ಎಕ್ಸ್‌ಪಲ್ಸ್ ಮೋಟಾರ್ ಬೈಕಿನ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಿದ ಹೀರೋ

2018ರ ಆಟೊ ಎಕ್ಸ್ ಪೋದಲ್ಲೂ ಎಕ್ಸ್ ಪಲ್ಸ್ ಅನ್ನು ಪ್ರದರ್ಶಿಸಲಿದ್ದು, ಹೊಸ ಮೋಟಾರ್ ಬೈಕಿನ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಿದೆ.

By Rahul Ts

Recommended Video

Ford Freestyle Walk-Around In 360

ದೇಶಿಯ ಮಾರುಕಟ್ಟೆಯ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೊ ಮೊಟೊಕಾರ್ಪ್ ಈ ಹಿಂದೆ 2017ರಲ್ಲಿ ಇಟಲಿಯ ಇಐಸಿಎಮ್ಎ ಆಟೋ ಎಕ್ಸ್ ಪೋದಲ್ಲಿ ತನ್ನ ಹೊಸ ಉತ್ಪನ್ನ ಎಕ್ಸ್‌ಪಲ್ಸ್ ಅನ್ನು ಅನಾವರಣಗೊಳಿಸಿತ್ತು. ಇದೀಗ ಫೆ.7 ರಿಂದ ಆರಂಭವಾಗುವ 2018ರ ಆಟೊ ಎಕ್ಸ್ ಪೋದಲ್ಲೂ ಎಕ್ಸ್ ಪಲ್ಸ್ ಅನ್ನು ಪ್ರದರ್ಶಿಸಲಿದ್ದು, ಹೊಸ ಮೋಟಾರ್ ಬೈಕಿನ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಿದೆ.

ಎಕ್ಸ್‌ಪಲ್ಸ್ ಮೋಟಾರ್ ಬೈಕಿನ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಿದ ಹೀರೋ

ಹೀರೋ ಎಕ್ಸ್ ‌ಪಲ್ಸ್ 200-ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಇಂಜಿನ್ ಹೊಂದಿದ್ದು, 18.1 ಬಿಹೆಚ್ ಪಿ ಮತ್ತು 17.1ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ. ಜೊತೆಗೆ 5-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದ್ದು, ಹೊಸದಾಗಿ ಅನಾವರಣಗೊಂಡ ಎಕ್ಸ್‌ಟ್ರಿಮ್ 200ಆರ್ ನೇಕೆಡ್ ಸ್ಟ್ರೀಟ್ ಫೈಟರ್ ನಲ್ಲೂ ಇದೇ ಮಾದರಿಯ ಎಂಜಿನ್ ಅಳವಡಿಸಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಎಕ್ಸ್‌ಪಲ್ಸ್ ಮೋಟಾರ್ ಬೈಕಿನ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಿದ ಹೀರೋ

ಆದರೇ ಹೀರೊ ಎಕ್ಸ್‌ಪಲ್ಸ್ ಮಾದರಿಯು ಹೊಸದಾಗಿ ಅನಾವರಣಗೊಂಡ ಎಕ್ಸ್‌ಟ್ರಿಮ್ 200ಆರ್ ಗಿಂತ ಹೆಚ್ಚಿನ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ವಿಶೇಷವಾಗಿ ಆಪ್ ರೋಡ್ ಪ್ರಿಯರಿಗಾಗಿ ಸಿದ್ದಗೊಳಿಸಿಲಾಗಿದೆ.

ಎಕ್ಸ್‌ಪಲ್ಸ್ ಮೋಟಾರ್ ಬೈಕಿನ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಿದ ಹೀರೋ

ಹೀರೊ ಎಕ್ಸ್ ಪಲ್ಸ್ ಮೋಟಾರ್ ಸೈಕಲ್ 150ಸಿಸಿ ಎಂಜಿನ್ ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬದಲಾಣೆ ಹುಟ್ಟುಹಾಕಲಿದೆ. ಈ ಮೂಲಕ ವೃತಾಕಾರದ ಹೆಡ್ ಲ್ಯಾಂಪ್, ಉತ್ತಮ ಇಂಧನದ ಟ್ಯಾಂಕ್, ಸ್ಪೋಕ್ ಚಕ್ರಗಳು, ಸುಧೀರ್ಘ ಪ್ರಯಾಣ ಅನಕೂಲವಾಗುವ ಸೀಟುಗಳು ಮತ್ತು ಆಧುನಿಕ ಕ್ಲಾಸಿಕ್ ಶೈಲಿ ಹೊಂದಿರಲಿವೆ.

ಎಕ್ಸ್‌ಪಲ್ಸ್ ಮೋಟಾರ್ ಬೈಕಿನ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಿದ ಹೀರೋ

2017ರ ಇಐಸಿಎಮ್ಎದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಎಕ್ಸ್ ಪಲ್ಸ್ ಬೈಕ್ ಆಫ್ ರೋಡಿಂಗ್ ಅನ್ನು ನಿರ್ವಹಿಸಲು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಫೀಚರ್ಸನ್ನು ನೀಡಲಾಗಿದ್ದು, ಸುರಕ್ಷತೆಗಾಗಿ ಮೋಟಾರ್ ಸೈಕಲ್ ಎರಡೂ ಬದಿ ಚಕ್ರಗಳಿಗೂ ಡಿಸ್ಕ್ ಬ್ರೇಕ್ ಸೌಲಭ್ಯ ಒದಗಿಸಲಾಗಿದೆ.

ಎಕ್ಸ್‌ಪಲ್ಸ್ ಮೋಟಾರ್ ಬೈಕಿನ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಿದ ಹೀರೋ

ವರ್ಷಾಂತ್ಯದ ವೇಳೆಗೆ ಹೀರೋ ಮೋಟೊಕಾರ್ಪ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಎಕ್ಸ್ ಪಲ್ಸ್ ಬೈಕ್‌ಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದ್ದು, ಎಕ್ಸ್ ಪಲ್ಸ್ ಬೈಕ್‌ಗಳು ರಾಯಲ್ ಎನ್ ಫೀಲ್ಡ್ ಜನಪ್ರಿಯ ಹಿಮಾಲಯನ್ ಬೈಕ್‌ಗಳ ಜೊತೆ ತೀವ್ರ ಪೈಪೋಟಿ ನಡೆಸುವ ತವಕದಲ್ಲಿದೆ.

ಎಕ್ಸ್‌ಪಲ್ಸ್ ಮೋಟಾರ್ ಬೈಕಿನ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಿದ ಹೀರೋ

ಬೈಕ್ ಬೆಲೆ (ಅಂದಾಜು)

ಹೊಸ ಬೈಕಿನ ಬೆಲೆಯು ರೂ. 1.15ರಿಂದ ರೂ. 1.25 ಲಕ್ಷಕ್ಕೆ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಎಕ್ಸ್‌ಪಲ್ಸ್ ಮೋಟಾರ್ ಬೈಕಿನ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಿದ ಹೀರೋ

ದ್ವಿಚಕ್ರ ವಾಹನಗಳ ಉತ್ಪಾದನಾ ವಿಭಾಗದಲ್ಲಿ ಹೀರೋ ಮೋಟೋಕಾರ್ಪ್ ತನ್ನ ಕೈಗೆಟುಕುವ ಉತ್ಪನ್ನಗಳಿಂದ ಹೆಸರುವಾಸಿಯಾಗಿದ್ದು, ಇದೀಗ ಅಡ್ವೆಂಚರ್ ವಿಭಾಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಹೀರೋ ಸಂಸ್ಥೆಯು ಎಕ್ಸ್ ಪಲ್ಸ್ ಪರಿಚಯಿಸಲು ಮುಂದಾಗಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on hero motocorp
English summary
Hero XPulse Technical Details Revealed.
Story first published: Wednesday, January 31, 2018, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X