನು ಪರಿಚಯಿಸಿದ್ದಲ್ಲದೇ ಅದೇ ಹೆಸರಿನೊಂದಿಗೆ 125ಸಿಸಿ ಸಾಮರ್ಥ್ಯದ ಸ್ಕೂಟರ್ ಅನ್ನು ಸಹ ಬಿಡುಗೊಳಿಸುವ ಸಂಬಂಧ 2018ರ ಆಟೋ ಎಕ್ಸ್‌ಪೋದಲ್ಲಿ ಡ್ಯುಯೆಟ್ 125 ಸ್ಕೂಟರ್ ಅನ್ನು ಪ್ರದರ್ಶನ ಮಾಡಿತ್ತು.

ಆದ್ರೆ ಹೊಸ ಸ್ಕೂಟರ್ ಮಾದರಿಗೆ ಡ್ಯುಯೆಟ್ ಹೆಸರನ್ನು ಮುಂದುವರಿಸುವ ಬಗ್ಗೆ ಮಹತ್ವದ ನಿರ್ಣಯ ಕೈಗೊಂಡ ಹೀರೋ ಸಂಸ್ಥೆಯು ಕೊನೆಯ ಗಳಿಗೆಯಲ್ಲಿ ಡ್ಯುಯೆಟ್ 125 ಹೆಸರು ಬದಲಿಸಿ ಡೆಸ್ಟಿನಿ 125 ಎಂದು ಮರುನಾಮಕರಣ ಮಾಡಿ ಬಿಡುಗಡೆ ಮಾಡಿದೆ.

ಹೊಸ ಸ್ಕೂಟರ್ ಎಂಜಿನ್ ವೈಶಿಷ್ಟ್ಯತೆ:
ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳು 125 ಸಿಸಿ ಸಿಂಗಲ್ ಸಿಲಿಂಡರ್, ಎನರ್ಜಿ ಬೂಸ್ಟ್ ಎಂಜಿನ್ ಸಹಾಯದಿಂದ 8.7-ಬಿಹೆಚ್‍ಪಿ ಮತ್ತು 10.2-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು ವೇರಿಯೊಮೇಟಿಕ್ ಡ್ರೈವ್ ಆಟೋಮ್ಯಾಟಿಕ್ ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇದಲ್ಲದೆ ಹೊಸ ಸ್ಕೂಟರ್‌ನಲ್ಲಿ ವಿಶೇಷವಾದ ಹೀರೋ ಸಂಸ್ಥೆಯ ಐ3ಎಸ್ (ಐಡಲ್ ಸ್ಟಾರ್ಟ್-ಸ್ಟಾಪ್ ಟೆಕ್ನಾಲಜಿ)ಯನ್ನು ಪಡೆದಿದ್ದು, ಕೆಲವು ಸೆಕೆಂಡುಗಳಿಗಿಂತ ಹೆಚ್ಚು ಕಾಲ ವಾಹನ ನಿಷ್ಕ್ರಿಯವಾಗಿದ್ದಾಗ ಐ3ಎಸ್ ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಸ್ವಯಂಚಾಲಿತವಾಗಿ ಎಂಜಿನ್ ಅನ್ನು ಬದಲಿಸುತ್ತದೆ.

ಬೈಕಿನ ವೈಶಿಷ್ಟ್ಯತೆಗಳು
ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ಎಲ್ಇಡಿ ಟೈಲ್ ಲೈಟ್, ಹೊರ ಭಾಗದಲ್ಲಿ ಇರುವ ಫ್ಯೂಲ್ ಟ್ಯಾಂಕ್ ಕ್ಯಾಪ್, ಬಾಡಿ ಕಲರ್ ಮಾದರಿಯಲ್ಲೇ ರಿಯರ್ ವ್ಯೂ ಮಿರರ್ ಬಣ್ಣದ ಆಯ್ಕೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೂಟ್ ಲೈಟ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನ ಇದರಲ್ಲಿ ನೀಡಲಾಗಿದೆ.

ಇನ್ನು ಬಿಡುಗಡೆಯಾಗಿರುವ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳು 1,830ಎಂಎಂ ಉದ್ದ, 726ಎಂಎಂ ಅಗಲ ಮತ್ತು 1,155ಎಂಎಂ ಎತ್ತರ ಹೊಂದಿದ್ದು, 1245ಎಂಎಂ ವ್ಹೀಲ್ ಬೇಸ್ ಹಾಗು 155ಎಂಎಂ ನಷ್ಟು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ.

ಹಾಗೆಯೇ ಈ ಸ್ಕೂಟರ್‍ನ ಸಸ್ಷೆಷನ್ ವಿಚಾರಕ್ಕೆ ಬಗ್ಗೆ ಹೇಳುವುದಾದರೇ, ಮುಂಭಾಗದಲ್ಲಿ ಅಪ್‍ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಿಂಭಾಗದಲ್ಲಿ ಸ್ಪ್ರಿಂಗ್ ಮಾದರಿಯ ಹೈಡ್ರಾಲಿಕ್ ಶಾಕ್ಬರ್ಜರ್ ಅನ್ನು ಪಡೆದುಕೊಂಡಿರಲಿದೆ.

ಇನ್ನು ಡೆಸ್ಟಿನಿ 125 ವಿಎಕ್ಸ್ ವೆರಿಯೆಂಟ್ ಮಾದರಿಯು ಎಲ್ಎಕ್ಸ್ ವೆರಿಯೆಂಟ್‌ಗಿಂತ ಉತ್ತಮ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಮೊಬೈಲ್ ಚಾರ್ಜಿಂಗ್, ಬೂಟ್ ಲೈಟ್ ಸೇರಿದಂತೆ ಇಂಟ್ರಾಗೆಟೆಡ್ ಬ್ರೇಕಿಂಗ್ ಸಿಸ್ಟಂ(ಐಬಿಎಸ್) ಹೊಂದಿರುತ್ತದೆ.

ಲಭ್ಯವಿರುವ ಬಣ್ಣಗಳು
ಡೆಸ್ಟಿನಿ 125 ಸ್ಕೂಟರ್‌ಗಳು ನಾಲ್ಕು ಪ್ರಮುಖ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ನೊಬೆಲ್ ರೆಡ್(ವಿಎಕ್ಸ್ ವೆರಿಯೆಂಟ್‌ನಲ್ಲಿ ಮಾತ್ರ), ಚೆಸ್ಟ್‌ನಟ್ ಬ್ರೋನ್ಜ್, ಪ್ಯಾಂತರ್ ಬ್ಲ್ಯಾಕ್ ಮತ್ತು ಪರ್ಲ್ ಸಿಲ್ವರ್ ವೈಟ್ ಬಣ್ಣಗಳನ್ನು ಆಯ್ಕೆ ಮಾಡಬಹುದು.

ಒಟ್ಟಿನಲ್ಲಿ ಹೀರೋ ಡೆಸ್ಟಿನಿ 125 ಸ್ಕೂಟರ್ ಮಾದರಿಯು ಪ್ರೀಮಿಯಂ ಸ್ಕೂಟರ್‌ಗಳಲ್ಲೇ ವಿಶೇಷ ಎನ್ನಿಸಲಿದ್ದು, ಡ್ಯುಯಲ್ ಟೋನ್ ಸೀಟು, ಸ್ಟೈಲಿಷ್ ಕಾಸ್ಟ್ ವೀಲ್ಹ್‌ಗಳು, ಫ್ರಂಟ್ ಆಪ್ರಾನ್ ಮತ್ತು ಸೈಡ್ ಕ್ರೋಮ್ ಗಾರ್ನಿಶ್ ಹೊಂದಿರುವುದು ಹೋಂಡಾ ಆಕ್ಟಿವಾ 125 ಮತ್ತು ಆಕ್ಸೆಸೆಸ್ 125 ಸ್ಕೂಟರ್‌ಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಿದೆ.
More from DriveSpark
ಹೀರೋ ಡೆಸ್ಟಿನಿ 125 ಸ್ಕೂಟರ್ ಫೋಟೋ ಗ್ಯಾಲರಿ..!


Click it and Unblock the Notifications








