ಎಕ್ಸ್‌ಟ್ರಿಮ್ 200ಆರ್ ಬೈಕ್‍‍ನ ಬೆಲೆಯನ್ನು ಏರಿಸಿದ ಹೀರೋ ಮೋಟೋಕಾರ್ಪ್..

ಹೀರೋ ಮೋಟೊಕಾರ್ಪ್ ಸಂಸ್ಥೆಯು ಇತ್ತೀಚೆಗಷ್ಟೆ ತಮ್ಮ ಎಕ್ಸ್‌ಟ್ರಿಮ್ 200ಆರ್ ಅನ್ನು ಬಿಡುಗಡೆಗೊಳಿಸಿದ್ದು, ಇದೀಗ ಬೈಕಿನ ಬೆಲೆಯನ್ನು ಸಂಸ್ಥೆಯು ಏರಿಸಿದೆ. ಬಿಡುಗಡೆಗೊಂಡಾಗ ಈ ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 88,000 ಸಾವಿರದ ಬೆಲೆಯನ್ನು ಪಡೆದುಕೊಂಡಿದ್ದು, ಬೆಲೆ ಏರಿಕೆಯ ನಂತರ ರೂ 89,900 ಸಾವಿರಕ್ಕೆ ನಿಗದಿಪಡಿಸಲಾಗಿದೆ.

ಎಕ್ಸ್‌ಟ್ರಿಮ್ 200ಆರ್ ಬೈಕ್‍‍ನ ಬೆಲೆಯನ್ನು ಏರಿಸಿದ ಹೀರೋ ಮೋಟೋಕಾರ್ಪ್..

ಇಷ್ಟೆ ಅಲ್ಲದೇ ಹೀರೋ ಮೋಟೋಕಾರ್ಪ್ ಸಂಸ್ಥೆಯು ತಮ್ಮ ಎಕ್ಸ್‌ಟ್ರಿಮ್ 200ಆರ್ ಬೈಕ್‍ನ ಬೆಲೆ ಏರಿಕೆಯ ಕುರಿತಾಗಿ ತಮ್ಮ ಅಧಿಕೃತ ವೆಬ್‍‍ಸೈಟ್‍‍‍ನಲ್ಲಿಯು ಕೂಡಾ ಅಪ್ಡೇಟ್ ಮಾಡಲಾಗಿದ್ದು, ಬೈಕ್ ಬಿಡುಗಡೆಗೊಂಡಾಗಿನಿಂದಲೂ ಸಂಸ್ಥೆಯು ಎರಡನೆಯ ಬಾರಿ ಬೆಲೆ ಏರಿಕೆಯನ್ನು ಮಾಡಿದೆ.

ಎಕ್ಸ್‌ಟ್ರಿಮ್ 200ಆರ್ ಬೈಕ್‍‍ನ ಬೆಲೆಯನ್ನು ಏರಿಸಿದ ಹೀರೋ ಮೋಟೋಕಾರ್ಪ್..

ಹೀರೋ ಸಂಸ್ಥೆಯು ಕಮ್ಯೂಟರ್ ಬೈಕ್ ಪ್ರೇಮಿಗಳನ್ನು ಸೆಳೆಯುವ ಉದ್ದೇಶದೊಂದಿಗೆ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ಇದು ಹೀರೋ ಸಿಬಿಝೆಡ್ ಎಕ್ಸ್‌ಟ್ರಿಮ್ ಬೈಕಿನ ಮುಂದುವರೆದ ಮಾದರಿಯಾಗಿರಲಿದೆ. ಹೀಗಾಗಿ ಹೊಸ ಬೈಕಿನ ಮೇಲೆ ಭಾರೀ ನೀರಿಕ್ಷೆಗಳಿದ್ದು, 200ಸಿಸಿ ವಿಭಾಗದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಬೈಕ್ ಇದಾಗಿದೆ ಎನ್ನಬಹುದು.

ಎಕ್ಸ್‌ಟ್ರಿಮ್ 200ಆರ್ ಬೈಕ್‍‍ನ ಬೆಲೆಯನ್ನು ಏರಿಸಿದ ಹೀರೋ ಮೋಟೋಕಾರ್ಪ್..

ಎಂಜಿನ್ ಸಾಮರ್ಥ್ಯ

199 ಸಿಸಿ ಫೌರ್ ಸ್ಟೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು 18-ಬಿಎಚ್‌ಪಿ ಮತ್ತು 17.1-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಎಕ್ಸ್‌ಟ್ರಿಮ್ 200ಆರ್ ಬೈಕ್‍‍ನ ಬೆಲೆಯನ್ನು ಏರಿಸಿದ ಹೀರೋ ಮೋಟೋಕಾರ್ಪ್..

ಇನ್ನು ಹೊಸ ಬೈಕಿನಲ್ಲಿ ಹೆಡ್‌ಲೈಟ್ಸ್ ಜೊತೆಗೆ ಎಲ್ಇಡಿ ಪೈಲೆಟ್ ಲ್ಯಾಂಪ್ಸ್, ಎಲ್ಇಡಿ ಟೈಲ್ ಲೈಟ್ಸ್, ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಟೋನ್ ಗ್ರಾಫಿಕ್ಸ್ ಮತ್ತು ದೂರದ ಪ್ರಯಾಣದಲ್ಲೂ ಆರಾಮದಾಯಕವಾಗಿ ಕುಳಿತು ಸವಾರಿ ಮಾಡಬಲ್ಲ ಕೌಂಟರ್ಡ್ ಸೀಟುಗಳನ್ನು ಜೋಡಿಸಲಾಗಿದೆ.

ಎಕ್ಸ್‌ಟ್ರಿಮ್ 200ಆರ್ ಬೈಕ್‍‍ನ ಬೆಲೆಯನ್ನು ಏರಿಸಿದ ಹೀರೋ ಮೋಟೋಕಾರ್ಪ್..

ಸುರಕ್ಷಾ ಸಾಧನಗಳು

ಬೈಕ್ ಮುಂಭಾಗದಲ್ಲಿ 37-ಎಂಎಂ ಟೆಲಿಸ್ಕೋಪಿಕ್ ಸಸ್ಪೆಷನ್ ಹಾಗೂ 37-ಎಂಎಂ ಎಳು ಹಂತದಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದಾದ ಮೋನೋಶಾರ್ಕ್ ಸಸ್ಷೆಷನ್, 276-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 220-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಸುರಕ್ಷತೆಗಾಗಿ ಸಿಂಗಲ್ ಚಾನಲ್ ಎಬಿಎಸ್ ಟೆಕ್ನಾಲಜಿ ಅನ್ನು ಸಹ ಹೊಂದಿದೆ.

ಎಕ್ಸ್‌ಟ್ರಿಮ್ 200ಆರ್ ಬೈಕ್‍‍ನ ಬೆಲೆಯನ್ನು ಏರಿಸಿದ ಹೀರೋ ಮೋಟೋಕಾರ್ಪ್..

ಖರೀದಿಗೆ ಲಭ್ಯವಿರುವ ಬಣ್ಣಗಳು

ಒಟ್ಟು 5 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಪ್ಯಾಂಥರ್ ಬ್ಲ್ಯಾಕ್ ಜೊತೆ ಕೂಲ್ ಸಿಲ್ವರ್, ಬ್ಲ್ಯಾಕ್ ಆ್ಯಂಡ್ ರೆಡ್, ಸ್ಪೋರ್ಟ್ ರೆಡ್, ಚಾರ್ಕೋಲ್ ಗ್ರೇ ಜೊತೆ ಆರೇಂಜ್ ಮತ್ತು ಟೆಕ್ನೋ ಬ್ಲ್ಯೂ ಬಣ್ಣಗಳನ್ನ ಹೊಂದಿರಲಿದೆ.

ಎಕ್ಸ್‌ಟ್ರಿಮ್ 200ಆರ್ ಬೈಕ್‍‍ನ ಬೆಲೆಯನ್ನು ಏರಿಸಿದ ಹೀರೋ ಮೋಟೋಕಾರ್ಪ್..

ಈ ಮೂಲಕ 200ಸಿಸಿ ವಿಭಾಗದ ಬೈಕ್‌ಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಹೀರೋ ಹೊಸ ಬೈಕ್‌ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಬಜಾಜ್ ಪಲ್ಸರ್ 200ಎನ್ಎಸ್, ಕೆಟಿಎಂ ಡ್ಯೂಕ್ 200 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳಿಗೆ ಇದು ತೀವ್ರ ಪೈಪೋಟಿ ನೀಡುತ್ತಿದೆ.

More from DriveSpark

Article Published On: Wednesday, September 12, 2018, 17:49 [IST]
English summary
Hero Xtreme 200R Price Increased — Priced At Rs 89,900.
Read more on hero motocorp price hike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+