ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೀರೋ ಸ್ಪ್ಲೆಂಡರ್ ಬೈಕ್

ಹೀರೋ ಮೋಟೋಕಾರ್ಪ್ ಸಂಸ್ಥೆಯು ತಮ್ಮ ಸ್ಪ್ಲೆಂಡರ್ ಮೋಟಾರ್‍‍ಸೈಕಲ್ ಮಾರಾಟದಲ್ಲಿ ಹೊಸ ದಾಖಲೆಯನ್ನು ಸೃಷ್ಠಿಸಿದೆ. ಹೀರೋ ಸ್ಪ್ಲೆಂಡರ್ ಕೇವಲ ಒಂದು ತಿಂಗಳ ಅವದಿಯಲ್ಲಿ ಸುಮಾರು 7.50 ಲಕ್ಷ ಯೂನಿಟ್ ಬೈಕ್‍ಗಳು ಮಾರಾಟ ಮಾಡಿ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಮೋಟಾರ್‍‍‍ಸೈಕಲ್ ಎಂಬ ಹೆಸರಿಗೆ ಪಾತ್ರವಾಗಿದೆ.

ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೀರೋ ಸ್ಪ್ಲೆಂಡರ್ ಬೈಕ್

ಹೀರೋ ಮೋಟೋಕಾರ್ಪ್ ಸಂಸ್ಥೆಯು ಪ್ರಪಂಚದಲ್ಲಿ ಕಮ್ಮುಟರ್ ಬೈಕ್‍ಗಳ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಕೇವಲ ಭಾರತದಲ್ಲಿಯೆ ಸುಮಾರು ಶೇಕಡ 46ಕ್ಕು ಹೆಚ್ಚು ಬೈಕ್‍ಗಳನ್ನು ಮಾರಾಟ ಮಾಡಿದೆ ಎಂದರೆ ನಂಬಲೇಬೇಕು.

ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೀರೋ ಸ್ಪ್ಲೆಂಡರ್ ಬೈಕ್

ಭಾರತದಲ್ಲಿ ವಿವಿದ ಬಗೆಯ ದ್ವಿಚಕ್ರ ವಾಹನಗಳ ಬೇಡಿಕೆಯು ಹೆಚ್ಚಿದ್ದು, ಹಲವಾರು ವಿದೇಶಿ ವಾಹನ ತಯಾರಕ ಸಂಸ್ಥೆಗಳು ಹೆಚ್ಚಿನ ಮೊತ್ತದ ಬಂಡವಾಳವನ್ನು ಹೂಡಿದ್ದಾರೆ. ಈ ನಿಟ್ಟಿನಲ್ಲಿ ಹೋಂಡಾ ಟೂ ವ್ಹೀಲರ್ಸ್, ಸುಜುಕಿ ಮೋಟಾರ್‍‍ಸೈಕಲ್ಸ್ ಮತ್ತು ಯಮಹಾ ಸಂಸ್ಥೆಗಳು ಕೂಡಾ ಪಟ್ಟಿಯಲ್ಲಿವೆ.

ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೀರೋ ಸ್ಪ್ಲೆಂಡರ್ ಬೈಕ್

ಸುಮಾರು 7 ಲಕ್ಷಕ್ಕು ಅಧಿಕವಾಗಿ ಮಾರಾಟಗೊಂಡ ಹೀರೋ ಸ್ಪ್ಲೆಂಡರ್ ಬೈಕ್‍ಗಳು ಸತತ ಐದನೆಯ ಬಾರಿ ಈ ದಾಖಲೆಯನ್ನು ಮಾಡಿದೆ. 2018ರ ಏಪ್ರಿಲ್‍ನಿಂದ ಸೆಪ್ಟೆಂಬರ್‍ ತಿಂಗಳ ವರೆಗು ಹೀರೋ ಮೋಟೋಕಾರ್ಪ್ ಸಂಸ್ಥೆಯು 42 ಲಕ್ಷದ ವಾಹನಗಳನ್ನು ಮಾರಾಟ ಮಾಡಿದ್ದು, ಈ ಹಬ್ಬದ ಋತುವಿನಲ್ಲಿ ಇನ್ನು ಹೆಚ್ಚಿನ ಮಾರಟವನ್ನು ಮಾಡುವ ತವಕದಲ್ಲಿದ್ದಾರೆ.

ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೀರೋ ಸ್ಪ್ಲೆಂಡರ್ ಬೈಕ್

ಸ್ಪ್ಲೆಂಡರ್ ಬೈಕ್ ಮಾತ್ರವಲ್ಲದೇ ಹೀರೋ ಮೋಟೋಕಾರ್ಪ್ ಸಂಸ್ಥೆಯ ಪ್ಯಾಷನ್ ಬೈಕ್‍ಗಳು ಕೂಡಾ ಮಾರುಕಟ್ಟೆಯಲ್ಲಿ ಉತ್ತಮವಾದ ಮಾರಾಟವಾನು ಕಾಣುತ್ತಿದೆ. ಹೀರೋ ಮೋಟೋಕಾರ್ಪ್ ಸಂಸ್ಥೆಯು ಕೇವಲ ಮೋಟಾರ್‍‍ಬೈಕ್‍ಗಳಲ್ಲಿ ಮಾತ್ರವಲ್ಲದೇ, ಸ್ಕೂಟರ್‍‍ಗಳಲ್ಲಿಯು ಅಧಿಕವಾದ ಮಾರಾಟವನ್ನು ಕಾಣುತ್ತಿದೆ.

ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೀರೋ ಸ್ಪ್ಲೆಂಡರ್ ಬೈಕ್

ಸಂಸ್ಥೆಯ ಸ್ಕೂಟರ್‍‍ಗಳಾದ ಹೀರೋಡ್ಯುಯೆಟ್ ಮತ್ತು ಮಯೆಸ್ಟ್ರೋ ಎಡ್ಜ್ ಸ್ಕೂಟರ್‍‍ಗಳು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇತ್ತೀಚೆಗಷ್ಟೆ ಸಂಸ್ಥೆಯು 200ಸಿಸಿ ಮೋಟಾರ್‍‍ಸೈಕಲ್‍ಗಳ ಸರಣಿಯಲ್ಲಿ ತಮ್ಮ ಹೀರೋ ಎಕ್ಸ್ಟ್ರೀಮ್ ಬೈಕ್ ಅನುನ್ ಬಿಡುಗಡೆಗೊಳಿಸಿದ್ದಾರೆ.

ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೀರೋ ಸ್ಪ್ಲೆಂಡರ್ ಬೈಕ್

ಹೀರೋ ಮೋಟೋಕಾರ್ಪ್ ಸಂಸ್ಥೆಯ ಸ್ಪ್ಲೆಂಡರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 20ವರ್ಷಗಳಿಂದ ಇದೆ. ಹಲವಾರು ಬಾರಿ ಉತ್ತಮವಾಗಿ ಮಾರಾಟಗೊಂಡ ದ್ವಿಚಕ್ರ ವಾಹನಗಳ ಪ್ರಶಸ್ತಿಯನ್ನು ಪಡೆದಿದೆ ಈ ಸ್ಕೂಟರ್, ಆದರೆ ಇದೀಗ ಈ ವರ್ಷ ಈ ಪ್ರಶಸ್ತಿಯನ್ನು ಹೋಂಡಾ ಆಕ್ಟೀವಾ ತಮ್ಮದಾಗಿಸಿಕೊಂಡಿದೆ. ಹೀರೋ ಸ್ಪ್ಲೆಂಡರ್ ಪ್ರಸ್ತುತ ಪ್ಲಸ್, ಪ್ಲಸ್ ಐ3ಎಸ್ ಮತ್ತು ಐಸ್ಮಾರ್ಟ್ 110 ಎಂಬ ಮೂರು ವೇರಿಯಂಟ್‍ಗಳಲ್ಲಿ ಮಾರಾಟಗೊಳ್ಳುತ್ತಿದೆ.

ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೀರೋ ಸ್ಪ್ಲೆಂಡರ್ ಬೈಕ್

ಎಂಜಿನ್ ವಿಚಾರಕ್ಕೆ ಬಂದರೆ ಹೀರೋ ಸ್ಪ್ಲೆಂಡರ್ ಬೈಕ್ 97.2ಸಿಸಿ ಏರ್ ಕೂಲ್ಡ್, ಸಿಂಗಲ್ ಎಂಜಿನ್ ಸಹಾಯದಿಂದ 8.2ಬಿಹೆಚ್‍ಪಿ ಮತ್ತು 8.05ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡುದ್ಕೊಂಡಿದೆ.

ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೀರೋ ಸ್ಪ್ಲೆಂಡರ್ ಬೈಕ್

ಇನ್ನು ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ 109.15ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 9.3ಬಿಹೆಚ್‍ಪಿ ಮತ್ತು 9ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಎರಡೂ ಎಂಜಿನ್‍ಗಳನ್ನು 4 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

More from DriveSpark

Article Published On: Tuesday, October 16, 2018, 15:24 [IST]
English summary
Hero Splendor Makes New Sales World Record: Sells 7.69 Lakh Units In One Month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+