ಎರಡು ಹೊಸ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳನ್ನು ಪರಿಚಯಿಸಲಿದೆ ಹೀರೋ ಮೋಟೊಕಾರ್ಪ್..

ಪ್ರಪಂಚದಲ್ಲಿನ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಹೀರೋ ಮೋಟೊಕಾರ್ಪ್ ಭಾರತದ ಮಾರುಕಟ್ಟೆಗೆ ಎಕ್ಸ್ಟೀಮ್ 200ಆರ್ ಪ್ರೀಮಿಯಂ ಮೋಟಾರ್‍‍‍ಸೈಕಲ್‍ ಅನ್ನು ಪರಿಚಯಿಸಲ್ಲು ಸಜ್ಜುಗೊಳ್ಳುತ್ತಿದೆ.

By Rahul Ts

ಪ್ರಪಂಚದಲ್ಲಿನ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಹೀರೋ ಮೋಟೊಕಾರ್ಪ್ ಭಾರತದ ಮಾರುಕಟ್ಟೆಗೆ ಎಕ್ಸ್ಟೀಮ್ 200ಆರ್ ಪ್ರೀಮಿಯಂ ಮೋಟಾರ್‍‍‍ಸೈಕಲ್‍ ಅನ್ನು ಪರಿಚಯಿಸಲು ಸಜ್ಜುಗೊಳ್ಳುತ್ತಿದ್ದು, ಇದೀಗ ಮಾಹಿತಿಗಳ ಪ್ರಕಾರ ಸಂಸ್ಥೆಯು ಎಕ್ಸ್‌ಟ್ರಿಮ್ 200ಆರ್ ಮತ್ತು ಎಕ್ಸ್‌ಪಲ್ಸ್ 200 ಬೈಕ್‍‍ಗಳನ್ನು ಹೊರತು ಪಡಿಸಿ ಮತ್ತೆರಡು ಹೊಸ ಪ್ರೀಮಿಯಂ ಮೋಟರ್‍‍ಸೈಕಲ್‍‍ಗಳನ್ನು ಪರಿಚಯಿಸಲಿದೆ.

ಎರಡು ಹೊಸ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳನ್ನು ಪರಿಚಯಿಸಲಿದೆ ಹೀರೋ ಮೋಟೊಕಾರ್ಪ್..

ಹೀರೋ ಮೋಟೊಕಾರ್ಪ್ ಮಾರುಕಟ್ಟೆಗೆ ಪರಿಚಯಿಸಲಿರುವ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳು ಎಕ್ಸ್‌ಟ್ರಿಮ್ 200ಆರ್ ಮತ್ತು ಎಕ್ಸ್‌ಪಲ್ಸ್ 200 ಬೈಕ್‍‍ಗಳ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಿದೆ ಎನ್ನಲಾಗಿದ್ದು, ಹೊಸ ಬೈಕ್‍‍ಗಳು 200ಸಿಸಿ ಎಂಜಿನ್ ಅನ್ನು ಹೊಂಡಿರಲಿದೆ.

ಎರಡು ಹೊಸ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳನ್ನು ಪರಿಚಯಿಸಲಿದೆ ಹೀರೋ ಮೋಟೊಕಾರ್ಪ್..

ಹೊಸ ಬೈಕ್‍‍ಗಳು ಪಡೆಯಲಿರುವ 200 ಎಂಜಿನ್ 18ಬಿಹೆಚ್‍‍ಪಿ ಮತ್ತು 17ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರಲಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಎರಡು ಹೊಸ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳನ್ನು ಪರಿಚಯಿಸಲಿದೆ ಹೀರೋ ಮೋಟೊಕಾರ್ಪ್..

ಹೀರೋ ಮೋಟೊಕಾರ್ಪ್ ಸಂಸ್ಥೆಯು ಈಗಾಗಲೆ ಎಕ್ಸ್‌ಟ್ರಿಮ್ 200ಆರ್ ಮತ್ತು ಎಕ್ಸ್‌ಪಲ್ಸ್ 200 ಬೈಕ್‍‍ಗಳನ್ನು ಬಹಿರಂಗಪಡಿಸಿದ್ದು, ಎರಡು ಬೈಕ್‍‍ಗಳನ್ನು ಸಿಂಗಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಇನು ಬಿಡುಗಡೆಗೊಳ್ಳುವ ಎರಡು ಬೈಕ್‍‍ಗಳಲ್ಲು ಸಿಂಗಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಿದೆ.

ಎರಡು ಹೊಸ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳನ್ನು ಪರಿಚಯಿಸಲಿದೆ ಹೀರೋ ಮೋಟೊಕಾರ್ಪ್..

ಸಂಸ್ಥೆಯು ಬಿಡುಗಡೆಗೊಳಿಸಲಿರುವ ಎರಡು ಬೈಕ್‍‍ಗಳಲ್ಲಿ ಒಂದು ಎಕ್ಸ್‌ಟ್ರಿಮ್ 200ಆರ್ ಬೈಕಿನ ಮತ್ತೊಂದು ವೇರಿಯಂಟ್ ಎಂದು ಊಹಿಸಲಾಗಿದ್ದು, ಮತ್ತೊಂದು ಬೈಕ್ ಬಜಾಜ್ ಪಲ್ಸರ್ ಆರ್‍ಎಸ್200 ಬೈಕಿಗೆ ಪೈಪೋಟಿ ನೀಡಲು ಫುಲ್ಲಿ ಫೈರ್‍‍ಡ್ ಮೋಟಾರ್‍‍ಸೈಕಲ್ ಅನ್ನು ಪರಿಚಯಿಸಲಿದೆ.

ಎರಡು ಹೊಸ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳನ್ನು ಪರಿಚಯಿಸಲಿದೆ ಹೀರೋ ಮೋಟೊಕಾರ್ಪ್..

ಹೀರೋ ಮೋಟೊಕಾರ್ಪ್ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸಲು ತಮ್ಮ ಹೊಸ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳನ್ನು ಪರಿಚಯಿಸುವ ಉತ್ಸಾಹದಲಿದ್ದು, ಸಂಸ್ಥೆಯು ಎಕ್ಸ್‌ಟ್ರಿಮ್ 200ಆರ್ ಬೈಕ್ ಅನ್ನು ದೇಶದಲ್ಲಿನ ಪ್ರೀಮಿಯಂ ಬೈಕ್ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯುವುದನ್ನು ಗುರಿಯಾಗಿಟ್ಟುಕೊಂಡಿದೆ.

ಎರಡು ಹೊಸ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳನ್ನು ಪರಿಚಯಿಸಲಿದೆ ಹೀರೋ ಮೋಟೊಕಾರ್ಪ್..

ಹೀರೋ ಮೋಟೊಕಾರ್ಪ್ ತಮ್ಮ ಸ್ಪ್ಲೆಂಡರ್, ಪ್ಯಾಶನ್ ಮತ್ತು ಡಾವ್ನ್ ಬೈಕ್‍‍ಗಳಿಂದ ಎಂಟ್ರಿ ಲೆವೆಲ್ ಬೈಕ್ ಸರಣಿಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಇವೆಲ್ಲ ಬೈಕ್‍‍ಗಳು 100-110ಸಿಸಿ ಸೆಗ್ಮೆಂಟ್‍‍ನಲ್ಲಿ ಮಾರಾಟಗೊಳ್ಳುತ್ತಿದೆ.

ಎರಡು ಹೊಸ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳನ್ನು ಪರಿಚಯಿಸಲಿದೆ ಹೀರೋ ಮೋಟೊಕಾರ್ಪ್..

ಆದರೆ ಇದೀಗ ಹೀರೋ ಮೋಟೊಕಾರ್ಪ್ ಸಂಸ್ಥೆಯು ಎಕ್ಸ್‌ಟ್ರಿಮ್ 200ಆರ್ ಬೈಕ್‍‍‍ನ ಬಿಡುಗಡೆಯೊಂದಿಗೆ ಮಾರುಕಟ್ಟೆಯಲ್ಲಿ ಯಾವ ರೀತಿಯ ಹವಾ ಎಬ್ಬಿಸಲಿದೆ ಎಂದು ಕಾಯ್ದು ನೋಡಬೇಕಿದೆ. ಇನ್ನು ಸಂಸ್ಥೆಯು ಪರಿಚಯಿಸಲಿರುವ ಎರಡು ಹೊಸ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳು ಮುಂದಿನ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಎರಡು ಹೊಸ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳನ್ನು ಪರಿಚಯಿಸಲಿದೆ ಹೀರೋ ಮೋಟೊಕಾರ್ಪ್..

ಹೀರೊ ಮೋಟೊಕಾರ್ಪ್ ತಮ್ಮ ಎಕ್ಸ್‌ಟ್ರಿಮ್ 200ಆರ್ ಬೈಕ್ ಅನ್ನು ಪ್ರೀಮಿಯಂ ಬೈಕ್ ಸರಣಿಯಲ್ಲಿ ಬಿಡುಗಡೆಗಿಳಿಸಲು ಸಜ್ಜುಗೊಂಡಿದ್ದು, ಜೊತೆಗೆ ಇನ್ನೆರಡು ಹೊಸ ಪ್ರೀಮಿಯಂ ಮೋಟಾರ್‍‍ಸೈಕಲ್‍‍ಗಳನ್ನು ಪರಿಚಯಿಸಲಿವೆ. ಹೀರೋ ಸಂಸ್ಥೆಯು ಮಾರುಕಟ್ಟೆಯಲ್ಲಿ ಸುಧಾರಿತ ಬೆಲೆಯಲ್ಲಿ ಬೈಕ್‍‍ಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಪ್ರೀಮಿಯಂ ಬೈಕ್ ಸರಣಿಯಲ್ಲಿ ದೂಳೆಬ್ಬಿಸಲಿದೆ.

Article Published On: Thursday, May 24, 2018, 11:29 [IST]
English summary
Hero MotoCorp To Introduce Two New Premium Motorcycles.
Read more on hero motocorp
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+