ಬರಲಿರುವ ಹೀರೋ ಎಕ್ಸ್‌ಟ್ರಿಮ್ 200ಆರ್ ಬೈಕಿನ ವಿಶೇಷತೆಗಳೇನು..?
ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ತನ್ನ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್‌ನ್ನು ಕಳೆದ ಜನವರಿಯಲ್ಲಿ ಅನಾವರಣಗೊಳಿಸಿದೆ.
ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ತನ್ನ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್‌ನ್ನು ಕಳೆದ ಜನವರಿಯಲ್ಲಿ ಅನಾವರಣಗೊಳಿಸಿದ್ದು, ಮಧ್ಯಮ ಗಾತ್ರದ ಸೂಪರ್ ಬೈಕ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ.

ಎಕ್ಸ್‌ಟ್ರಿಮ್ 200ಆರ್ ಬೈಕ್ ಹೀರೋ ಸಂಸ್ಥೆಯ ಮೊದಲ 200ಸಿಸಿ ಬೈಕ್ ಮಾದರಿಯಾಗಿದ್ದು, ಯುವಸಮುದಾಯವನ್ನು ಸೆಳೆಯುವ ಉದ್ದೇಶದಿಂದ ಈ ಬೈಕನ್ನು ನಿರ್ಮಿಲಾಗಿದೆ. ಅಲ್ಲದೆ ಈ ಬೈಕ್ ಹೀರೋ ಸಿಬಿಝೆಡ್ ಎಕ್ಸ್‌ಟ್ರಿಮ್ ಬೈಕಿನ ಮುಂದುವರೆದ ಮಾದರಿಯಾಗಿರಲಿದೆ.

ಎಕ್ಸ್‌ಟ್ರಿಮ್ 200ಆರ್ ಬೈಕ್ ಆಕರ್ಷಕ ಗ್ರಾಫ್ಕಿಕ್ಸ್, ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್, ಬ್ಲಾಕೆಡ್-ಔಟ್ ಎಲಿಮೆಂಟ್ ಮತ್ತು ಎಲ್ಇಡಿ ಲೈಟ್ ಗಳನ್ನು ಹೊಂದಿದ್ದು, ಅಡ್ವೆಂಚರ್ ಬೈಕ್ ಎಕ್ಸ್ ಪಲ್ಸ್ 200 ನಂತರ ಎರಡನೇ ಸ್ಥಾನದಲ್ಲಿ ನಿಲ್ಲಲಿದೆ.

ಬೈಕಿನ ವೈಶಿಷ್ಟ್ಯತೆಗಳು
ಇನ್ನು ಹೊಸ ಬೈಕ್ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೇ ಎಲ್ಇಡಿ ಪಿಲೊಟ್ ಲ್ಯಾಂಪ್, ಅಗಲವಾದ ಹೆಡ್ ಲೈಟ್, ಸಣ್ಣದಾದ ಬಿಸೋರ್, ಬೈಕಿನ ರೂಪವನ್ನು ಉತ್ತಮಗೊಳಿಸಲು ಸರಿಹೊಂದುವಂತಹ ಮಿರರ್ ಗಳನ್ನು ಹೊಂದಿದೆ. ಹಾಗೆಯೇ ಮಸ್ಕ್ಯೂಲರ್ ಫ್ಯೂಲ್ ಟ್ಯಾಂಕ್ ಡಿಸೈನ್, ರಿರ್ ಪೆಂಡರ್, ವೊರ್ಟೆಕ್ಸ್ ಶೇಪ್ ಹೊಂದಿರುವಂತಹ 5-ಸ್ಪೋಕ್ ಅಲಾಯ್ ವೀಲ್ ಗಳನ್ನು ಪಡೆದಿದೆ.

ಬೈಕಿನ ಟೈಲ್ ವಿಭಾಗವು ಶಾರ್ಪ್ ಮತ್ತು ಪಾಯಿಂಟೆಡ್ ಡಿಸೈನ್ ಹೊಂದಿರುವಂತಹ ಎಲ್ಇಡಿ ಟೈಲ್ ಲೈಟ್‌ನ್ನು ಪಡೆದಿದ್ದು, ಸ್ಪ್ಲಿತ್ ಗ್ರಾಬ್ ರೈಲ್ ಗಳು ಟೈಲ್ ಸೆಕ್ಷನಿನ ವಿನ್ಯಾಸವನ್ನು ಕೂಡ ಹೊಂದಿದೆ.

ಎಕ್ಸ್‌ಟ್ರಿಮ್ 200ಆರ್ ಬೈಕ್ 37ಎಂಎಂ ಮುಂಭಾಗದ ಹಾಗು ಹಿಂಭಾಗದಲ್ಲಿ ಮೋನೊಶಾರ್ಕ್ ಸಸ್ಪೆಷನ್ ಅನ್ನು ಹೊಂದಿದ್ದು, 17-ಇಂಚಿನ ಅಲಾಯ್ ಚಕ್ರಗಳನ್ನು ಪದೆದಿದೆ. ಇದಲ್ಲದೆ 276ಎಂಎಂ ಮುಂಭಾಗದ ಡಿಸ್ಕ್ ಮತ್ತಿ 220ಎಂಎಂ ಹಿಂಭಾಗದ ಡಿಸ್ಕ್ ಮತ್ತು ಮುಂದೆ ಸಿಂಗಲ್ ಚಾನೆಲ್ ಎಬಿಎಸ್ ಪಡೆದಿದೆ.

ಎಂಜಿನ್ ಸಾಮರ್ಥ್ಯ
200 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಗಳು 18.1-ಬಿಎಚ್‌ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಮೈಲೇಜ್ ಮತ್ತು ಬೆಲೆ(ಅಂದಾಜು)
ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಎಕ್ಸ್‌ಟ್ರಿಮ್ ಬೈಕ್ ಪ್ರತಿ ಲೀಟರ್ ಪೆಟ್ರೋಲ್‌ಗೆ 40 ಕಿಮಿ ಮೈಲೇಜ್ ಹೊಂದಿದ್ದು, ಹೊಸ ಬೈಕಿನ ಬೆಲೆಯು 1.15 ರಿಂದ 1.25 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಇನ್ನು ಮಾರುಕಟ್ಟೆಯಲ್ಲಿ ಎಕ್ಸ್‌ಟ್ರಿಮ್ 200ಆರ್ ಬೈಕ್ ಬಜಾಜ್ ಪಲ್ಸರ್ ಎನ್ಎಸ್200, ಟಿವಿಎಸ್ ಅಪಾಚೆ ಆರ್ ಟಿಆರ್ 200 ಮತ್ತು ಕೆಟಿಎಮ್ ಡ್ಯುಕ್ ಬೈಕುಗಳಿಗೆ ಪೈಪೋಟಿಯನ್ನು ನೀಡಲಿದೆ.


Click it and Unblock the Notifications