ಎಫ್ಐ ಟೆಕ್ನಾಲಜಿಯೊಂದಿಗೆ ಬರಲಿದೆ ಹೀರೋ ಎಕ್ಸ್‌ಟ್ರಿಮ್ 200 ಆರ್..

ಪ್ರಪಂಚದ ಅತೀ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ ತಮ್ಮ ಹೊಸ ಎಕ್ಸ್‌ಟ್ರಿಮ್ 200ಆರ್ ನೇಕೆಡ್ ಸ್ಟ್ರೀಟ್ ಫೈಟರ್ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ.

By Rahul Ts

ಪ್ರಪಂಚದ ಅತೀ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟಾರ್ಸ್ ತಮ್ಮ ಹೊಸ ಎಕ್ಸ್‌ಟ್ರಿಮ್ 200ಆರ್ ನೇಕೆಡ್ ಸ್ಟ್ರೀಟ್ ಫೈಟರ್ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜುಗೊಂಡಿದ್ದು, ಮಾಹಿತಿಗಳ ಪ್ರಕಾರ ಈ ಬೈಕ್ ಫ್ಯುಯಲ್ ಇಂಜೆಕ್ಟೆಡ್ ಟೆಕ್ನಾಲಜಿಯನ್ನು ಹೊತ್ತು ಬರಲಿದೆ ಎನ್ನಲಾಗಿದೆ.

ಎಫ್ಐ ಟೆಕ್ನಾಲಜಿಯೊಂದಿಗೆ ಬರಲಿದೆ ಹೀರೋ ಎಕ್ಸ್‌ಟ್ರಿಮ್ 200 ಆರ್..

ಹೀರೋ ಮೋಟೋಕಾರ್ಪ್ ಎಕ್ಸ್‌ಟ್ರಿಮ್ 200ಆರ್ ಬೈಕ್ ಇನ್ನೆರಡು ವಾರಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಮಾಹಿತಿಗಳ ಪ್ರಕರ ಫ್ಯುಯಲ್ ಇಂಜೆಕ್ಟೆಡ್ ಟೆಕ್ನಾಲಜಿಯನ್ನು ಪಡೆದಿರುವ ಎಕ್ಸ್‌ಟ್ರಿಮ್ 200ಆರ್ ಟಾಪ್ ಎಂಡ್ ಬೈಕ್‍ ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದೆ.

ಎಫ್ಐ ಟೆಕ್ನಾಲಜಿಯೊಂದಿಗೆ ಬರಲಿದೆ ಹೀರೋ ಎಕ್ಸ್‌ಟ್ರಿಮ್ 200 ಆರ್..

ಹೀರೋ ಎಕ್ಸ್‌ಟ್ರಿಮ್ 200ಆರ್ ಮತ್ತು ಎಕ್ಸ್‌ಪಲ್ಸ್ ಎರಡೂ ಬೈಕ್‍‍ಗಳನ್ನು ಒಂದೇ ಪ್ಲಾಟ್‍‍ಫಾರ್ಮ್ ಮೇಲೆ ತಯಾರಿಸಲಾಗಿದೆ. ಆದರೆ ಎರಡೂ ಬೈಕ್‍‍ಗಳನ್ನು ತಮ್ಮ ಲಕ್ಷಣಗಳಿಗೆ ಅನುಗುಣವಾಗಿ ಟ್ಯೂನಿಂಗ್ ಮಾಡಿದ ಎಂಜಿನ್ ಅನ್ನು ಅಳವಡಿಸಲಾಗಿದೆ ಎನ್ನಲಾಗಿದೆ.

ಎಫ್ಐ ಟೆಕ್ನಾಲಜಿಯೊಂದಿಗೆ ಬರಲಿದೆ ಹೀರೋ ಎಕ್ಸ್‌ಟ್ರಿಮ್ 200 ಆರ್..

ಹೀಗಾಗಿ ಹೊಸ ಬೈಕ್‌ಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, 17 ಇಂಚಿನ ಅಲಾಯ್ ಚಕ್ರಗಳು, ದೊಡ್ಡದಾದ ಹೆಡ್‌ಲ್ಯಾಂಪ್, ಮಸ್ಕ್ಯೂಲರ್ ಫ್ಯೂಲ್ ಟ್ಯಾಂಕ್ ಡಿಸೈನ್, ರಿರ್ ಪೆಂಡರ್, ಐದು ವಿವಿಧ ಬಣ್ಣಗಳ ಆಯ್ಕೆಯು ಹೊಸ ಬೈಕಿನ ಪ್ರಮುಖಾಂಶಗಳು.

ಎಫ್ಐ ಟೆಕ್ನಾಲಜಿಯೊಂದಿಗೆ ಬರಲಿದೆ ಹೀರೋ ಎಕ್ಸ್‌ಟ್ರಿಮ್ 200 ಆರ್..

ತಾಂತ್ರಿಕವಾಗಿ ಹೀರೋ ಎಕ್ಸ್‌ಟ್ರಿಮ್ 200ಆರ್ ಬೈಕ್ 200ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 18.1 ಬಿಹೆಚ್‍ಪಿ ಮತ್ತು 17.2 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಜೊತೆಗೆ ಪ್ರತೀ ಲೀಟರ್‍‍ಗೆ 39.9 ಮೈಲೇಜ್ ನೀಡುತ್ತದೆ.

ಎಫ್ಐ ಟೆಕ್ನಾಲಜಿಯೊಂದಿಗೆ ಬರಲಿದೆ ಹೀರೋ ಎಕ್ಸ್‌ಟ್ರಿಮ್ 200 ಆರ್..

ಹೀರೋ ಎಕ್ಸ್‌ಟ್ರಿಮ್ 200ಆರ್ ನೇಕೆಡ್ ಸ್ಟ್ರೀಟ್ ಫೈಟರ್ ಬೈಕ್ ಮುಂಭಾಗದಲ್ಲಿ 37ಎಮ್ಎಮ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೋಶಾಕ್ ಅಬ್ಸಾರ್ಬರ್ ಅನ್ನು ಪಡೆದುಕೊಂಡಿದ್ದು, ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 276ಎಮ್ಎಮ್ ಮತ್ತು ಹಿಂಭಾಗದಲ್ಲಿ 220ಎಮ್ಎಮ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಎಫ್ಐ ಟೆಕ್ನಾಲಜಿಯೊಂದಿಗೆ ಬರಲಿದೆ ಹೀರೋ ಎಕ್ಸ್‌ಟ್ರಿಮ್ 200 ಆರ್..

ಇದಲ್ಲದೆ ಈ ಬೈಕ್‍‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದ ಡಿಸ್ಕ್ ಬ್ರೇಕ್‍‍ನ ಬಳಿ ಯಾಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಅನ್ನು ಕೂಡ ಪಡೆದುಕೊಂಡಿರಲಿದೆ. ಮುಂಬರುವ ಏಪ್ರಿಲ್ 2019 ನಿಂದ 125ಸಿಸಿಗಿಂತ ಮೇಲ್ಪಟ್ಟ ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ ಅನ್ನು ಅಳವಡಿಸಲೇಬೇಕೆಂದು ಸರ್ಕಾರವು ಆದೇಶವನ್ನು ನೀಡಿದೆ.

ಎಫ್ಐ ಟೆಕ್ನಾಲಜಿಯೊಂದಿಗೆ ಬರಲಿದೆ ಹೀರೋ ಎಕ್ಸ್‌ಟ್ರಿಮ್ 200 ಆರ್..

ಹೀರೋ ಎಕ್ಸ್‌ಟ್ರಿಮ್ 200ಆರ್ ಫ್ಯುಯಲ್ ಇಂಜೆಕ್ಟೆಡ್ ವೇರಿಯಂಟ್ ಬೈಕ್ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ, ಈಗಾಗಲೆ ಲಭ್ಯವಿರುವ ಬಜಾಜ್ ಪಲ್ಸರ್ ಎನ್ಎಸ್200 ಮತ್ತು ಟಿವಿಎಸ್ ಅಪಾಚೆ ಆರ್‍‍‍ಟಿಆರ್ 2004ವಿ ಬೈಕ್‍‍ಗಳಿಗೆ ತೀವ್ರ ಪೈಪೋಟಿ ನೀಡಲಿದೆ ಮತ್ತು ಇವುಗಳಿಗಿಂತ ಕಡಿಮೆ ಬೆಲೆಗೆ ದೊರೆಯಲಿದೆ.

Most Read Articles

Kannada
Read more on hero motocorp
English summary
Hero Xtreme 200R To Get Fuel Injection System.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X