ಫಸ್ಟ್ ಲುಕ್ ರಿವ್ಯೂ- ಸ್ಕೂಟರ್ ಪ್ರಿಯರನ್ನು ರಂಜಿಸಿದ ಹೋಂಡಾ ಆಕ್ಟಿವಾ 5ಜಿ

ಸ್ಕೂಟರ್ ಮಾರಾಟದಲ್ಲಿ ಪ್ರಾಬಲ್ಯ ಸಾಧಿಸಿರುವ ಹೋಂಡಾ ಮೋಟಾರ್ಸ್ ಇದೀಗ ಮತ್ತೊಂದು ಸ್ಕೂಟರ್ ಸರಣಿಯನ್ನು ಹೊರತರುತ್ತಿದೆ. ಜನಪ್ರಿಯ ಜಿ ಸರಣಿಯ ಆಕ್ಟಿವಾ 5ಜಿ ಅಭಿವೃದ್ಧಿ ಮಾಡಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

By Praveen

ಸ್ಕೂಟರ್ ಮಾರಾಟದಲ್ಲಿ ಪ್ರಾಬಲ್ಯ ಸಾಧಿಸಿರುವ ಹೋಂಡಾ ಮೋಟಾರ್ಸ್ ಇದೀಗ ಮತ್ತೊಂದು ಸ್ಕೂಟರ್ ಸರಣಿಯನ್ನು ಹೊರತರುತ್ತಿದೆ. ಜನಪ್ರಿಯ ಜಿ ಸರಣಿಯ ಆಕ್ಟಿವಾ 5ಜಿ ಅಭಿವೃದ್ಧಿ ಮಾಡಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಫಸ್ಟ್ ಲುಕ್ ರಿವ್ಯೂ ಬಗೆಗೆ ಇಲ್ಲಿ ಚರ್ಚಿಸಲಾಗಿದೆ.

ಫಸ್ಟ್ ಲುಕ್ ರಿವ್ಯೂವ್- ಸ್ಕೂಟರ್ ಪ್ರಿಯರನ್ನು ರಂಜಿಸಿದ ಹೋಂಡಾ ಆಕ್ಟಿವಾ 5ಜಿ

ಆಧುನಿಕ ತಂತ್ರಜ್ಞಾನಗಳ ಪ್ರೇರಿತ ಹೋಂಡಾ ಆಕ್ಪಿವಾ 5ಜಿ ಸ್ಕೂಟರ್‌ಗಳು ಭಾರತದಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗುತ್ತಿದ್ದು, ಇದಕ್ಕೂ ಮುನ್ನ ದೆಹಲಿಯ ಬಳಿಯ ನೋಯ್ಡಾದಲ್ಲಿ ನಡೆಯುತ್ತಿರುವ 2018ರ ಇಂಡಿಯನ್ ಆಟೋ ಎಕ್ಸ್ ಪೋದಲ್ಲಿ ಆಕ್ಟಿವಾ 5ಜಿ ಪ್ರದರ್ಶನಗೊಳಿಸಲಾಗಿದೆ.

Recommended Video

New Maruti Swift Launch: Price; Mileage; Specifications; Features; Changes
ಫಸ್ಟ್ ಲುಕ್ ರಿವ್ಯೂವ್- ಸ್ಕೂಟರ್ ಪ್ರಿಯರನ್ನು ರಂಜಿಸಿದ ಹೋಂಡಾ ಆಕ್ಟಿವಾ 5ಜಿ

ಆಕ್ಟಿವಾ ಸರಣಿಗಳಲ್ಲಿ ಇದೀಗ ಹೊಸ ಹೊಸ ತಂತ್ರಜ್ಞಾನಗಳ ಪ್ರೇರಣೆಯ 5ಜಿ ಆವೃತ್ತಿಗಳು ಹೊರಬರುತ್ತಿದ್ದು, ವಿನೂತನ ಬಣ್ಣಗಳ ಆಯ್ಕೆ, ಫುಲ್ ಎಲ್ಇಡಿ ಹೆಡ್‌ಲೈಟ್ ಸೇರಿದಂತೆ ಹಲವು ಬದಲಾವಣೆ ಹೊಂದಿರುವುದು ಬಹಿರಂಗವಾಗಿದೆ.

ಫಸ್ಟ್ ಲುಕ್ ರಿವ್ಯೂವ್- ಸ್ಕೂಟರ್ ಪ್ರಿಯರನ್ನು ರಂಜಿಸಿದ ಹೋಂಡಾ ಆಕ್ಟಿವಾ 5ಜಿ

ಬರೋಬ್ಬರಿ 108 ಕೆಜಿ ತೂಕ ಹೊಂದಿರುವ ಆಕ್ಟಿವಾ 5ಜಿ ಆವೃತ್ತಿಗಳು ಈ ಹಿಂದಿನ 4ಜಿ ಆವೃತ್ತಿ ಮಾದರಿಯಲ್ಲೇ 1,761 ಎಂಎಂ ಉದ್ದ, 710 ಎಂಎಂ, 1,149 ಎಂಎಂ ಅಗಲವಾಗಿದ್ದು, 1,238 ಎಂಎಂ ವೀಲ್ಹ್ ಬೇಸ್ ಮತ್ತು 153 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ.

ಫಸ್ಟ್ ಲುಕ್ ರಿವ್ಯೂವ್- ಸ್ಕೂಟರ್ ಪ್ರಿಯರನ್ನು ರಂಜಿಸಿದ ಹೋಂಡಾ ಆಕ್ಟಿವಾ 5ಜಿ

ಎಂಜಿನ್ ಸಾಮರ್ಥ್ಯ

ಆಕ್ಟಿವಾ 4ಜಿ ಸ್ಕೂಟರ್‌ಗಳಿಂದಲೇ ಎರವಲು ಪಡೆಯಲಾಗಿರುವ 109.19 ಸಿಸಿ ಎಂಜಿನ್ ಹೊಂದಿರುವ ಆಕ್ಟಿವಾ 5ಜಿ ಆವೃತ್ತಿಗಳು, 8-ಬಿಎಚ್‌ಪಿ, 9-ಎನ್ಎಂ ಟಾರ್ಕ್ ಉತ್ಪಾದನಾ ಶೈಲಿಯನ್ನು ಹೊಂದಿವೆ.

ಫಸ್ಟ್ ಲುಕ್ ರಿವ್ಯೂವ್- ಸ್ಕೂಟರ್ ಪ್ರಿಯರನ್ನು ರಂಜಿಸಿದ ಹೋಂಡಾ ಆಕ್ಟಿವಾ 5ಜಿ

ಜೊತೆಗೆ 5.3 ಲೀಟರ್ ಇಂಧನ ಟ್ಯಾಂಕ್, 130 ಎಂಎಂ ಡ್ರಮ್ ಬ್ರೇಕ್, ಕೊಂಬಿ ಬ್ರೇಕ್ ಸಿಸ್ಟಂ, ನ್ಯೂ ಕ್ರೋಮ್ ಹೈಲೆಟ್ಸ್, ಮೆಟಲ್ ಮಫ್ಲರ್ ಪ್ರೋಜೆಕ್ಟರ್ ಮತ್ತು ಸಾಂಪ್ರದಾಯಿಕ ಬಣ್ಣಗಳೊಂದಿಗೆ ಹೊಸ ರೂಪದಲ್ಲಿ ಅಭಿವೃದ್ಧಿಪಡಿಸಲಾದ ಎರಡು ಪ್ರಮುಖ ಬಣ್ಣಗಳಲ್ಲಿ ಲಭ್ಯವಿರಲಿದೆ.

ಫಸ್ಟ್ ಲುಕ್ ರಿವ್ಯೂವ್- ಸ್ಕೂಟರ್ ಪ್ರಿಯರನ್ನು ರಂಜಿಸಿದ ಹೋಂಡಾ ಆಕ್ಟಿವಾ 5ಜಿ

ಲಭ್ಯವಿರುವ ಹೊಸ ಬಣ್ಣಗಳು

ಸದ್ಯ ಲಭ್ಯವಿರುವ 6 ಬಣ್ಣಗಳ ಜೊತೆ ಜೊತೆಗೆ ಹೊಸದಾಗಿ ಸಿದ್ದಪಡಿಸಿರುವ ಡ್ಯಾಜೆಲ್ ಯೆಲ್ಲೋ ಮೆಟಾಲಿಕ್ ಮತ್ತು ಪರ್ಲ್ ಸ್ಪ್ಯಾರ್ಟನ್ ರೆಡ್‌ನಲ್ಲೂ ಕೂಡಾ ಖರೀದಿ ಮಾಡಬಹುದಾಗಿದೆ.

ಫಸ್ಟ್ ಲುಕ್ ರಿವ್ಯೂವ್- ಸ್ಕೂಟರ್ ಪ್ರಿಯರನ್ನು ರಂಜಿಸಿದ ಹೋಂಡಾ ಆಕ್ಟಿವಾ 5ಜಿ

ಹೊಸತು ಏನಿದೆ ಗುರು?

ಮೊದಲ ಬಾರಿಗೆ 110 ಸಿಸಿ ಸ್ಕೂಟರ್ ಮಾದರಿಗಳಲ್ಲಿ ಫುಲ್ ಎಲ್ಇಡಿ ಹೆಡ್‌ಲೈಟ್ ನೀಡಲಾಗಿದ್ದು, ಡಿಜಿಟಲ್ ಅನ್‌ಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇಕೋ ಸ್ಪೀಡ್, ಸರ್ವಿಸ್ ಡ್ಯೂ ಇಂಡಿಕೇಟರ್ ಸಹ ಇದರಲ್ಲಿದೆ.

ಫಸ್ಟ್ ಲುಕ್ ರಿವ್ಯೂವ್- ಸ್ಕೂಟರ್ ಪ್ರಿಯರನ್ನು ರಂಜಿಸಿದ ಹೋಂಡಾ ಆಕ್ಟಿವಾ 5ಜಿ

ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಈ ಸ್ಕೂಟರಿನಲ್ಲಿರುವ ನಾಲ್ಕು ಬಗೆಯ ಲಾಕಿಂಗ್ ಓಪನರ್ ಸಿಸ್ಟಂಗಳಿಗೆ ಒಂದೇ ಬಗೆಯ ಓಪನರ್ ಸ್ವಿಚ್ ನೀಡಲಾಗಿದ್ದು, ಹಳೆಯ ಮಾದರಿಗಳಿಂದ ಹೆಚ್ಚಿನ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಫಸ್ಟ್ ಲುಕ್ ರಿವ್ಯೂವ್- ಸ್ಕೂಟರ್ ಪ್ರಿಯರನ್ನು ರಂಜಿಸಿದ ಹೋಂಡಾ ಆಕ್ಟಿವಾ 5ಜಿ

ಬಿಡುಗಡೆ ಮತ್ತು ಬೆಲೆ (ಅಂದಾಜು)

ಭಾರತದಲ್ಲಿ 2ನೇ ತ್ರೈಮಾಸಿಕ ಅವಧಿಗೆ ಬಿಡುಗಡೆಯಾಗಲಿರುವ ಆಕ್ಟಿವಾ 5ಜಿ ಆವೃತ್ತಿಗಳು ದೆಹಲಿ ಎಕ್ಸ್ ಶೋರಂ 53 ಸಾವಿರ ಬೆಲೆ ಹೊಂದುವ ಸಾಧ್ಯತೆಗಳಿದ್ದು, ಪ್ರಿಮಿಯಂ ಸ್ಕೂಟರ್ ಗ್ರಾಜಿಯಾಗೆ ಸಮನಾಗಿರಲಿದೆ.

ಫಸ್ಟ್ ಲುಕ್ ರಿವ್ಯೂವ್- ಸ್ಕೂಟರ್ ಪ್ರಿಯರನ್ನು ರಂಜಿಸಿದ ಹೋಂಡಾ ಆಕ್ಟಿವಾ 5ಜಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಅತ್ಯುತ್ತಮ ಕಾರ್ಯಕ್ಷಮತೆ ಮೂಲಕ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಆಕ್ಟಿವಾ ಸರಣಿಗಳು ತನ್ನದೇ ಆದ ಬೇಡಿಕೆ ಹೊಂದಿದ್ದು, ಇದೀಗ ಹೊಸ ತಂತ್ರಜ್ಞಾನ ಪ್ರೇರಿತ ಆಕ್ಟಿವಾ 5ಜಿ ಆವೃತ್ತಿಯು ಬಿಡುಗಡೆಯಾಗುತ್ತಿರುವುದು ನಿಜಕ್ಕೂ ಸಂಚಲನ ಸೃಷ್ಠಿಸಲಿದೆ.

Article Published On: Wednesday, February 14, 2018, 13:45 [IST]
English summary
Honda Activa 5G First Look Review.
Read more on honda scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+