2018ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆಯೆಂತೆ ಹೀರೋ ಎಕ್ಸ್‌ಪಲ್ಸ್ 200

By Praveen Sannamani

ದೇಶಿಯ ಮಾರುಕಟ್ಟೆಯ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ತನ್ನ ಮೊದಲ ಅಡ್ವೆಂಚರ್ ಬೈಕ್ ಮಾದರಿಯಾದ ಎಕ್ಸ್‌ಪಲ್ಸ್ 200 ಬೈಕ್ ಅನ್ನು ಇದೇ ವರ್ಷಾಂತ್ಯಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಬೈಕಿನ ಕುರಿತಾದ ತಾಂತ್ರಿಕ ಅಂಶಗಳ ಮಾಹಿತಿ ಇಲ್ಲಿದೆ ನೋಡಿ..

2018ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆಯೆಂತೆ ಹೀರೋ ಎಕ್ಸ್‌ಪಲ್ಸ್ 200

ಇಮ್‌ಪಲ್ಸ್ 150 ಬೈಕ್ ಪ್ರೇರಣೆಯೊಂದಿಗೆ ಸಿದ್ದವಾಗಿರುವ ಎಕ್ಸ್‌ಪಲ್ಸ್ 200 ಬೈಕ್‌ಗಳು ಆಪ್ ರೋಡ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿದ್ದು, ಹೊಸ ಬೈಕಿನ ಬೆಲೆಗಳನ್ನ ಹೊರತು ಪಡಿಸಿ ಬಹುತೇಕ ತಾಂತ್ರಿಕ ಅಂಶಗಳ ಕುರಿತಾದ ಮಾಹಿತಿಯನ್ನ ಹೀರೋ ಸಂಸ್ಥೆಯು ಈಗಾಗಲೇ ಬಿಟ್ಟುಕೊಟ್ಟಿದೆ. ಹೀಗಾಗಿ ಬೈಕಿನ ಬೆಲೆಗಳ ಮೇಲೆ ಎಕ್ಸ್‌ಪಲ್ಸ್ 200 ಬೈಕಿನ ಜನಪ್ರಿಯತೆ ನಿರ್ಧಾರವಾಗಲಿದೆ ಎನ್ನಬಹುದು.

2018ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆಯೆಂತೆ ಹೀರೋ ಎಕ್ಸ್‌ಪಲ್ಸ್ 200

ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಹೊರತುಪಡಿಸಿ ಯಾವುದೇ ಬೈಕ್ ಮಾದಿರಯು ಕಡಿಮೆ ಬೆಲೆಯಲ್ಲಿ ಲಭ್ಯವಿಲ್ಲದ ಹಿನ್ನೆಲೆ ಹೀರೋ ಎಕ್ಸ್‌ಪಲ್ಸ್ 200 ಭಾರೀ ಜನಪ್ರಿಯತೆ ಪಡೆಯಲಿದ್ದು, ಬೈಕಿನ ಬೆಲೆಯನ್ನು 1 ಲಕ್ಷದೊಳಗೆ ನಿರ್ಧರಿಸುವ ಬಗ್ಗೆ ಇರಾದೆಯಲ್ಲಿದೆ.

2018ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆಯೆಂತೆ ಹೀರೋ ಎಕ್ಸ್‌ಪಲ್ಸ್ 200

ಒಂದು ವೇಳೆ ಹೀರೋ ಮೋಟಾರ್ ಕಾರ್ಪ್ ಸಂಸ್ಥೆಯು ಹೊಸ ಬೈಕಿನ ಬೆಲೆಯನ್ನು ಒಂದು ಲಕ್ಷದೊಳಗೆ ನಿರ್ಧರಿಸಿದ್ದೇ ಆದಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿಗೂ ತೀವ್ರ ಪೈಪೋಟಿ ನೀಡಲಿರುವ ಎಕ್ಸ್‌ಪಲ್ಸ್ 200 ಬೈಕ್‌ಗಳು ಅಡ್ವೆಂಚರ್ ಪ್ರಿಯರನ್ನು ತನ್ನತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

2018ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆಯೆಂತೆ ಹೀರೋ ಎಕ್ಸ್‌ಪಲ್ಸ್ 200

ಇನ್ನು ಹೀರೋ ಎಕ್ಸ್‌ಪಲ್ಸ್ 200 ಬಗೆಗೆ ಹೇಳುವುದಾದರೇ, ಫುಲ್ ಎಲ್ಇಡಿ ಹೆಡ್ ಲೈಟ್, ಲಗೆಜ್ ರಾಕ್, ಧೀರ್ಘ ಕಾಲದ ಸವಾರಿಗೆ ಅನೂಕಲವಾಗುವಂತಹ ನಾಕಲ್ ಗಾರ್ಡ್ಸ್ ಹೊಂದಿದ್ದು, ವಿಂಡ್ ಶೀಲ್ಡ್ ಅನ್ನು ಬಳಸಲಾಗಿದೆ. ಜೊತೆಗೆ ಎಕ್ಸ್‌ಪಲ್ಸ್ ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಮ್ ಪಡೆದ ಮೊದಲ ಬೈಕ್ ಇದಾಗಿದೆ.

2018ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆಯೆಂತೆ ಹೀರೋ ಎಕ್ಸ್‌ಪಲ್ಸ್ 200

ಬೈಕಿನಲ್ಲಿ ಹೆಚ್ಚಿನ ಸಾಮರ್ಥ್ಯ ಮತ್ತು ಚುರುಕುತನವನ್ನು ನೀಡುವ ಹೆಚ್ಚಿನ ಟೆನ್ಸೈಲ್ ಡೈಮೆಂಡ್ ಫ್ರೇಮ್ ಅನ್ನು ಆಧರಿಸಿದ್ದು, ಈ ಬೈಕಿನ ಎಂಜಿನ್ ಮತ್ತು ಇಂಧನ ಕಾರ್ಯಕ್ಷಮತೆ ಕಾಪಾಡಲು ಅಲ್ಯುಮಿನಿಯಂ ಸ್ಕಿಡ್ ಪ್ಲೇಟ್ ಅನ್ನು ಕೂಡ ಬಳಸಲಾಗಿದೆ. ಇದು ಆಫ್ ಸ್ವೆಫ್ಟ್ ಎಕ್ಸಾಸ್ಟ್ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ತಗ್ಗಿಸಲು ಸಹಕಾರಿಯಾಗಲಿದೆ.

2018ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆಯೆಂತೆ ಹೀರೋ ಎಕ್ಸ್‌ಪಲ್ಸ್ 200

ಎಕ್ಸ್‌ಪಲ್ಸ್ 200 ಎಂಜಿನ್ ಸಾಮರ್ಥ್ಯ

ಹೊಸ ಬೈಕಿನಲ್ಲಿ 200-ಸಿಸಿ ಏರ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಒದಗಿಸಲಾಗಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಸೇರಿಸಲಾಗಿದೆ. ಇದು 18.1-ಬಿಹೆಚ್ ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಒಟ್ಟಾರೆ ಈ ಬೈಕಿನ ಡಿಸೈನ್ ಸರಳವಾಗಿದ್ದು, ಧೀರ್ಘ ಪ್ರಮಾಣದ ಸಸ್ಪೆಷನ್ ಸೆಟಪ್ ಅನ್ನು ಪಡೆದಿದೆ.

2018ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆಯೆಂತೆ ಹೀರೋ ಎಕ್ಸ್‌ಪಲ್ಸ್ 200

ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಸಸ್ಪೆಷನ್ ಡ್ಯೂಟಿಗೆ 190-ಎಮ್ಎಮ್ ಪ್ರಮಾಣ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು 170-ಎಂಎಂ ಪ್ರಮಾಣದ ಹತ್ತು ಹಂತದ ಹೊಂದಾಣಿಕೆಯ ಗ್ಯಾಸ್-ಚಾರ್ಜ್ಡ್ ಮೋನೋಶಾಕ್ ಸಸ್ಪೆಷನ್ ಜೋಡಣೆ ಹೊಂದಿದೆ.

2018ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆಯೆಂತೆ ಹೀರೋ ಎಕ್ಸ್‌ಪಲ್ಸ್ 200

ಇದಲ್ಲದೇ ಈ ಬೈಕಿನ ಮುಂಭಾಗದಲ್ಲಿ 21 ಇಂಚಿನ ಚಕ್ರಗಳನ್ನು ಒದಗಿಸಲಾಗಿದ್ದು, ಮುಂಭಾಗದ 18 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಆಪ್ ರೋಡಿಂಗ್‌ಗೆ ಸಹಕಾರಿಯಾಗಲು 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.

2018ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆಯೆಂತೆ ಹೀರೋ ಎಕ್ಸ್‌ಪಲ್ಸ್ 200

ಒಟ್ಟಿನಲ್ಲಿ ಎಕ್ಸ್‌ಪಲ್ಸ್ 200 ಬೈಕ್ ಮಾದರಿಗಳು ಥ್ರಿಲ್ಲಿಂಗ್ ರೈಡಿಂಗ್ ಅನುಭವಕ್ಕೆ ಹೇಳಿ ಮಾಡಿಸಿದ ಬೈಕ್ ಆವೃತ್ತಿಯಾಗಿದ್ದು, ದುಬಾರಿಯ ಬೆಲೆಯ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Article Published On: Thursday, August 23, 2018, 10:55 [IST]
English summary
Hero XPulse 200 India Launch Details Revealed; The Most-Affordable ADV Motorcycle In India.
Read more on hero motocorp
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+