ಹೀರೋ ಬೈಕ್‌ಗಳ ಬೆಲೆಯಲ್ಲಿ ಮತ್ತೆ ಹೆಚ್ಚಳ- ವರ್ಷದಲ್ಲಿ ಆರು ಬಾರಿಗೆ ಬೆಲೆ ಏರಿಕೆ..!
ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ಕಳೆದ ಒಂದು ವರ್ಷದಿಂದ ಬೈಕ್ ಬೆಲೆಯಲ್ಲಿ ಆಗಾಗ ಹೆಚ್ಚಳ ಮಾಡುತ್ತಲೇ ಇದೆ. ಅದರಲ್ಲೂ ಕಳೆದ 5 ತಿಂಗಳ ಅಂತರದಲ್ಲಿ ನಾಲ್ಕು ಬಾರಿ ತನ್ನ ಬೈಕ್ ಉತ್ಪನ್ನಗಳ ಬೆಲೆಗಳನ್ನ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ನೀಡಿದೆ.

ಬಿಡಿಭಾಗಗಳು ಮತ್ತು ಸರಕು ಸಾಗಾಣಿಕೆ ವೆಚ್ಚ ಹೆಚ್ಚಳದಿಂದಾಗಿ ದ್ವಿಚಕ್ರ ವಾಹನಗಳ ಬೆಲೆಗಳನ್ನ ಹೆಚ್ಚಿಸುತ್ತಿರುವ ಬಗ್ಗೆ ಸಮರ್ಥನೆ ನೀಡುತ್ತಿರುವ ಹೀರೋ ಮೊಟೊಕಾರ್ಪ್ ಸಂಸ್ಥೆಯು ಕಳೆದ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ ಮೂರುವರೆ ಸಾವಿರದಿಂದ ನಾಲ್ಕು ಸಾವಿರ ತನಕ ಬೆಲೆ ಎರಿಕೆ ಮಾಡಿದ್ದು, ಬೈಕ್ ಮಾರಾಟದಲ್ಲಿ ಸದ್ಯ ನಂ.1 ಸ್ಥಾನದಲ್ಲಿರುವ ಹೀರೋ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್ ನೀಡುತ್ತಿದೆ.

ವರ್ಷದ ಆರಂಭದಲ್ಲೇ ತನ್ನೆಲ್ಲಾ ಬೈಕ್‌ಗಳ ಮೇಲೆ ರೂ.400 ಹೆಚ್ಚಳ ಮಾಡಿದ್ದ ಹೀರೋ ಸಂಸ್ಥೆಯು ತದನಂತರ ಮೇ ಅವಧಿಯಲ್ಲಿ ರೂ.625, ಜೂನ್‌ನಲ್ಲಿ ರೂ 500 ಮತ್ತು ಲೈನಲ್ಲಿ ರೂ. 800 ಬೆಲೆ ಏರಿಕೆ ಮಾಡಿತ್ತು. ಇದೀಗ ಮತ್ತೊಮ್ಮೆ ಬೆಲೆ ಏರಿಕೆ ಮಾಡಿದ್ದು, ಪ್ರತಿ ಬೈಕ್ ಮೇಲೂ ಎಕ್ಸ್‌ಶೋರೂಂ ಪ್ರಕಾರ ರೂ. 900 ಬೆಲೆ ಹೆಚ್ಚಳ ಮಾಡಿದೆ.

ಹೀರೋ ಸಂಸ್ಥೆಯು ಹೆಚ್ಚಳ ಮಾಡಿರುವ ಬೆಲೆಗಳು ಎಕ್ಸ್‌ಶೋರೂಂ ಬೆಲೆಗಳಾಗಿದ್ದು, ಇದು ಆನ್‌ರೋಡ್ ಬೆಲೆಗಳಿಗೆ ಬಂದಾಗ ಮತ್ತಷ್ಟು ಹೆಚ್ಚಳವಾಗುತ್ತೆ. ಹೀಗಾಗಿ ಬೈಕ್ ಒಂದರ ಬೆಲೆಯನ್ನು ಕಳೆದ ವರ್ಷದ ಅಕ್ಟೋಬರ್-ನವೆಂಬರ್ ಬೆಲೆಗಳಿಗೆ ಹೊಲಿಕೆ ಮಾಡಿದಲ್ಲಿ ಕನಿಷ್ಠ ಅಂದ್ರು ರೂ. ಮೂರುವರೆಯಿಂದ ಐದು ಸಾವಿರ ಬೆಲೆ ಹೆಚ್ಚಳವಾಗಿವೆ.

ಪ್ರಸ್ತುತ ಹೀರೋ ಮೊಟೊಕಾರ್ಪ್ ಸಂಸ್ಥೆಯು, ಪ್ರವೇಶ ಮಟ್ಟದ ಹೆಚ್ಎಫ್ ಡಿಲಕ್ಸ್, ಪ್ಲೆಷರ್ ಮತ್ತು ಹೊಸ ಶ್ರೇಣಿಯ ಪ್ಯಾಶನ್ ಪ್ರೊ, ಪ್ಯಾಶನ್ ಎಕ್ಸ್‌ಪ್ರೊ ಮತ್ತು ಸೂಪರ್ ಸ್ಪ್ಲೆಂಡರ್‌ನಂತಹ ಪ್ರಯಾಣಿಕ ಮೋಟಾರ್ ಸೈಕಲ್‌ಗಳನ್ನು ಸಹ ಮಾರಾಟ ಮಾಡುತ್ತಿದ್ದು, ಎಲ್ಲಾ ಮೂರು ಪ್ರಯಾಣಿಕ ದ್ವಿಚಕ್ರ ವಾಹನಗಳೂ ಕೂಡಾ ಅತ್ಯಾಕರ್ಷಕ ವೈಶಿಷ್ಟ್ಯಗಳು ಮತ್ತು ವಿನ್ಯಾಸ ಅಂಶಗಳನ್ನು ಪಡೆದುಕೊಂಡಿವೆ.

ಮೇಲೆ ಹೇಳಿದ ಹಾಗೆ ಹೀರೊ ಮೊಟೊಕಾರ್ಪ್ ಕಂಪನಿಯ ಹೊಸ ಪ್ಯಾಶನ್ ಪ್ರೊ, ಎಕ್ಸ್‌ಪ್ರೊ ಮತ್ತು ಸೂಪರ್ ಸ್ಪ್ಲೆಂಡರ್ ವಾಹನಗಳ ಹೊಸ ಆವೃತಿಗಳನ್ನು ಸಹ ಬಿಡುಗಡೆ ಮಾಡಿದ್ದು, ಬೆಲೆ ಹೆಚ್ಚಳದಿಂದ ಬೈಕ್ ಮಾರಾಟ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎಂಬುವುದೇ ಸದ್ಯದ ಪ್ರಶ್ನೆ.

ಆದ್ರೆ, ಕಮ್ಯುಟರ್ ಬೈಕ್ ವಿಭಾಗದದಲ್ಲಿ ತನ್ನದೇ ಜನಪ್ರಿಯತೆ ಹೊಂದಿರುವ ಹೀರೋ ಸಂಸ್ಥೆಯು ಬೆಲೆ ಹೆಚ್ಚಳದಿಂದ ಯಾವುದೇ ಪರಿಣಾಮ ಬೀರದು ಎಂಬ ವಿಶ್ವಾಸದಲ್ಲಿದ್ದು, ಹೀರೋ ಮಾದರಿಯಲ್ಲೇ ಇತರೆ ಬೈಕ್ ಉತ್ಪಾದನಾ ಸಂಸ್ಥೆಗಳು ಸಹ ಬೆಲೆ ಏರಿಕೆ ಮಾಡಲಿವೆ ಎನ್ನಲಾಗುತ್ತಿದೆ.

ಇದರಿಂದಾಗಿ ಬೆಲೆ ಹೆಚ್ಚಳವು ಬೈಕ್ ಮಾರಾಟ ಮೇಲೆ ಯಾವುದೇ ಪರಿಣಾಮ ಬೀರದು ಎನ್ನುವ ವಿಶ್ವಾಸದಲ್ಲಿರುವ ಹೀರೋ ಸಂಸ್ಥೆಯು ಮುಂದಿನ ದಿನಗಳಲ್ಲಿ ಬಹುನೀರಿಕ್ಷಿತ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್, ಎಕ್ಸ್‌ಪಲ್ಸ್ 200 ಬೈಕ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿವೆ.

ಇದರ ಜೊತೆ ಸುಪ್ರೀಂಕೋರ್ಟ್ ಆದೇಶದಂತೆ ಹೊಸ ಬೈಕ್ ಖರೀದಿ ವೇಳೆ 5 ವರ್ಷದ ಥರ್ಡ್ ಪಾರ್ಟಿ ವಿಮೆಯನ್ನು ಹೊಂದಿರಬೇಕಾದ ನಿಯಮವು ಸಹ ಬೈಕ್‌ಗಳ ಬೆಲೆಯಲ್ಲಿ ಭಾರೀ ಬದಲಾಣೆಯಾಗಿದ್ದು, ಹೀರೋ ಸಂಸ್ಥೆಯು ಮಾಡಿರುವ ಬೆಲೆ ಹೆಚ್ಚಳಕ್ಕೂ ವಿಮಾ ಮೊತ್ತಕ್ಕೂ ಯಾವುದೇ ಸಂಬಂಧವಿಲ್ಲ ಎನ್ನಬಹುದು.

ಆದರೂ ಬೈಕ್ ಸವಾರರಿಗೆ ಆಗಾಗಲೇ ಬೆಲೆ ಹೆಚ್ಚಳ ಮಾಡುವ ಮೂಲಕ ಶಾಕ್ ನೀಡುತ್ತಿರುವ ಹೀರೋ ಸಂಸ್ಥೆಯು ಬೀಡಿಭಾಗಗಳ ಖರ್ಚು ಮತ್ತು ಸರಕು ಸಾಗಾಟ ವೆಚ್ಚವನ್ನು ತಗ್ಗಿಸಲು ಬೆಲೆ ಏರಿಕೆಯ ಮೊರೆ ಹೋಗಿದ್ದು, ಅಕ್ಟೋಬರ್ 3ರಿಂದಲೇ ಹೊಸ ಬೆಲೆಗಳು ಅನ್ವಯವಾಗಲಿವೆ.
ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿರುವ ಹೀರೋ ಸಂಸ್ಥೆಯ ಬಹುನೀರಿಕ್ಷಿತ ಎಕ್ಸ್‌ಪಲ್ಸ್ 200 ಬೈಕ್‌ಗಳ ಫೋಟೋ ಗ್ಯಾಲರಿ.


Click it and Unblock the Notifications