ಬಹಿರಂಗಗೊಂಡ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಅಧಿಕೃತ ಚಿತ್ರಗಳು..

ಪ್ರಪಂಚದ ಎರಡನೆಯ ಅತಿದೊಡ್ಡ ದ್ವಿಚಕರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್ ತನ್ನ ಹೊಸ ಎಕ್ಸ್‌ಪಲ್ಸ್ 200 ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸುವ ಯೋಜನೆಯಲಿದೆ.

By Rahul Ts

ಪ್ರಪಂಚದ ಎರಡನೆಯ ಅತಿದೊಡ್ಡ ದ್ವಿಚಕರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್ ತನ್ನ ಹೊಸ ಎಕ್ಸ್‌ಪಲ್ಸ್ 200 ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಈ ಬೈಕ್ ಹೀರೋ ಸಂಸ್ಥೆಯ 1500ಸಿಸಿ ಇಮ್‍‍ಪಲ್ಸ್ ಬೈಕಿನ ಸ್ಥಾನವನ್ನು ಭರ್ತಿ ಮಾಡಲಿದೆ.

ಬಹಿರಂಗಗೊಂಡ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಅಧಿಕೃತ ಚಿತ್ರಗಳು..

ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಪರಿಕಲ್ಪನೆಯನ್ನು ಮೊದಲಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಷಿಸಲಾಗಿದ್ದು, ಇದೀಗ ಬೈಕಿನ ಅಧಿಕೃತ ಚಿತ್ರಗಳು ಬಹಿರಂಗಗೊಂಡಿದೆ. ಮೋಟರ್‍‍ಸೈಕಲ್ ದೊಡ್ಡ ಮುಂಭಾಗದ ಚಕ್ರದೊಂದಿಗೆ ಎತ್ತರದ ನಿಲುವನ್ನು ಹೊಂದಿದ್ದು ಜೊತೆಗೆ ಕ್ಲಾಸಿಕ್ ರೌಂಡ್ ಎಲ್ಇಡಿ ಡಿಆರ್‍ಎಲ್ ಹೊಂದಿದ ಹೆಡ್‍‍ಲ್ಯಾಂಪ್ ಅನ್ನು ಪಡೆದಿದೆ.

ಬಹಿರಂಗಗೊಂಡ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಅಧಿಕೃತ ಚಿತ್ರಗಳು..

ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಹೊರತುಪಡಿಸಿ ಯಾವುದೇ ಬೈಕ್ ಮಾದಿರಯು ಕಡಿಮೆ ಬೆಲೆಯಲ್ಲಿ ಲಭ್ಯವಿಲ್ಲದ ಹಿನ್ನೆಲೆ ಹೀರೋ ಎಕ್ಸ್‌ಪಲ್ಸ್ 200 ಭಾರೀ ಜನಪ್ರಿಯತೆ ಪಡೆಯಲಿದ್ದು, ಬೈಕಿನ ಬೆಲೆಯನ್ನು 1 ಲಕ್ಷದೊಳಗೆ ನಿರ್ಧರಿಸುವ ಬಗ್ಗೆ ಇರಾದೆಯಲ್ಲಿದೆ.

ಬಹಿರಂಗಗೊಂಡ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಅಧಿಕೃತ ಚಿತ್ರಗಳು..

ಇನ್ನು ಹೀರೋ ಎಕ್ಸ್‌ಪಲ್ಸ್ 200 ಬಗೆಗೆ ಹೇಳುವುದಾದರೇ, ಫುಲ್ ಎಲ್ಇಡಿ ಹೆಡ್ ಲೈಟ್, ಲಗೆಜ್ ರಾಕ್, ಧೀರ್ಘ ಕಾಲದ ಸವಾರಿಗೆ ಅನೂಕಲವಾಗುವಂತಹ ನಾಕಲ್ ಗಾರ್ಡ್ಸ್ ಹೊಂದಿದ್ದು, ವಿಂಡ್ ಶೀಲ್ಡ್ ಅನ್ನು ಬಳಸಲಾಗಿದೆ. ಜೊತೆಗೆ ಎಕ್ಸ್‌ಪಲ್ಸ್ ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಮ್ ಪಡೆದ ಮೊದಲ ಬೈಕ್ ಇದಾಗಿದೆ.

ಬಹಿರಂಗಗೊಂಡ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಅಧಿಕೃತ ಚಿತ್ರಗಳು..

ಬೈಕಿನಲ್ಲಿ ಹೆಚ್ಚಿನ ಸಾಮರ್ಥ್ಯ ಮತ್ತು ಚುರುಕುತನವನ್ನು ನೀಡುವ ಹೆಚ್ಚಿನ ಟೆನ್ಸೈಲ್ ಡೈಮೆಂಡ್ ಫ್ರೇಮ್ ಅನ್ನು ಆಧರಿಸಿದ್ದು, ಈ ಬೈಕಿನ ಎಂಜಿನ್ ಮತ್ತು ಇಂಧನ ಕಾರ್ಯಕ್ಷಮತೆ ಕಾಪಾಡಲು ಅಲ್ಯುಮಿನಿಯಂ ಸ್ಕಿಡ್ ಪ್ಲೇಟ್ ಅನ್ನು ಕೂಡ ಬಳಸಲಾಗಿದೆ. ಇದು ಆಫ್ ಸ್ವೆಫ್ಟ್ ಎಕ್ಸಾಸ್ಟ್ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಬಹಿರಂಗಗೊಂಡ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಅಧಿಕೃತ ಚಿತ್ರಗಳು..

ಹೊಸ ಬೈಕಿನಲ್ಲಿ 200-ಸಿಸಿ ಏರ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಒದಗಿಸಲಾಗಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಸೇರಿಸಲಾಗಿದೆ. ಇದು 18.1-ಬಿಹೆಚ್ ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಒಟ್ಟಾರೆ ಈ ಬೈಕಿನ ಡಿಸೈನ್ ಸರಳವಾಗಿದ್ದು, ಧೀರ್ಘ ಪ್ರಮಾಣದ ಸಸ್ಪೆಂಷನ್ ಸೆಟಪ್ ಅನ್ನು ಪಡೆದಿದೆ.

ಬಹಿರಂಗಗೊಂಡ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಅಧಿಕೃತ ಚಿತ್ರಗಳು..

ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಸಸ್ಪೆಷನ್ ಡ್ಯೂಟಿಗೆ 190-ಎಮ್ಎಮ್ ಪ್ರಮಾಣ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು 180-ಎಂಎಂ ಪ್ರಮಾಣದ ಹತ್ತು ಹಂತದ ಹೊಂದಾಣಿಕೆಯ ಗ್ಯಾಸ್-ಚಾರ್ಜ್ಡ್ ಮೋನೋಶಾಕ್ ಸಸ್ಪೆಷನ್ ಜೋಡಣೆ ಹೊಂದಿದೆ.

ಬಹಿರಂಗಗೊಂಡ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಅಧಿಕೃತ ಚಿತ್ರಗಳು..

ಇದಲ್ಲದೇ ಈ ಬೈಕಿನ ಮುಂಭಾಗದಲ್ಲಿ 21 ಇಂಚಿನ ಚಕ್ರಗಳನ್ನು ಒದಗಿಸಲಾಗಿದ್ದು, ಮುಂಭಾಗದ 18 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಆಪ್ ರೋಡಿಂಗ್‌ಗೆ ಸಹಕಾರಿಯಾಗಲು 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.

ಬಹಿರಂಗಗೊಂಡ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಅಧಿಕೃತ ಚಿತ್ರಗಳು..

ಪ್ರಯಾಣಿಕರ ಸುರಕ್ಷತೆಗಾಗಿ ಈ ಬೈಕಿನ ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಕೇವಲ ಸಿಂಗಲ್ ಚಾನಲ್ ಎಬಿಎಸ್ ಅನ್ನು ಪದೆದುಕೊಂಡಿದೆ. ಇದಲ್ಲದೆ ಬೈಕಿನ ಬೆಲಯನ್ನು ಕಡಿತಗೊಳಿಸಲು ಬೈಕಿನಲ್ಲಿ ಟ್ಯೂಬ್ ಟೈರ್ ಅನ್ನು ಬಳಸಲಾಗಿದ್ದು, ಹೊಸ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡಾ ಪಡೆದಿದೆ.

ಬಹಿರಂಗಗೊಂಡ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಅಧಿಕೃತ ಚಿತ್ರಗಳು..

ಒಟ್ಟಿನಲ್ಲಿ ಎಕ್ಸ್‌ಪಲ್ಸ್ 200 ಬೈಕ್ ಮಾದರಿಗಳು ಥ್ರಿಲ್ಲಿಂಗ್ ರೈಡಿಂಗ್ ಅನುಭವಕ್ಕೆ ಹೇಳಿ ಮಾಡಿಸಿದ ಬೈಕ್ ಆವೃತ್ತಿಯಾಗಿದ್ದು, ದುಬಾರಿಯ ಬೆಲೆಯ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Article Published On: Monday, June 25, 2018, 11:27 [IST]
English summary
Hero XPulse 200 Official Images Revealed.
Read more on hero motocorp
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+